ಸರ್ಕಾರದ ನಿರ್ದೇಶನಗಳಡಿ ಹಬ್ಬಗಳ ಆಚರಿಸಿ: ಸಿಪಿಐ ಆನಂದರಾವ್

KannadaprabhaNewsNetwork |  
Published : Aug 29, 2024, 12:52 AM IST
ಶಾಂತಿ-ಸೌಹಾರ್ದತೆಯಿಂದ ಹಬ್ಬ ಆಚರಿಸಿ:ಸಿಪಿಐ ಆನಂದರಾವ್. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಸರ್ಕಾರದ ನಿರ್ದೇಶನದಂತೆ ಶಾಂತಿಯುತವಾಗಿ ಹಬ್ಬಗಳು ಆಚರಿಸಬೇಕು. ಆಚರಣೆ ಧಾರ್ಮಿಕ ಭಾವನೆಗಳನ್ನು ಗೌರವಿಸುವಂತಿರಬೇಕು. ಯಾರಾದರೂ ಶಾಂತಿಗೆ ಭಂಗ ತಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ವಿಜಯಪುರ ಗ್ರಾಮೀಣ ಸಿಪಿಐ ಆನಂದರಾವ್ ಎಸ್.ಎನ್ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಸರ್ಕಾರದ ನಿರ್ದೇಶನದಂತೆ ಶಾಂತಿಯುತವಾಗಿ ಹಬ್ಬಗಳು ಆಚರಿಸಬೇಕು. ಆಚರಣೆ ಧಾರ್ಮಿಕ ಭಾವನೆಗಳನ್ನು ಗೌರವಿಸುವಂತಿರಬೇಕು. ಯಾರಾದರೂ ಶಾಂತಿಗೆ ಭಂಗ ತಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ವಿಜಯಪುರ ಗ್ರಾಮೀಣ ಸಿಪಿಐ ಆನಂದರಾವ್ ಎಸ್.ಎನ್ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿ, ಸರ್ಕಾರ ಇಗಾಗಲೇ ಹಬ್ಬದ ಆಚರಣೆಗೆ ನಿರ್ದೇಶನಗಳನ್ನು ನೀಡಿದ್ದು, ಗಜಾನನ ಉತ್ಸವ ಸಮಿತಿಯವರು ಕಟ್ಟು ನಿಟ್ಟಾಗಿ ನಿಯಮಗಳನ್ನು ಪಾಲಿಸಬೇಕು. ಗಣೇಶನ ಮೂರ್ತಿ ಪ್ರತಿಷ್ಠಾಪಿಸುವವರು ಎಲ್ಲ ಇಲಾಖೆಗಳ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ. ಎಲ್ಲ ಇಲಾಖೆಯ ಅಧಿಕಾರಿಗಳು ಆವರಣದಲ್ಲಿ ಗಜಾನನ ಉತ್ಸವ ಸಮಿತಿಯವರಿಗೆ ಪೂರ್ವ ಅನುಮತಿ ಪಡೆಯಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಪಿಎಸ್ಐ ಬಸವರಾಜ ತಿಪ್ಪರಡ್ಡಿ ಮಾತನಾಡಿ, ಪೂರ್ವಾನುಮತಿ ಪಡೆಯದೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು, ಪ್ರತಿಯೊಬ್ಬರು ಅಹಿತಕರ ಘಟನೆಗಳು ಸಂಭವಿಸದಂತೆ ಹಬ್ಬವನ್ನು ಆಚರಣೆ ಮಾಡಿ ಎಂದು ತಿಳಿಸಿದರು.

ನಂತರ ಸಮುದಾಯದ ಮುಖಂಡರು ಮಾತನಾಡಿ, ಇಲಾಖೆಯ ಜೊತೆ ಸಹಕಾರ ನೀಡಿ ಹಬ್ಬ ಆಚರಿಸುತ್ತೇವೆ ಎಂದು ಹೇಳಿದರು.

ಸಂದರ್ಭದಲ್ಲಿ ಮಹಿಳಾ ಪಿಎಸ್ಐ ಪಿ.ಎಂ.ಚೌರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖರಾದ ಶಂಕರಗೌಡ ಪಾಟೀಲ, ಚನ್ನವೀರಪ್ಪ ಕುದುರಿ, ಕಾಸುಗೌಡ ಬಿರಾದಾರ(ಜಲಕತ್ತಿ), ಬಾಬುಗೌಡ ಪಾಟೀಲ,ಕಾಸಪ್ಪ ಜಮಾದಾರ, ಶ್ರೀಧರ ನಾಡಗೌಡ, ಮುನೀರ್ ಅಹ್ಮದ್ ಮಳಖೇಡ, ಎ.ಡಿ.ಮುಲ್ಲಾ, ಬಸವರಾಜ ಮಲ್ಹಾರಿ, ಅಜೀಜ ಯಲಗಾರ, ಹುಸೇನ ಗೌಂಡಿ, ಮೈಹಿಬೂಬ ನದಾಫ್, ಸುನೀಲ ಕನಮಡಿ ಸೇರಿ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆ.ಎಂ.ಇಮಾಂ ಸ್ಮಾರಕ ಪ್ರಶಸ್ತಿಗೆ ವೈಎಸ್‌ವಿ ದತ್ತ ಆಯ್ಕೆ
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬಿತ್ತಲು ವಿಜ್ಞಾನ ವಸ್ತುಪ್ರದರ್ಶನ ಪೂರಕ