- ಪೋಸ್ಟರ್ ಬಿಡುಗಡೆ ಪ್ರಚಾರ ಸಭೆಯಲ್ಲಿ ಶಾಂತಭೀಷ್ಮ ಚೌಡಯ್ಯ ಶ್ರೀ ಸಲಹೆ -
ನಗರದ ಗಂಗಾಮಸ್ಥರ ಸಮಾಜದ ಕಟ್ಟಡದಲ್ಲಿ ಬುಧವಾರ ನಡೆದ ರಾಣಿಬೆನ್ನೂರು ತಾಲೂಕಿನ ಸುಕ್ಷೇತ್ರ ನರಸೀಪುರದಲ್ಲಿ ಜ.14 ಮತ್ತು 15ರಂದು ನಡೆಯಲಿರುವ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಾತ್ರಾ ಮಹೋತ್ಸವ, 7ನೇ ಅಂಬಿಗರ ಶರಣ ಸಂಸ್ಕೃತಿ ಉತ್ಸವ-2025, ವಚನ ಗ್ರಂಥ ಮಹಾರಥೋತ್ಸವ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಗಂಗಾಮತಸ್ಥರು ಚೌಡಯ್ಯನವರ ಭಾವಚಿತ್ರವನ್ನಿಟ್ಟು ಪೂಜೆ ಮಾಡಿ, ಎಲ್ಲ ಜನಾಂಗದವರಿಗೂ ಕರೆದು ಅವರ ಕುರಿತು ಪ್ರಚಾರ ಮಾಡಬೇಕು ಎಂದರು.
ಹಲವು ದೈವಗಳ ಪೂಜೆಗೆ ಮೊರೆಹೋದರೂ ನಮಗೆ ನ್ಯಾಯ ಸಿಗಲಿಲ್ಲ, ಕಷ್ಟ ಕಳೆಯಲಿಲ್ಲ. ಆದ್ದರಿಂದ ಸಮಾಜ ಬಾಂಧವರು ಅಂಬಿಗರ ಚೌಡಯ್ಯನವರ, ಗಂಗಾಮಾತೆಯನ್ನು ಭಾವನಾತ್ಮಕವಾಗಿ ಆರಾಧನೆ ಮಾಡಬೇಕು. ಗಂಗಾಮತ್ಥರಿಗೆ ಅಂಬಿಗರ ಚೌಡಯ್ಯ, ಗಂಗಾಮಾತೆಯ ಮನೆ ದೇವರಾಗಿದ್ದಾರೆ. ಜಗಲಿ ಮೇಲೆ ಮನೆ ದೇವರ ರೀತಿ ಭಾವಚಿತ್ರಗಳನ್ನಿಟ್ಟು ಪೂಜಿಸಬೇಕು ಎಂದರು.ನರಸೀಪುರದ ಅಂಬಿಗರ ಚೌಡಯ್ಯನವರ ಗುರುಪೀಠ ಮುಂದಿನ ದಿನಗಳಲ್ಲಿ ಸಮಾಜಕ್ಕೆ ದೊಡ್ಡ ದಾರಿ ದೀಪ, ಶಕ್ತಿಯಾಗಲಿದೆ. ಪೀಠದ ಜಾತ್ರೆ ಎಂದ ಕೂಡಲೇ ಸಮಾಜ ಬಾಂಧವರು ಒಟ್ಟಾಗಿ ಸೇವೆ ಮಾಡುತ್ತಿದ್ದಾರೆ. ಈ ಸಂಸ್ಕೃತಿ ಇನ್ನು ಗಟ್ಟಿಯಾಗಬೇಕಿದೆ. ಪೀಠದ ಜಾತ್ರಾ ಮಹೋತ್ಸವ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸ್ವಾಲಂಬನೆ ಕೊಡಲಿದೆ ಎಂದರು.
ಸಮಾಜದವರು ದುಡುಮೆಯ ಒಂದು ಭಾಗವನ್ನು ನೀಡಿದರೆ ಪೀಠವನ್ನು ಬೆಳೆಸಬಹುದು. ಪೀಠದ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಜನ ಸೇರಿದರೆ ಸರ್ಕಾರ ಕೂಡ ನಮ್ಮನ್ನು ಗಮನಿಸುವುದರ ಜೊತೆಗೆ ಎಲ್ಲ ರೀತಿ ಸೌಲಭ್ಯ ತೆಗೆದುಕೊಳ್ಳಲು ಅನುಕೂಲವಾಗಲಿದೆ. ಇನ್ನಾದರೂ ಸಮಾಜದವರು ಸಾಮಾಜಿಕ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಸಮಾಜಕ್ಕೆ ಜಿಲ್ಲೆ, ತಾಲೂಕು ಕೇಂದ್ರದಲ್ಲಿ ಕಾಲೇಜು, ಹಾಸ್ಟೆಲ್, ಸಮುದಾಯ ಭವನ ಬೇಕಾಗಿದೆ. ಈ ನಿಟ್ಟಿಯಲ್ಲಿ ಪಕ್ಷಾತೀತವಾಗಿ ಒಗ್ಗಟ್ಟಾಗಬೇಕು ಎಂದರು.ಸಭೆಯಲ್ಲಿ ದಾವಣಗೆರೆ ಜಿಲ್ಲೆಯ ಸಮಾಜದ ಮುಖಂಡರು, ಬಾಂಧವರು ಬಸ್, ಆಹಾರ ಧಾನ್ಯಗಳು, ಹಣವನ್ನು ದೇಣಿಗೆ ನೀಡುವ ಘೋಷಣೆ ಮಾಡುವ ಮೂಲಕ ಜಾತ್ರಾ ಮಹೋತ್ಸವ ಯಶಸ್ವಿಗೆ ಸಹಕರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಸಮಾಜದ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ, ಗುರುಪೀಠದ ಸಮಿತಿಯ ಉಪಾಧ್ಯಕ್ಷ ಪುಟಗನಾಳ್ ಮಂಜುನಾಥ, ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹಾಂತೇಶ್ ನಿಟ್ಟೂರು, ಜಿಲ್ಲಾ ಸಂಘದ ಉಪಾಧ್ಯಕ್ಷ ವಾಗೀಶ್, ಚಂದ್ರಪ್ಪ, ರವಿಕುಮಾರ, ಸೋಮ್ಲಾಪುರದ ರವಿ, ಯೋಗರಾಜ್, ಸಾರಥಿ ಕೃಷ್ಣಪ್ಪ, ನಿಂಗರಾಜ ಹಾವನೂರು, ಸೋಮಣ್ಣ, ಶಿವಣ್ಣ ಸೇರಿದಂತೆ ಇತರರು ಇದ್ದರು. - - - -26ಕೆಡಿವಿಜಿ46:ದಾವಣಗೆರೆಯಲ್ಲಿ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಾತ್ರಾ ಮಹೋತ್ಸವದ ಪೋಸ್ಟರ್ ಬಿಡುಗಡೆ ಮಾಡಲಾಯಿತು.