ಶಾಂತಿಯುತ ಈದ್ ಆಚರಿಸಿ, ಒಟ್ಟಿಗೆ ಮೆರವಣಿಗೆ ಮಾಡಿ

KannadaprabhaNewsNetwork |  
Published : Aug 23, 2026, 03:00 AM IST
ರಾಮದುರ್ಗದ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಜರುಗಿದ ಶಾಂತತಾ ಸಭೆಯಲ್ಲಿ ಸಿಪಿಐ ವಿನಾಯಕ ಬಡಿಗೇರ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ರಾಮದುರ್ಗ ಮಹ್ಮದ ಪೈಗಂಬರ ಜನ್ಮದಿನ ಈದ್ ಮಿಲಾದ್ ಹಬ್ಬವನ್ನು ಹಿಂದೂ ಮುಸ್ಲಿಮರೆಲ್ಲರೂ ಸೇರಿ ಸಹೋದರತ್ವ ಭಾವನೆಯಿಂದ ಶಾಂತಿಯುತವಾಗಿ ಆಚರಿಸಬೇಕು ಎಂದು ಸಿಪಿಐ ವಿನಾಯಕ ಬಡಿಗೇರ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಮಹ್ಮದ ಪೈಗಂಬರ ಜನ್ಮದಿನ ಈದ್ ಮಿಲಾದ್ ಹಬ್ಬವನ್ನು ಹಿಂದೂ ಮುಸ್ಲಿಮರೆಲ್ಲರೂ ಸೇರಿ ಸಹೋದರತ್ವ ಭಾವನೆಯಿಂದ ಶಾಂತಿಯುತವಾಗಿ ಆಚರಿಸಬೇಕು ಎಂದು ಸಿಪಿಐ ವಿನಾಯಕ ಬಡಿಗೇರ ಹೇಳಿದರು.

ಪೊಲೀಸ್ ಠಾಣೆ ಆವರಣದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಶನಿವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಾಮದುರ್ಗ ಪಟ್ಟಣದಲ್ಲಿ ಮಾತ್ರ ಆಕರ್ಷಕ ಮೆರವಣಿಗೆ ಜರುಗಲಿದೆ. ಮೆರವಣಿಗೆ ವೇಳೆಗೆ ಗದ್ದಲ ಉಂಟು ಮಾಡುವ ವ್ಯಕ್ತಿಗಳನ್ನು ಸಮಾಜದವರೇ ಹತ್ತಿಕ್ಕುವ ಮುಖಾಂತರ ಪೊಲೀಸ್‌ ಇಲಾಖೆಯೊಂದಿಗೆ ಸಹಕರಿಸಬೇಕು. ರಾಮದುರ್ಗದಲ್ಲಿ ವಿವಿಧ ಬಡಾವಣೆಗಳಲ್ಲಿ ಜಮಾತೆಗಳಿವೆ. ಒಂದು ಜಮಾತ್‌ನವರು ಬೇರೆಬೇರೆ ಕಡೆಗಳಲ್ಲಿ ಮೆರವಣಿಗೆ ಮಾಡದೇ ಎಲ್ಲ ಜಮಾತ್‌ನ ಮುಖಂಡರು ಒಟ್ಟಾಗಿ ಮೆರವಣಿಗೆಗೆ ಮಾಡುವುದರೊಂದಿಗೆ ಐಕ್ಯತೆಯನ್ನು ಸಾರಬೇಕು ಎಂದರು.

ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷ ಎ.ಎ.ಖಾಜಿ ಮಾತನಾಡಿ, ಮಹ್ಮದ್ ಪೈಗಂಬರರ ಜನ್ಮ ದಿನಾಚರಣೆಯ ಅಂಗವಾಗಿ ಆಕರ್ಷಕ ಮೆರವಣಿಗೆ ಮಾಡಲು ಕಮೀಟಿ ನಿರ್ಧರಿಸಿದೆ. ಶಿಸ್ತುಬದ್ಧವಾಗಿ ಮತ್ತು ಉತ್ತಮ ಸಮವಸ್ತ್ರದ ಪ್ರದರ್ಶನ ನೀಡುವ ತಂಡಕ್ಕೆ ಪ್ರಥಮ ಬಹುಮಾನ ₹50,000, ದ್ವಿತೀಯ ಬಹುಮಾನ ₹25,000 ಮತ್ತು ತೃತೀಯ ಬಹುಮಾನ ₹10,000 ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯ ಮುಸ್ತಫಾ ದಾವಲಭಾಯಿ ಮಾತನಾಡಿ, ಈ ಸಾರಿಯ ಮೆರವಣಿಗೆಯಲ್ಲಿ ಶಿಸ್ತು ಪಾಲಿಸುವಂತೆ ಎಲ್ಲ ಮಸೀದಿಗಳಲ್ಲಿ ಮೌಲಾನಾಗಳು ಪ್ರಾರ್ಥನೆಗೆ ಆಗಮಿಸಿದ ಎಲ್ಲರಿಗೂ ತಿಳಿವಳಿಕೆ ನೀಡಿದ್ದಾರೆ. ಈ ಸಾರಿ ಮಾತ್ರ ಯಾವುದೇ ರೀತಿಯ ಅವಘಡಗಳು ಜರುಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಿಎಸ್‌ಐ ಸವಿತಾ ಮುನ್ಯಾಳ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರೊಬೇಷನರಿ ಪಿಎಸ್‌ಐ ಸಂತೋಷ ಧೂಳಖೇಡ ಸೇರಿದಂತೆ ಹಿಂದೂ ಮುಸ್ಲಿಂ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಬ್ಬದಲ್ಲಿ ಡಿಜೆ ಬಳಕೆಗೆ ಅವಕಾಶವಿಲ್ಲ
ಪ್ರತಿಭಾವಂತ ಗಾಯಕರಿಗೆ ವೇದಿಕೆ ಕಲ್ಪಿಸಲು ರಾಜ್ಯಮಟ್ಟ ಕಾರ್ಯಕ್ರಮ