ಹರಿಹರ: ತಾಲೂಕಿನಾದ್ಯಂತ ಮುಸ್ಲಿಮರು ಶನಿವಾರ ಬಕ್ರೀದ್ (ಈದ್-ಉಲ್-ಅಧಾ) ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಅಹ್ಲೆ ಸುನ್ನತ್ ಪಂಗಡದವರು ನಗರದ ಅಂಜುಮನ್ ಹೈಸ್ಕೂಲ್ ಬಳಿ ಹಾಗೂ ಅಹ್ಲೆ ಹದೀಸ್ ಪಂಗಡದವರು ಜೈಭೀಮನಗರ ಸಮೀಪದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪ್ರವಚನದ ಬಳಿಕ ಮುಸ್ಲಿಂರು ಪರಸ್ಪರ ಹಬ್ಬದ ಶುಭಾಷಯ ಕೋರಿದರು. ಹರಿಹರವೂ ಸೇರಿದಂತೆ ಮಲೆಬೆನ್ನೂರು, ಭಾನುವಳ್ಳಿ, ಕರ್ಲಹಳ್ಳಿ, ರಾಜನಹಳ್ಳಿ, ಬೆಳ್ಳೂಡಿ ಹಾಗೂ ಇತರೆ ಗ್ರಾಮಗಳಲ್ಲೂ ಹಬ್ಬದಾಚರಣೆ ಮಾಡಲಾಯಿತು.ಈ ವೇಳೆ ಮಾಜಿ ಶಾಸಕ ಎಸ್.ರಾಮಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಹಾಗೂ ವಿವಿಧ ರಾಜಕಾರಣಿಗಳು ಈದ್ಗಾ ಮೈದಾನಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.ಅಂಜುಮನ್ ಎ ಇಸ್ಲಾಮಿಯ ಸಂಸ್ಥೆಯ ಅಧ್ಯಕ್ಷ ಆರ್.ಸಿ.ಜಾವೀದ್, ಪ್ರಧಾನ ಕಾರ್ಯದರ್ಶಿ ಆಸಿಫ್ ಜುನೇದಿ, ಉಪಾಧ್ಯಕ್ಷ ಎಂ.ಎಂ.ಬಿ. ಮೊಹಮ್ಮದ್ ಫಾರೂಕ್, ನಿರ್ದೇಶಕರಾದ ಸೈಯದ್ ಏಜಾಜ್, ಫಯಾಜ್ ಅರಿಹಂತ, ಸಮಾಜ ಸೇವಕ ಸೈಯದ್ ಸನಾವುಲ್ಲ, ನಗರಸಭೆ ಉಪಾಧ್ಯಕ್ಷ ಸೈಯದ್ ಅಬ್ದುಲ್ ಅಲೀಮ್, ಎಂ.ಆರ್.ಮುಜಮ್ಮಿಲ್, ಮುಖಂಡರಾದ ಬಿ.ಮೊಹ್ಮದ್ ಸಿಗ್ಬತ್ ಉಲ್ಲಾ, ಮೊಹ್ಮದ್ ಫೈರೋಜ್ ಮತ್ತಿತರರಿದ್ದರು.