ಕನ್ನಡಪ್ರಭ ವಾರ್ತೆ ಬೈಲಹೊಂಗಲದೀಪಾವಳಿ ಹಬ್ಬವೆಂದರೆ ಕೇವಲ ಬೆಳಕಿನ ಹಬ್ಬವಲ್ಲ. ಪ್ರೀತಿ, ವಿಶ್ವಾಸ, ಸೌಹಾರ್ದತೆ ಹಾಗೂ ಮಾನವೀಯ ಸಂಬಂಧಗಳನ್ನು ಬೆಸೆಯುವ ಹಬ್ಬವಾಗಿದೆ. ದೇಶದ ರಕ್ಷಣೆಗಾಗಿ ಕುಟುಂಬದಿಂದ ದೂರವಿದ್ದು ಕರ್ತವ್ಯ ನಿರ್ವಹಿಸುವ ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಮೂಲಕ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವರು ದೇಶಪ್ರೇಮ ಮತ್ತು ಕೃತಜ್ಞತೆಯ ಸಂದೇಶ ಸಾರಿದರು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ದೀಪಾವಳಿ ಹಬ್ಬವೆಂದರೆ ಕೇವಲ ಬೆಳಕಿನ ಹಬ್ಬವಲ್ಲ. ಪ್ರೀತಿ, ವಿಶ್ವಾಸ, ಸೌಹಾರ್ದತೆ ಹಾಗೂ ಮಾನವೀಯ ಸಂಬಂಧಗಳನ್ನು ಬೆಸೆಯುವ ಹಬ್ಬವಾಗಿದೆ. ದೇಶದ ರಕ್ಷಣೆಗಾಗಿ ಕುಟುಂಬದಿಂದ ದೂರವಿದ್ದು ಕರ್ತವ್ಯ ನಿರ್ವಹಿಸುವ ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಮೂಲಕ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವರು ದೇಶಪ್ರೇಮ ಮತ್ತು ಕೃತಜ್ಞತೆಯ ಸಂದೇಶ ಸಾರಿದರು.
ಖಾನಾಪುರ ಸಮೀಪದ ತೊರಳಿ ಗ್ರಾಮದ ಸಿಆರ್ಪಿಎಫ್ ಕಮಾಂಡೋ ತರಬೇತಿ ಕೇಂದ್ರಕ್ಕೆ ರೈತರೊಂದಿಗೆ ಭೇಟಿ ನೀಡಿದ ಅವರು, ಸೈನಿಕರಿಗೆ ದೀಪಾವಳಿ ಹಬ್ಬದ ನಿಮಿತ್ತ ಸಿಹಿ ವಿತರಿಸಿ, ಅವರೊಂದಿಗೆ ಹಬ್ಬದ ಸಂಭ್ರಮ ಹಂಚಿಕೊಂಡರು.
ಈ ಸಂದರ್ಭದಲ್ಲಿ ಯೋಧರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ, ಅವರ ಸೇವೆ, ತ್ಯಾಗ ಹಾಗೂ ದೇಶದ ಭದ್ರತೆಗಾಗಿ ಸಲ್ಲಿಸುತ್ತಿರುವ ಕೊಡುಗೆಯನ್ನು ಸ್ಮರಿಸಲಾಯಿತು.
ನಂತರ ಮಾತನಾಡಿದ ಡಾ.ವಿಶ್ವನಾಥ ಪಾಟೀಲ, ರೈತರು ದೇಶದ ಜನತೆಗೆ ಅನ್ನ ನೀಡುವ ಮೂಲಕ ಆಹಾರ ಭದ್ರತೆ ಒದಗಿಸಿದರೆ, ಸೈನಿಕರು ಗಡಿಗಳನ್ನು ಕಾಯುವ ಮೂಲಕ ರಾಷ್ಟ್ರದ ಭದ್ರತೆಯನ್ನು ಕಾಪಾಡುತ್ತಿದ್ದಾರೆ. ರೈತರು ಬೆವರು ಸುರಿಸಿ ಅನ್ನ ಬೆಳೆದರೆ, ಸೈನಿಕರು ಜೀವದ ಹಂಗು ತೊರೆದು ದೇಶವನ್ನು ರಕ್ಷಿಸುತ್ತಿದ್ದಾರೆ. ಹೀಗಾಗಿ ರೈತರು ಮತ್ತು ಸೈನಿಕರು ದೇಶದ ಅಭಿವೃದ್ಧಿ ಹಾಗೂ ಸುರಕ್ಷತೆಯ ಎರಡು ಪ್ರಮುಖ ಶಕ್ತಿಗಳಾಗಿದ್ದಾರೆ. ಇಂತಹ ಯೋಧರೊಂದಿಗೆ ದೀಪಾವಳಿ ಆಚರಿಸುವುದು ಸಂತಸದ ಜೊತೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಸೈನಿಕರ ಸೇವೆಯನ್ನು ಸಮಾಜದ ಪ್ರತಿಯೊಬ್ಬರೂ ಗೌರವಿಸಬೇಕು. ಅವರ ಕುಟುಂಬಗಳ ತ್ಯಾಗವನ್ನೂ ಸ್ಮರಿಸಬೇಕು. ಇಂತಹ ಆಚರಣೆಗಳಿಂದ ಸಮಾಜದಲ್ಲಿ ಪ್ರೀತಿ, ಸಹಬಾಳ್ವೆ ಹಾಗೂ ದೇಶಭಕ್ತಿಯ ಭಾವನೆ ಮತ್ತಷ್ಟು ಬಲಗೊಳ್ಳಬೇಕು ಎಂದು ಹೇಳಿದರು.
ಅವರೊಳ್ಳಿ-ಬಿಳಕಿಯ ಚನ್ನಬಸವ ಗುರೂಜಿ ಹಾಗೂ ಮೂಡಲಗಿಯ ಕೃಷ್ಣಪ್ಪ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.
ಈ ವೇಳೆ ರೈತ ಮುಖಂಡರಾದ ಬೀರಪ್ಪ ದೇಶನೂರ, ಮಹಾಂತೇಶ ಕಮತ, ಬಸನಗೌಡ ಪಾಟೀಲ, ರುದ್ರಗೌಡ ಪಾಟೀಲ, ಮಹಮ್ಮದಲಿ ಬಾಡಕರ, ಗೋವಿಂದ ಪಾಟೀಲ, ವೀರಭದ್ರಸ್ವಾಮಿ ರೆಡ್ಡಿ, ಮಲ್ಲಿಕಾರ್ಜುನ ರೆಡ್ಡಿ, ಮಲ್ಲಿಕಾರ್ಜುನ ಜುಟ್ಟನ್ನವರ, ಮಹೇಶ ಮೇಳದ, ಅಡಿವೆಪ್ಪ ದಳವಾಯಿ, ಮಲ್ಲಪ್ಪ ನಿರಡಿ, ಸೋಮಣ್ಣ ಮುದ್ದನ್ನವರ, ಇಸೂಪ ಶೀಗಿಹಳ್ಳಿ ಸೇರಿದಂತೆ ರೈತರು, ಸಿಆರ್ಪಿಎಫ್ ಕೇಂದ್ರದ ಸಿಬ್ಬಂದಿ ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.