ಮೋದಿ, ಶಾ ಆಣತಿಯಂತೆ ಸಿಇಸಿ ಕಾರ್ಯ: ಡಾ.ಮಲ್ಲಿಕಾರ್ಜುನ ಖರ್ಗೆ

KannadaprabhaNewsNetwork |  
Published : Oct 12, 2026, 01:15 AM IST
ಬೆಳಗಾವಿ  | Kannada Prabha

ಸಾರಾಂಶ

ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಇಬ್ಬರೂ ಸೇರಿ ಪ್ರಜಾಪ್ರಭುತ್ವ ಅಳಿಸಿ ಹಾಕುವ ಮನಸ್ಥಿತಿಯಲ್ಲಿದ್ದು, ಅವರ ಆಣತಿಯಂತೆ ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್‌ ಕೆಲಸ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಕರ್ಜುನಾ ಖರ್ಗೆ ದೂರಿದರು.

ಕನ್ನಡಪ್ರಭ ವಾರ್ತೆ ಕಲಬುರಗಿಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಇಬ್ಬರೂ ಸೇರಿ ಪ್ರಜಾಪ್ರಭುತ್ವ ಅಳಿಸಿ ಹಾಕುವ ಮನಸ್ಥಿತಿಯಲ್ಲಿದ್ದು, ಅವರ ಆಣತಿಯಂತೆ ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್‌ ಕೆಲಸ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಕರ್ಜುನಾ ಖರ್ಗೆ ದೂರಿದರು.

ಕಲಬುರಗಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಇವಿಎಂ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ಕೊಟ್ಟಾಗ ಕೆಲವರು ಅದರ ಬಗ್ಗೆ ತಮಾಷೆ ಮಾಡಿದ್ದರು. ಈಗ ಕೇಂದ್ರ ಚುನಾವಣಾ ಆಯೋಗದ ಇಬ್ಬರು ಸದಸ್ಯರೇ ಚುನಾವಣೆಯಲ್ಲಿ ಮಿಸ್ ಮ್ಯಾನೆಜ್ಮೆಂಟ್ ಆಗುತ್ತದೆ, ಮತ ಕಳ್ಳತನ ಆಗುತ್ತದೆ, ಓಟ್ ಬದಲಾವಣೆ ಆಗುತ್ತದೆ ಅಂತ ಬಹಿರಂಗವಾಗಿ ಮಾತನಾಡಿದ್ದಾರೆ ಎಂದು ಆತಂಕ ಹೊರಹಾಕಿದರು.

ಇಂತಹ ಹಲವು ಸಂಗತಿಗಳು ಹೊರಬಂದಮೇಲೆಯೇ ರಾಹುಲ್ ಗಾಂಧಿ ಪ್ರತಿಭಟನೆ ಶುರು ಮಾಡಿದರು. ಆಳಂದ ಸೇರಿದಂತೆ ನಮ್ಮ ರಾಜ್ಯದಲ್ಲಿ ಮತಗಳ್ಳತನ ಯತ್ನಗಳು ನಡೆದಿವೆ. ಈ ಮೊದಲಿನಿಂದಲೂ ರಾಹುಲ್ ಗಾಂಧಿ ಅವರು ಇದನ್ನು ಹೇಳುತ್ತಲೇ ಬಂದಿದ್ದರು. ಅದರು ಕೂಡ ಕೇಂದ್ರ ಚುನಾವಣಾ ಆಯೋಗ, ಕೇಂದ್ರ ಸರ್ಕಾರ ಕೇಳಲಿಲ್ಲವೆಂದು ಖರ್ಗೆ ದೂರಿದರು.

ಈ ವಿಷಯ ಈಗ ಜನರ ಗಮನಕ್ಕೆ ತರಲು ನಾವು ಇಂಡಿಯಾ ಅಲಯನ್ಸ್ ಸೇರಿ ಪ್ರತಿಭಟನೆ ಶುರು ಮಾಡಿದ್ದೇವೆ. ರಾಹುಲ್ ಗಾಂಧಿ ಮಾತು ಸತ್ಯ ಇದೆ ಎನ್ನುವುದು ಗೊತ್ತಾಗಿ ಅನೇಕ ಯುವಕರೂ ಸಹ ಹೋರಾಟಕ್ಕೆ ಬೆಂಬಲಿಸುತ್ತಿದ್ದಾರೆ. ಆದರೆ ಮೋದಿ , ಅಮಿತ್ ಶಾ ಈ ಹೋರಾಟ ಸದೆಬಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಡಾ.ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ಎಮರ್ಜನ್ಸಿ ಕಾಲದಲ್ಲಿ ನಾನು ಮಂತ್ರಿಯಾಗಿದ್ದವನು .ಆ ಕಾಲದಲ್ಲೂ ಈ ರೀತಿ ಪರಿಸ್ಥಿತಿ ಇರಲಿಲ್ಲ, ಎಮರ್ಜನ್ಸಿಯಲ್ಲೂ ಎಲ್ಲವೂ ಸುರುಳಿತವಾಗಿತ್ತು. ಆದ್ರೆ ಈಗ ಅಘೋಷಿತ ಎಮರ್ಜನ್ಸಿ ಜಾರಿಯಲ್ಲಿದೆ. ರೋಡ್, ಟ್ರೇನ್, ಬಸ್, ಇಂಟರ್ನೆಟ್ ಬಂದ್ ಮಾಡುತ್ತಿದ್ದಾರೆ. ಮೊಬೈಲ್ ಸೀಜ್, ಯುವಕರ ಅರೆಸ್ಟ್, ಪ್ರತಿಭಟನಾಕಾರರ ಮೇಲೆ ಹಲ್ಲೆ ಅಂತಹ ಕೆಲಸ ಪೊಲೀಸರು ಮಾಡಿದ್ದಾರೆ. ಇದಕ್ಕೆಲ್ಲ ಮೋದಿ, ಶಾ ಹೊಣೆಗಾರರು ಎಂದರು.

ಕೇಂದ್ರವು ಓಟ್ ಕಳ್ಳತನಕ್ಕೆ ಎಷ್ಟು ಪ್ಲ್ಯಾನ್ ಮಾಡಿದೆ ಅಂದರೆ ಜ್ಞಾನೇಶಕುಮಾರಗೆ ರಕ್ಷಣೆಗೆ ವಿಶೇಷ ಕಾನೂನು ಜಾರಿಗೆ ತಂದಿದ್ದಾರೆ. ಜ್ಞಾನೇಶಕುಮಾರರಿಂದ ಲೋಪ ಆದ್ರೂ ಶಿಕ್ಷೆ ಇಲ್ಲ. ಅವರು ಜೀವಂತವಾಗಿರುವವರೆಗೂ ಯಾರೂ ಮುಟ್ಟುವಂತಿಲ್ಲ ಎನ್ನುವ ಕಾನೂನು ತಂದಿದ್ದಾರೆ. ದೇಶದ ಜಡ್ಜ್ ಗಳಿಗೆ, ರಾಷ್ಟ್ರಪತಿಗೆ ಇಲ್ಲದ ರಕ್ಷಣೆ ಅವರಿಗೆ ಕೊಟ್ಟಿದಾರೆ. ಜ್ಞಾನೇಶ್‌ ಕುಮಾರ್‌, ಮೋದಿ, ಶಾ ಸೇರಿ ತಪ್ಪು ಮಾಡಿಸಿದ್ದಾರೆಂದು ಖರ್ಗೆ ಟೀಕಿಸಿದರು.ಜ್ಞಾನೇಶಕುಮಾರನ್ನು ಕೂಡಲೇ ವಜಾ ಮಾಡಬೇಕು. ಮೋದಿ, ಶಾಗೂ ಶಿಕ್ಷೆ ಆಗಬೇಕು. ಮೋದಿ ಗೆದ್ದು ಬಂದಿದ್ದೇ ವಾಮಮಾರ್ಗದಿಂದ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಮೊದಲು ರಾಜೀನಾಮೆ ಕೊಟ್ಟು, ಶಿಕ್ಷೆಗೆ ಒಳಗಪಡಬೇಕು ಎಂದು ಖರ್ಗೆ ಏಕ ವಚನದಲ್ಲೇ ವಾಗ್ದಾಳಿ ನಡೆಸಿದರು. ಮೋದಿ ಗೆದ್ದು ಬಂದಿದ್ದೇ ವಾಮ ಮಾರ್ಗದಿಂದ. ಹಾಗಾಗಿ ಮೊದಲು ಅವರು ರಾಜೀನಾಮೆ ಕೊಡಬೇಕು. ಮೋದಿ ನಿಜವಾದ ಪ್ರಧಾನಿ ಅಲ್ಲ. ನಮ್ಮ ಬೇಡಿಕೆಯಂತೆ ಇವಿಎಂ ತೆಗೆಯಿರಿ.‌ ಬ್ಯಾಲೆಟ್ ಪೇಪರ್ ಮೇಲೆ ಎಲೆಕ್ಷನ್ ಮಾಡಿ ಎಂದು ಖರ್ಗೆ ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೋದಾರ್ ಶಾಲೆಯಲ್ಲಿ ಸಂಭ್ರಮದ ನವರಾತ್ರಿ ದಾಂಡಿಯಾ ಉತ್ಸವ
ಹಾಸನ ಜಿಲ್ಲೆಯಲ್ಲಿ ಜನತಾದಳ ಸಂಘಟನೆ ಬಲಪಡಿಸಲು ಮಹಿಮಾ ಪಟೇಲ್ ಸೂಚನೆ