ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ''''ಕಾವೇರಿ ಚಾಂಪ್'''' ಆಘಾತ!

KannadaprabhaNewsNetwork |  
Published : Oct 16, 2024, 12:53 AM IST
 (15ಎನ್.ಆರ್.ಡಿ4 ಜಮೀನಗೆ ಬಿತ್ತನೆ ಮಾಡಿದ ಕಾವೇರಿ ಚಾಂಪ ಸೂರ್ಯಕಾಂತಿ ಬೀಜ ಮೊಳಕೆ ಒಡದಿಲ್ಲವೆಂದು ರೈತರು ಪ್ರತಿಭಟಿನೆ ಮಾಡುತ್ತಿದ್ದಾರೆ.)  | Kannada Prabha

ಸಾರಾಂಶ

ಉತ್ತಮ ಮಳೆ ಆಗಿದ್ದರಿಂದ ತಾಲೂಕಿನ ರೈತರು ಕಾವೇರಿ ಚಾಂಪ್ ಸೂರ್ಯಕಾಂತಿ ಬೀಜ ಬಿತ್ತನೆ ಮಾಡಿ 20 ದಿನ ಗತಿಸಿದರೂ ಬೀಜ ಮೊಳಕೆಯೊಡೆಯದಿರುವುದರಿಂದ ರೈತ ಸಮುದಾಯಕ್ಕೆ ದಿಕ್ಕುತೋಚದಾಗಿದೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: ಪ್ರಸಕ್ತ ವರ್ಷ ರೈತರು ಹಿಂಗಾರು ಹಂಗಾಮಿನಲ್ಲಿ "ಕಾವೇರಿ ಚಾಂಪ್ ಸೂರ್ಯಕಾಂತಿ ಬೀಜ " ಬಿತ್ತನೆ ಮಾಡಿದ್ದು, ಬೀಜ ಮೊಳಕೆಯೊಡೆಯದೆ ರೈತರಿಗೆ ಅಪಾರ ಹಾನಿಯುಂಟಾಗಿದೆ.

ಉತ್ತಮ ಮಳೆ ಆಗಿದ್ದರಿಂದ ತಾಲೂಕಿನ ರೈತರು ಕಾವೇರಿ ಚಾಂಪ್ ಸೂರ್ಯಕಾಂತಿ ಬೀಜ ಬಿತ್ತನೆ ಮಾಡಿ 20 ದಿನ ಗತಿಸಿದರೂ ಬೀಜ ಮೊಳಕೆಯೊಡೆಯದಿರುವುದರಿಂದ ರೈತ ಸಮುದಾಯಕ್ಕೆ ದಿಕ್ಕುತೋಚದಾಗಿದೆ.

20 ಸಾವಿರ ಖರ್ಚು

ಈ ವರ್ಷ ಮಲಪ್ರಭಾ ಜಲಾಶಯ ಭರ್ತಿಯಾಗಿದೆ. ನೀರಾವರಿ ಜಮೀನಿಗೆ ಕನಿಷ್ಠ 6 ತಿಂಗಳ ಕಾಲ ಕಾಲುವೆಗಳ ಮೂಲಕ ನೀರು ಪೂರೈಕೆ ಆಗಬಹುದೆಂದು ರೈತರು ಪ್ರತಿ ಎಕರೆಗೆ ₹20 ಸಾವಿರ ಖರ್ಚು ಮಾಡಿ ಕಾವೇರಿ ಚಾಂಪ್ ಸೂರ್ಯಕಾಂತಿ ಬೀಜ ಬಿತ್ತನೆ ಮಾಡಿದ್ದು, ಸಂಪೂರ್ಣ ನಷ್ಟವಾಗಿದೆ.

ಪರಿಹಾರಕ್ಕೆ ಆಗ್ರಹ

ಉತ್ತಮ ಫಸಲು ಬರುತ್ತದೆ ಎಂದು 1 ಪಾಕೆಟ್‌ ಕಾವೇರಿ ಚಾಂಪ್ ಸೂರ್ಯಕಾಂತಿ ಬೀಜಕ್ಕೆ ₹2000ರಿಂದ ₹2200 ನೀಡಿ ಖರೀದಿ ಮಾಡಿ ಬಿತ್ತನೆ ಮಾಡಿದ್ದೇವೆ. ಆದರೆ, ಬೀಜ ಮೊಳಕೆಯೊಡೆದಿಲ್ಲ. ಆದ್ದರಿಂದ ಕಂಪನಿ ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಪರಿಹಾರ ನೀಡದಿದ್ದರೆ ಕಂಪನಿ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಗದಗ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನಾ ಅಧ್ಯಕ್ಷ ಬಸವರಾಜ ಸಾಬಳೆ ಎಚ್ಚರಿಕೆ ನೀಡಿದ್ದಾರೆ.

ಪರಿಶೀಲನೆ

ಹಿಂಗಾರು ಹಂಗಾಮಿನಲ್ಲಿ ಕಾವೇರಿ ಕಂಪನಿಯ ಸೂರ್ಯಕಾಂತಿ ಬೀಜ ಬಿತ್ತನೆ ಮಾಡಿದ ಭೈರನಹಟ್ಟಿ, ಕೊಣ್ಣೂರು, ಶಿರೋಳ, ಕಪ್ಲಿ, ಕಲ್ಲಾಪುರ ಗ್ರಾಮಗಳ ರೈತರು ನಮಗೆ ದೂರು ನೀಡಿದ್ದಾರೆ. ಈ ದೂರು ಅನ್ವಯಿಸಿ ಕೃಷಿ ವಿಶ್ವವಿದ್ಯಾಲಯದ ಬೀಜ ತಜ್ಞರಿಗೆ ಪತ್ರ ಬರೆದು ಜಮೀನು ಪರಿಶೀಲನೆ ಮಾಡಲು ಮನವಿ ಮಾಡಿದ್ದೇವೆ.

ಮಂಜುನಾಥ ಜನಮಟ್ಟಿ, ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌