ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಪ್ರಾಧಿಕಾರಕ್ಕೆ ತಾವು ಅಧ್ಯಕ್ಷರಿದ್ದ ವೇಳೆ ಸಿಡಿಪಿ ಯೋಜನೆ ರೂಪಿಸಿ, ಸರ್ಕಾರದಿಂದ ಅನುಮೋದನೆ ಪಡೆಯಲಾಗಿತ್ತು. ಇದೀಗ ಪ್ರಾಧಿಕಾರದ ನೂತನ ಆಡಳಿತವು ಹೊಸ ಸಿಡಿಪಿ ಯೋಜನೆ ತಯಾರಿಸಿ, ಆಕ್ಷೇಪಣೆ ಆಹ್ವಾನಿಸಿದ್ದು, ವಸತಿ ಯೋಜನೆಗೆ ಮೀಸಲಿಟ್ಟಿದ್ದ ಜಮೀನನ್ನು ಕೈಗಾರಿಕೆಗಳಿಗೆ ನೀಡಲು ಹೊರಟಿದೆ ಎಂದು ದೂರಿದರು.
ಮುಖ್ಯರಸ್ತೆಗೆ ಸಂಪರ್ಕಿಸುವ ರಸ್ತೆಗಳ ಅಳತೆಯನ್ನೇ ಕಡಿತಗೊಳಿಸಿದೆ. ಈಗಿನ ದೂಡಾ ಆಡಳಿತಕ್ಕೆ ದೂರದೃಷ್ಟಿಯೇ ಇಲ್ಲದಂತಾಗಿದೆ. ತಮ್ಮ ಅವಧಿಯಲ್ಲಿ ಅನುಮೋದಿತ ಮಹಾ ಯೋಜನೆಯ ನಕ್ಷೆ ಪ್ರಕಾರ ಯಾವ ಉದ್ದೇಶಕ್ಕೆ ಜಮೀನಿದ್ದವು, ಅವುಗಳನ್ನು 2 ವರ್ಷದೊಳಗೆ ಯಾವುದೇ ಬದಲಾವಣೆಯಾಗದಂತೆ, 2 ವರ್ಷದ ನಂತರ ಸರ್ಕಾರದ ಅನುಮೋದನೆಯೊಂದಿಗೆ ಉದ್ದೇಶ ಬದಲಾವಣೆಗೆ ಅರ್ಜಿ ಸಲ್ಲಿಸಿ ಅನುಮೋದನೆಗೊಂಡರೆ ಮಾತ್ರ ಬದಲಾದ ಉದ್ದೇಶಕ್ಕೆ ಬಳಸುವ ಷರತ್ತು ವಿಧಿಸಲಾಗಿತ್ತು ಎಂದು ತಿಳಿಸಿದರು.ಅನುಮೋದಿತ ಮಹಾಯೋಜನೆ ನಕ್ಷೆಯು 20 ವರ್ಷದ ದೂರದೃಷ್ಟಿಯಿಂದ ಅನುಮೋದಿಸಲಾಗಿತ್ತು. ಈಗಾಗಲೇ ವಸತಿ ಪ್ರದೇಶದ ಪಕ್ಕದ ಜಮೀನುಗಳ ಮಾಲೀಕರು ಉದ್ದೇಶಿತ ವಸತಿ ಯೋಜನೆ ಜಮೀನನ್ನು ಕೈಗಾರಿಕಾ ಉದ್ದೇಶಕ್ಕೆ ಬದಲಾಯಿಸದಂತೆ ಪ್ರಾಧಿಕಾರಕ್ಕೆ ತಕರಾರು ಮನವಿ ಸಲ್ಲಿಸಿರುತ್ತಾರೆ ಎಂದರು.
ಮಾಜಿ ಮೇಯರ್‌ಗಳಾದ ಕೆ.ಆರ್.ವಸಂತಕುಮಾರ, ಎಸ್.ಟಿ.ವೀರೇಶ, ಹಿರಿಯ ಮುಖಂಡರಾದ ಕೊಂಡಜ್ಜಿ ಜಯಪ್ರಕಾಶ, ಪಾಲಿಕೆ ಮಾಜಿ ಸದಸ್ಯರಾದ ಎಚ್.ಎನ್.ಶಿವಕುಮಾರ, ಆರ್.ಶಿವಾನಂದ, ಕುಮಾರ, ಸುರೇಶ ಗಂಡುಗಾಳೆ, ಶಿವರಾಜ ಪಾಟೀಲ ಇತರರು ಇದ್ದರು.
ದಾವಣಗೆರೆಯಲ್ಲಿ ಟಿ.ದಾಸಕರಿಯಪ್ಪ ದೂಡಾ ಅಧ್ಯಕ್ಷರಾಗಿದ್ದ 1995-96ರಲ್ಲಿ ಜೆ.ಎಚ್.ಪಟೇಲ್ ಬಡಾವಣೆ ನಿರ್ಮಾಣವಾಗಿದ್ದು, ಆದರೆ ಈಗಿನ ನಿಯಮಾನುಸಾರ ಖಾಸಗಿ ಡೆವಲಪರ್‌ಗಳು ಅನುಮೋದನೆ ಪಡೆದ ಬಡಾವಣೆಗಳು ಸಾರ್ವಜನಿಕರಿಗಾಗಲೀ, ಮುಂದಿನ ಪೀಳಿಗೆಗಾಗಲೀ ಅನುಕೂಲರವಾಗಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ, ಪಾಲಿಕೆ ಮಾಜಿ ಸದಸ್ಯ ಶಿವನಹಳ್ಳಿ ರಮೇಶ ದೂರಿದರು.