ಶಾಂತಿಯಿಂದ ಮಹಾಲಿಂಗೇಶ್ವರ ಜಾತ್ರೆ ಆಚರಿಸಿ

KannadaprabhaNewsNetwork | Published : Sep 15, 2024 1:52 AM

ಸಾರಾಂಶ

ನಗರ ಶಾಂತಿ, ಸೌಹಾರ್ದತೆಗೆ ರಾಜ್ಯದಲ್ಲಿ ಹೆಸರುವಾಸಿಯಾಗಿದೆ. ಹೀಗಾಗಿ ಮಹಾಲಿಂಗೇಶ್ವರ ಜಾತ್ರೆಯನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸಿ ಎಂದು ಬನಹಟ್ಟಿ ಸಿಪಿಐ ಸಂಜು ಬಳಗಾರ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ನಗರ ಶಾಂತಿ, ಸೌಹಾರ್ದತೆಗೆ ರಾಜ್ಯದಲ್ಲಿ ಹೆಸರುವಾಸಿಯಾಗಿದೆ. ಹೀಗಾಗಿ ಮಹಾಲಿಂಗೇಶ್ವರ ಜಾತ್ರೆಯನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸಿ ಎಂದು ಬನಹಟ್ಟಿ ಸಿಪಿಐ ಸಂಜು ಬಳಗಾರ ಮನವಿ ಮಾಡಿದರು.ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಡೆದ ಜಾತ್ರಾ ಮಹೋತ್ಸವ ಶಾಂತಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಇಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಕಾರ್ಯಗಳಲ್ಲಿ ಸೌಹಾರ್ದತೆ ಎದ್ದು ಕಾಣುತ್ತದೆ. ಇಲ್ಲಿನ ಎಲ್ಲ ಸಮುದಾಯದ ಜನ ಭೇದ ಭಾವವಿಲ್ಲದೆ ಎಲ್ಲರೂ ಜಾತೀಯತೆ ಮರೆತು ಸೌಹಾರ್ದತೆ ಬೆರೆಸಿ ಎಲ್ಲರೂ ಒಂದು ಎಂಬ ಭಾವನೆಯಿಂದ, ಮನುಜ ಜಾತಿ ಒಂದೇ, ಎಂದು ತಿಳಿದು ಶಾಂತಿ ಸೌಹಾರ್ದತೆಯಿಂದ ಜಾತ್ರೆಯನ್ನು ಸಂತಸದಿಂದ ಆಚರಣೆ ಮಾಡಿ ಎಂದರು.

ನಾವು ಎಲ್ಲರೂ ಒಂದೇ ಎಂಬ ಭಾವ ಮನಸ್ಸಿನಲ್ಲಿ ಬಂದರೆ ವಿಶ್ವವವೇ ನಮ್ಮ ಬಂಧು ಆಗುತ್ತದೆ. ವಿಶ್ವದಲ್ಲಿರುವ ಎಲ್ಲರೂ ನಮ್ಮ ಬಂಧುಗಳಾಗುತ್ತಾರೆ. ಎಲ್ಲರೂ ಸೇರಿ ಮಹಾಮಹಿಮಾ ಪುರುಷ ಮಹಾಲಿಂಗೇಶ್ವರರ ಜಾತ್ರೆಯನ್ನು ಅದ್ಧೂರಿಯಿಂದ ಆಚರಣೆ ಮಾಡಿ ಎಂದ ಅವರು, ಸೆ.17ರಂದು ಮಹಾಜಟೋತ್ಸವ, 18 ರಂದು ತುಂಬಿದ ತೇರು, 19 ರಂದು ಮರು ರಥೋತ್ಸವ ಮತ್ತು 20 ಜಂಗೀ ನಿಕಾಲಿ ಕುಸ್ತಿಗಳು ಹೀಗೆ ನಾಲ್ಕು ದಿನಗಳ ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ದಿನ ಶಾಂತಿ ಕಾಪಾಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಪಿ.ಎಸ್ ಐ ಮಧು ಎಲ್. ಜಾತ್ರಾ ಕಮಿಟಿ ಅಧ್ಯಕ್ಷ ರವಿಗೌಡ ಪಾಟೀಲ, ಹಿರಿಯರಾದ ಲಕ್ಷ್ಮಣ ಗೌಡ ಪಾಟೀಲ, ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಜಿ.ಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಹೆಸ್ಕಾ ಅಧಿಕಾರಿ ರಾಜು ಭಾಗೋಜಿ, ಲಕ್ಕಪ್ಪ ಚಮಕೇರಿ, ಜನ್ನಪ್ಪಣ್ಣ ಪಟ್ಟಣಶೆಟ್ಟಿ, ಈರಪ್ಪ ದಿನ್ನಿಮನಿ, ಅರವಿಂದ ಮಾಲಬಸರಿ, ಅಶೋಕ ಅಂಗಡಿ, ಕೃಷ್ಣಗೌಡ ಪಾಟೀಲ, ಹನಮಂತ ಬುರುಡ, ರವಿ ಕುಳ್ಳೋಳ್ಳಿ, ಹನಮಂತ ಬಡಿಗೇರ, ಪ್ರಕಾಶ ಜೀರಗಾಳ, ಸುನೀಲಗೌಡ ಪಾಟೀಲ, ಸಂಜು ಅಂಗಡಿ, ಮಾನಿಂಗಪ್ಪ ತಟ್ಟಿಮನಿ, ಪಾರುಖ ಪಕಾಲಿ, ಪೊಲೀಸ ಸಿಬ್ಬಂದಿ ಜೆ.ಜಿ ಪಾಟೀಲ ಸೇರಿದಂತೆ ಹಲವರು ಇದ್ದರು.

---

ಬಾಕ್ಸ್‌

ಪೊಲೀಸ್‌ ಇಲಾಖೆಯೊಂದಿಗೆ ಸಹಕರಿಸಿ

ಜಾತ್ರೆಯ 3 ದಿನಗಳು ಬಹಳ ಜನದಟ್ಟನೆಯಿರುವುದರಿಂದ ಮಹಾಲಿಂಗೇಶ್ವರ ದೇವಸ್ಥಾನ, ನಡುಚೌಕಿ ಹೀಗೆ ಇನ್ನೂ ಹಲವಾರು ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಸಾಧ್ಯವಾದಷ್ಟು ಪುರಸಭೆಯವರು ಮತ್ತು ಸಾರ್ವಜನಿಕರು ಪೊಲೀಸ್‌ ಇಲಾಖೆಯೊಂದಿಗೆ ಸಹಕರಿಸಬೇಕು. ಅಂತಹ ಅವಘಡಗಳು ಸಂಭವಿಸುವ ಸೂಚನೆ ಬಂದರೆ ಕೂಡಲೇ ಠಾಣೆಗೆ ತಿಳಿಸಬೇಕು. ಕಳ್ಳರು ಕಾಕರುಗಳ ಬಗ್ಗೆ ಸಂದೇಹ ಬಂದರೆ ಠಾಣೆಗೆ ತಿಳಿಸಿ ಸಹಕರಿಸಬೇಕು. ಎಲ್ಲರೂ ಒಟ್ಟಾಗಿ ದುಡಿದರೆ ಮಾತ್ರ ಜಾತ್ರೆಯೂ ಅತೀ ಸಂತೋಷದಿಂದ ಜರುಗಲು ಸಾಧ್ಯವಾಗುತ್ತದೆ ಎಂದು ಸ್ಥಳೀಯ ಠಾಣಾಧಿಕಾರಿ ಕಿರಣ ಸತ್ತಿಗೇರಿ ತಿಳಿಸಿದರು.

Share this article