ರಾಷ್ಟ್ರ ಮಟ್ಟದಲ್ಲಿ ಬಸವ ಜಯಂತಿ ಆಚರಿಸಿ

KannadaprabhaNewsNetwork |  
Published : Apr 25, 2025, 12:32 AM IST
ಚಿತ್ರ 24ಬಿಡಆರ್4ದೆಹಲಿಯಲ್ಲಿ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ವಿಧಾನ ಪರಿಷತ್‌ ಸದಸ್ಯ ಎಂ.ಜಿ ಮೂಳೆ ಭೇಟಿ ಮಾಡಿ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ವಿಶ್ವ ಗುರು ಬಸವಣ್ಣನ ಜಯಂತಿಯು ರಾಷ್ಟ್ರೀಯ ಮಟ್ಟದಲ್ಲಿ ಆಚರಿಸುವಂತೆ ದೆಹಲಿಯಲ್ಲಿ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣಗೆ ವಿಧಾನ ಪರಿಷತ್‌ ಸದಸ್ಯ ಎಂ.ಜಿ. ಮೂಳೆ ಮನವಿ ಮಾಡಿದ್ದಾರೆ.

ಬಸವಕಲ್ಯಾಣ: ವಿಶ್ವ ಗುರು ಬಸವಣ್ಣನ ಜಯಂತಿಯು ರಾಷ್ಟ್ರೀಯ ಮಟ್ಟದಲ್ಲಿ ಆಚರಿಸುವಂತೆ ದೆಹಲಿಯಲ್ಲಿ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣಗೆ ವಿಧಾನ ಪರಿಷತ್‌ ಸದಸ್ಯ ಎಂ.ಜಿ. ಮೂಳೆ ಮನವಿ ಮಾಡಿದ್ದಾರೆ.

12ನೇ ಶತಮಾನವು ಭಾರತೀಯ ಇತಿಹಾಸದಲ್ಲಿ ಅತ್ಯಂತ ಸ್ಮರಣೀಯವಾದದ್ದು, ಇಂದು ಭಾರತದಲ್ಲಿ ಅತ್ಯಂತ ಪ್ರಭಾವಶಾಲಿ ಎಂದು ಪರಿಗಣಿಸಲ್ಪಟ್ಟ ಮಹಾತ್ಮ ಬಸವಣ್ಣನವರು ಸಮಾನತೆ ಮತ್ತು ಕಾಯಕ ದಾಸೋಹದ ಆದರ್ಶಗಳನ್ನು ಆಧರಿಸಿ ಶರಣರೊಂದಿಗೆ ಅನುಭವ ಮಂಟಪವನ್ನು ಸ್ಥಾಪಿಸಿದ್ದಾರೆ. ಅನುಭವ ಮಂಪಟವು ವಿಶ್ವದ ಪ್ರಥಮ ಸಂಸತ್ತು ಎಂದು ಹೆಗ್ಗಳಿಕೆಗೆ ಖ್ಯಾತಿ ಪಡೆದಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.ಸಮಾಜದಲ್ಲಿ ಜಾತಿ, ವರ್ಣ ಮತ್ತು ಲಿಂಗ ತಾರತಮ್ಯ ತೊಡೆದು ಹಾಕಿ ಸಮಾನತೆ ಸಾರಿದ್ದಾರೆ. ಇಡಿ ಜಗತ್ತಿನಲ್ಲಿ ಪ್ರಜಾಪ್ರಭುತ್ವ ಮತ್ತು ಮಾನವೀಯ ಮೌಲ್ಯಗಳು ಅನುಭವ ಮಂಟಪದ ಮೂಲಕ ತೋರಿಸಿದ್ದಾರೆ. ಏ. 30ರಂದು ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳು ಬಸವ ಜಯಂತಿ ಆಚರಿಸುತ್ತಿವೆ. ಅದರಂತೆ ರಾಷ್ಟ್ರ ಮಟ್ಟದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಆಚರಿಸುವಂತೆ ಬಸವ ಭಕ್ತರ ಆಶೆಯಾಗಿದ್ದು ಹೀಗಾಗಿ ಕೇಂದ್ರ ಸರ್ಕಾರವು ಬಸವ ಭಕ್ತರ ಬೇಡಿಕೆ ಈಡೇರಿಸಬೇಕೆಂದರು.ಈಗಾಗಲೇ ಭಾಲ್ಕಿಯ ಬಸವಲಿಂಗ ಪಟ್ಟದೇವರು ಮತ್ತು ಈ ಭಾಗದ ಮಠಾಧೀಶರು, ಬಸವಾಭಿಮಾನಿಗಳ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿ ಈ ಸಲ ದೆಹಲಿಯ ಸಂಸತ್‌ ಭವನದಲ್ಲಿ ಏ. 30ರಂದು ಬಸವ ಜಯಂತಿ ಆಚರಿಸುತ್ತಿದ್ದಾರೆ ಇದು ಇತಿಹಾಸದಲ್ಲಿ ಪ್ರಥಮವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯರಾದ ಎಂ.ಜಿ. ಮೂಳೆ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ