ಗಿಡ ನೆಟ್ಟು ವಿವಾಹ ವಾರ್ಷಿಕೋತ್ಸವ ಆಚರಣೆ

KannadaprabhaNewsNetwork |  
Published : May 23, 2025, 12:09 AM IST
ಕೆ ಕೆ ಪಿ ಸುದ್ದಿ 02: ಪರಿಸರ ಪ್ರೇಮಿ ಮರಸಪ್ಪ ರವಿ ತಮ್ಮ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಗ್ರಾಮದಲ್ಲಿಹಣ್ಣು ಗಿಡಗಳನ್ನು ನೆಟ್ಟರು.  | Kannada Prabha

ಸಾರಾಂಶ

ಕನಕಪುರ: ಲಯನ್ಸ್ ಕ್ಲಬ್ ಸದಸ್ಯ ಹಾಗೂ ಪರಿಸರ ಪ್ರೇಮಿ ಮರಸಪ್ಪ ರವಿ 38ನೇ ವಿವಾಹ ವಾರ್ಷಿಕೋತ್ಸವವನ್ನು 38 ಹಣ್ಣಿನ ಗಿಡಗಳನ್ನು ನೆಟ್ಟು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಿಕೊಂಡರು.

ಕನಕಪುರ: ಲಯನ್ಸ್ ಕ್ಲಬ್ ಸದಸ್ಯ ಹಾಗೂ ಪರಿಸರ ಪ್ರೇಮಿ ಮರಸಪ್ಪ ರವಿ 38ನೇ ವಿವಾಹ ವಾರ್ಷಿಕೋತ್ಸವವನ್ನು 38 ಹಣ್ಣಿನ ಗಿಡಗಳನ್ನು ನೆಟ್ಟು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಿಕೊಂಡರು. ತಾಲೂಕಿನ ಕೆರಳಾಳುಸಂದ್ರದಲ್ಲಿ ಪತ್ನಿ ರತ್ನ ಮರಸಪ್ಪ ಹಾಗೂ ಕುಟುಂಬ ಸದಸ್ಯರೊಂದಿಗೆ ಹಣ್ಣಿನ ಗಿಡ ನೆಟ್ಟು ಮಾತನಾಡಿ, ಸಮಾಜದಲ್ಲಿ ಜನ ಪ್ರಕೃತಿ ಜೊತೆಯಲ್ಲಿಯೇ ಸಹಬಾಳ್ವೆ ನಡೆಸುತ್ತಿದ್ದೇವೆ. ಮೋಜಿನ ಜೀವನಕ್ಕೆ ಅಂಟಿಕೊಳ್ಳದೆ ಪ್ರಕೃತಿಯೊಂದಿಗೆನಮ್ಮ ಆಚರಣೆಗಳನ್ನು ಆಚರಿಸಿಕೊಂಡರೆ ತೃಪ್ತಿ ಹಾಗೂ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಜೊತೆಗೆ ನಮ್ಮ ಸಹಜೀವನಕ್ಕೂ ಸಾರ್ಥಕತೆ ದೊರೆಯುತ್ತದೆ ಎಂದರು. ಮರಸಪ್ಪ ರವಿ ಕುಟುಂಬದ ಸದಸ್ಯರು ಹಾಗೂ ಜೀವನ್, ಕೃಪಾಲಕ್ಷ್ಮಿ, ಸ್ವಾತಿ, ಗಿರೀಶ್ ಸೇರಿದಂತೆ ಗ್ರಾಮಸ್ಥರು ದಂಪತಿಗೆ ಶುಭ‌ ಕೋರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!