ಹೊಸಕೋಟೆ: ಹೊಸಕೋಟೆ ನಗರದಲ್ಲಿ ಸುಮಾರು 14 ದಿನಗಳ ಕಾಲ ನಡೆದ ಇತಿಹಾಸ ಪ್ರಸಿದ್ಧ ಶ್ರೀ ಅವಿಮುಕೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಅಂತಿಮ ಪೂಜಾ ಕಾರ್ಯಕ್ರಮಗಳೊಂದಿಗೆ ವಿಧ್ಯುಕ್ತವಾಗಿ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ರಥೋತ್ಸವ ಆಚರಣೆ ಸಮಿತಿ ಸಂಚಾಲಕ ಕೇಶವಮೂರ್ತಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವ 14 ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಪಕ್ಷಾತೀತ, ಧರ್ಮಾತೀತವಾಗಿ ನಗರ ನಾಗರಿಕರು ಆಗಮಿಸಿ ರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿ ದೇವರ ಕೃಪೆಗೆ ಪಾತ್ರರಾದರು ಎಂದರು.
ತಹಸೀಲ್ದಾರ್ ಸೋಮಶೇಖರ್ ಮಾತನಾಡಿ, ಮೈಸೂರು ಸಂಸ್ಥಾನದ ಅವಧಿಯಿಂದ ಹೊಸಕೋಟೆಯಲ್ಲಿ ನಡೆದುಕೊಂಡು ಬಂದಿರುವ ಅವಿಮುಕ್ತೇಶ್ವರ ರಥೋತ್ಸವದ ಮುಂದಾಳತ್ವ ವಹಿಸುವ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ. ರಥೋತ್ಸವಕ್ಕೆ ಭಗವಂತನ ಅನುಗ್ರಹದಿಂದ ಸರ್ವಧರ್ಮಿಯರ ಸಹಕಾರದೊಂದಿಗೆ ಯಶಸ್ವಿಯಾಗಿದೆ ಎಂದರು.ಇದೇ ಸಂದರ್ಭದಲ್ಲಿ ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಯಶಸ್ವಿಯಾಗಿ ನೆರವೇರಿದ ಹಿನ್ನೆಲೆ ಸಮಿತಿ ಸಂಚಾಲಕ ಕೇಶವಮೂರ್ತಿ ಹಾಗೂ ತಹಸೀಲ್ದಾರ್ ಸೋಮಶೇಖರ್ ಅವರನ್ನ ದೇವಾಲಯದ ಪ್ರಧಾನ ಅರ್ಚಕ ಎಚ್.ಕೆ.ಕೃಷ್ಣಮೂರ್ತಿ ಆಶೀರ್ವದಿಸಿದರು. ರಥೋಥ್ಸವ ಆಚರಣಾ ಸಮಿತಿ ಸದಸ್ಯರು ಹಾಜರಿದ್ದರು.
ಫೋಟೋ : 22 ಹೆಚ್‌ಎಸ್‌ಕೆ 4ಹೊಸಕೋಟೆಯಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಅವಿಮುಕ್ತೇಶ್ವರಸ್ವಾಮಿ ಬ್ರಹ್ಮರಥೋತ್ಸವದ ಯಶಸ್ವಿ ಪ್ರಯುಕ್ತ ಸಂಚಾಲಕ ಕೇಶವಮೂರ್ತಿ ಹಾಗೂ ತಹಸೀಲ್ದಾರ್ ಸೋಮಶೇಖರ್ ಅವರನ್ನ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಆಶೀರ್ವದಿಸಿದರು.