ಎಲ್ಲರೊಂದಿಗೆ ಪವಿತ್ರ ರಂಜಾನ್ ಹಬ್ಬ ಆಚರಣೆ

KannadaprabhaNewsNetwork |  
Published : Apr 01, 2025, 12:50 AM IST
31ಎಚ್ಎಸ್ಎನ್22: ಪವಿತ್ರ ರಂಜಾನ್ ಹಬ್ಬ ಆಚರಣೆ. | Kannada Prabha

ಸಾರಾಂಶ

ಸಾಮಾಜಿಕ ಹೋರಾಟಗಾರ ನೂರ್ ಅಹಮದ್ ಮಾತನಾಡಿ, ಅಲ್ಲಾಹು ನಮಗೆ ಉಪವಾಸ ಪ್ರಾರ್ಥನೆ ಮತ್ತು ಸತ್ಕರ್ಮಗಳನ್ನು ಸ್ವೀಕರಿಸಲಿ ಉತ್ತಮ ಆರೋಗ್ಯದೊಂದಿಗೆ ಇನ್ನಷ್ಟು ರಂಜಾನ್ ತಿಂಗಳನ್ನು ಸ್ವಾಗತಿಸಲು ನಮ್ಮನ್ನು ಅನುಗ್ರಹಿಸಲಿ. ಪವಿತ್ರ ರಂಜಾನ್ ಹಬ್ಬವು ಕೇವಲ ಹೊಸ ಬಟ್ಟೆ ಸಂಭ್ರಮಾಚರಣೆ ಸೀಮಿತವಾಗದೆ, ಪ್ರವಾದಿ ಮೊಹಮ್ಮದ್ ಪೈಗಂಬರ್ (ಸ) ರವರ ಆದೇಶದಂತೆ ಬಡವರ ಪಾಲಿನ ಜಕಾತ್ ನೀಡುವುದರ ಜೊತೆಗೆ ನಿರ್ಗತಿಕ ಅನಾಥ ಮಕ್ಕಳೊಂದಿಗೆ ಪ್ರೀತಿ ವಿಶ್ವಾಸದಿಂದ ಹಬ್ಬ ಆಚರಿಸಬೇಕು. ನಮ್ಮ ಸುತ್ತಮುತ್ತ ಇರುವ ಅನಾಥ ಮಕ್ಕಳಿಗೆ ಆಶಾಕಿರಣವಾಗಿ ಅವರ ಹೃದಯಕ್ಕೆ ಹತ್ತಿರವಾಗಬೇಕು ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಒಂದು ತಿಂಗಳ ಉಪವಾಸ ತೊರೆದ ಮುಸ್ಲಿಮರು ಸೋಮವಾರ ಬೆಳಿಗ್ಗೆ ಗೆಂಡೆಹಳ್ಳಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಜ್ ಸಲ್ಲಿಸಿದರು.

ಸಾಮಾಜಿಕ ಹೋರಾಟಗಾರ ನೂರ್ ಅಹಮದ್ ಮಾತನಾಡಿ, ಅಲ್ಲಾಹು ನಮಗೆ ಉಪವಾಸ ಪ್ರಾರ್ಥನೆ ಮತ್ತು ಸತ್ಕರ್ಮಗಳನ್ನು ಸ್ವೀಕರಿಸಲಿ ಉತ್ತಮ ಆರೋಗ್ಯದೊಂದಿಗೆ ಇನ್ನಷ್ಟು ರಂಜಾನ್ ತಿಂಗಳನ್ನು ಸ್ವಾಗತಿಸಲು ನಮ್ಮನ್ನು ಅನುಗ್ರಹಿಸಲಿ. ಪವಿತ್ರ ರಂಜಾನ್ ಹಬ್ಬವು ಕೇವಲ ಹೊಸ ಬಟ್ಟೆ ಸಂಭ್ರಮಾಚರಣೆ ಸೀಮಿತವಾಗದೆ, ಪ್ರವಾದಿ ಮೊಹಮ್ಮದ್ ಪೈಗಂಬರ್ (ಸ) ರವರ ಆದೇಶದಂತೆ ಬಡವರ ಪಾಲಿನ ಜಕಾತ್ ನೀಡುವುದರ ಜೊತೆಗೆ ನಿರ್ಗತಿಕ ಅನಾಥ ಮಕ್ಕಳೊಂದಿಗೆ ಪ್ರೀತಿ ವಿಶ್ವಾಸದಿಂದ ಹಬ್ಬ ಆಚರಿಸಬೇಕು. ನಮ್ಮ ಸುತ್ತಮುತ್ತ ಇರುವ ಅನಾಥ ಮಕ್ಕಳಿಗೆ ಆಶಾಕಿರಣವಾಗಿ ಅವರ ಹೃದಯಕ್ಕೆ ಹತ್ತಿರವಾಗಬೇಕು ಎಂದರು.

ಪೊಲೀಸ್ ಇಲಾಖೆ ವತಿಯಿಂದ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆಯಾಗಿ. ಬಿಗಿ ಪೊಲೀಸ್ ಬಂದೋಬಸ್ ನೀಡಲಾಗಿತ್ತು. ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ರೇವಣ್ಣ ಸಬ್ ಇನ್ಸ್ಪೆಕ್ಟರ್ ಎಸ್ ಜೆ ಪಾಟೀಲ್, ಸಿಬ್ಬಂದಿಗಳಾದ ದೇವರಾಜ್, ಚೇತನ್, ನವೀನ್, ದೇವೇಂದ್ರ, ಕುಮಾರ್‌ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''