ವಿಶ್ವ ಜಾನಪದ ದಿನ ಆಚರಣೆ ಹೆಮ್ಮೆಯ ಸಂಗತಿ: ಅಹಮದ್ ಬೇಗ್

KannadaprabhaNewsNetwork |  
Published : Aug 25, 2025, 01:00 AM IST
23ಕೆಕೆಡಿಯು1. | Kannada Prabha

ಸಾರಾಂಶ

ಕಡೂರು, ಮನುಷ್ಯನ ಸರ್ವತೋಮುಖ ಅಭಿವೃದ್ಧಿಗೆ ತಳಹದಿಯಾದ ಭಾರತದ ಜಾನಪದವನ್ನು ವಿಶ್ವ ಜಾನಪದ ದಿನವಾಗಿ ಆಚರಿಸುತ್ತಿರುವುದು ನಮಗೆ ಹೆಮ್ಮೆಯ ಸಂಗತಿ ಎಂದು ಜಾನಪದ ಸಾಹಿತಿ ಅಹಮದ್ ಬೇಗ್ ಹೇಳಿದರು.

ಚಿಕ್ಕನಲ್ಲೂರು ಗ್ರಾಮದ ಶ್ರೀಕಲ್ಲೇಶ್ವರ ದೇವಾಲಯದಲ್ಲಿ ವಿಶ್ವಜಾನಪದ ದಿನಾಚರಣೆ

ಕನ್ನಡಪ್ರಭ ವಾರ್ತೆ, ಕಡೂರು

ಮನುಷ್ಯನ ಸರ್ವತೋಮುಖ ಅಭಿವೃದ್ಧಿಗೆ ತಳಹದಿಯಾದ ಭಾರತದ ಜಾನಪದವನ್ನು ವಿಶ್ವ ಜಾನಪದ ದಿನವಾಗಿ ಆಚರಿಸುತ್ತಿರುವುದು ನಮಗೆ ಹೆಮ್ಮೆಯ ಸಂಗತಿ ಎಂದು ಜಾನಪದ ಸಾಹಿತಿ ಅಹಮದ್ ಬೇಗ್ ಹೇಳಿದರು.ತಾಲೂಕಿನ ಚಿಕ್ಕನಲ್ಲೂರು ಗ್ರಾಮದ ಶ್ರೀಕಲ್ಲೇಶ್ವರ ದೇವಾಲಯದಲ್ಲಿ ಆಯೋಜಿಸಿದ್ದ ಕಜಾಪದ ಕಡೂರು ತಾಲೂಕು ಹಾಗು ಚಿಕ್ಕಮಗಳೂರು ಜಿಲ್ಲಾ ಘಟಕದ ಸಹಯೋಗದಲ್ಲಿ ನಡೆದ ವಿಶ್ವಜಾನಪದ ದಿನಾಚರಣೆ ಉಧ್ಘಾಟಿಸಿ ಮಾತನಾಡಿದರು.ಭಾರತೀಯ ಆಚಾರ ವಿಚಾರ, ಉಡುಗೆ ತೊಡುಗೆ, ಆಹಾರ ಪದ್ಧತಿ, ಕರುಳ ಸಂಬಂಧ, ಪೂಜೆ ಪುನಸ್ಕಾರ, ಹಬ್ಬ ಹರಿದಿನ, ಧಾರ್ಮಿಕ ವಿಧಿ ವಿಧಾನಗಳು ಎಲ್ಲವೂ ಜಾನಪದ ಸಂಸ್ಕೃತಿಯಿಂದ ಪ್ರಭಾವಿತವಾಗಿ ಮನುಷ್ಯನು ಹುಟ್ಟಿದ ದಿನದಿಂದಲೇ ಜಾನಪದ ಸಂಸ್ಕೃತಿ ಉದಯವಾಯಿತು. ಧಾರ್ಮಿಕ ವಿಧಿ ವಿಧಾನಗಳು ಎಲ್ಲವೂ ಜಾನಪದ ಸಂಸ್ಕೃತಿಯಿಂದ ಪ್ರಭಾವಿತ ಗೊಂಡಿವೆ. ಭಾರತೀಯ ಸಂಗೀತ ಮತ್ತು ಸಾಹಿತ್ಯದ ಕಲಾ ಪ್ರಕಾರಗಳ ಮೂಲ ಬೇರುಜಾನಪದದಿಂದಲೇ ಹುಟ್ಟಿವೆ.ಇಂದಿನ ತಂತ್ರಜ್ಞಾನ,ವಿಜ್ಞಾನ, ವೈದ್ಯಕೀಯ, ಕಲೆ, ಶಿಲ್ಪಕಲೆ ಕೂಡ ಜಾನಪದದ ದೊಡ್ಡ ಕೊಡುಗೆಯಾಗಿವೆ. ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬ ಕವಿ ವಾಣಿಯಂತೆ ಜಾನಪದ ಸಂಸ್ಕೃತಿ ನಾಶವಾದರೆ ಭಾರತೀಯ ಸಂಸ್ಕೃತಿ ನಾಶವಾದಂತೆ. ಹಾಗಾಗಿ ಜಾನಪದ ಸಾಹಿತ್ಯ, ಸಂಗೀತ,ಸಂಸ್ಕೃತಿ ಕಲೆ ಇವುಗಳನ್ನು ಮುಂದಿನ ಪೀಳಿಗೆಗೆ ನೀಡಬೇಕಾಗಿರುವುದು ನಮ್ಮ ಆಧ್ಯ ಕರ್ತವ್ಯ ಎಂದು ಅಭಿಪ್ರಾಯಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ. ಬಿ. ಸುರೇಶ್ ಮಾತನಾಡಿ, ದೇಶ ಮತ್ತು ರಾಜ್ಯಾದ್ಯಂತ ವಿಶ್ವ ಜಾನಪದ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಎಲ್ಲ ಸಾಹಿತ್ಯ ಸಂಗೀತಗಳ ಮೂಲ ಬೇರು ಜಾನಪದ. ಮನುಷ್ಯ ಇಂದಿನ ಯುಗದಲ್ಲಿ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಸಾಂಸ್ಕೃತಿಕ, ವೈಜ್ಞಾನಿಕ ಮತ್ತು ತಾಂತ್ರಿಕವಾಗಿ ಏನೆಲ್ಲಾ ಪ್ರಗತಿ ಸಾಧಿಸಿದ್ದರೂ ಅದು ಜಾನಪದರ ಬಹುದೊಡ್ಡ ಬೆವರಿನ ಶ್ರಮ, ತ್ಯಾಗ, ಬಲಿದಾನವೆಂದೇ ಹೇಳಬಹುದು. ಸ್ವಾತಂತ್ರ್ಯ ಹೋರಾಟದಲ್ಲೂ ಜನಪದರು ಕಟ್ಟಿದ ಸಾಹಿತ್ಯ, ಸಂಗೀತ, ಸಂಘಟನೆಗಳು ಸ್ವಾತಂತ್ರ್ಯ ಪಡೆಯುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿವೆ. ಹಾಗಾಗಿ ಪ್ರತಿ ಕುಟುಂಬದ ಹಿರಿಯರು ಮತ್ತು ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು, ಮಕ್ಕಳಿಗೆ, ಇಂದಿನ ಯುವಕ ಯುವತಿಯರಿಗೆ, ಜನಪದ ಸಾಹಿತ್ಯ,ಸಂಗೀತ ಸಂಸ್ಕೃತಿ ಪ್ರಾಮುಖ್ಯತೆ ಒತ್ತಿ ಹೇಳಬೇಕಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವೀರಗಾಸೆಯ ಭೀಷ್ಮ ಡಾ. ಮಾಳೇನಹಳ್ಳಿ ಬಸಪ್ಪ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಜಾನಪದ ಕಲೆ, ಸಾಹಿತ್ಯ, ಸಂಗೀತ,ಒಗಟು, ಗಾದೆಗಳು ಜೀವಂತಿಕೆಯಿಂದ ಇವೆ. ಆದ್ದರಿಂದ ಇಂತಹ ಜಾನಪದ ಕಾರ್ಯಕ್ರಮ ಗ್ರಾಮಾಂತರ ಪ್ರದೇಶದಲ್ಲಿ ನಡೆಯಬೇಕೆಂದರು. ಕಡೂರು ತಾಲೂಕು ಘಟಕದ ಅಧ್ಯಕ್ಷ ಜಗದೀಶ್ವರ ಆಚಾರ್ ಮಾತನಾಡಿ ಸಮಾಜದಲ್ಲಿ, ಖಾಸಗಿಯಾಗಿ ಹಾಗೂ ಸಾರ್ವಜನಿಕ ವಾಗಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡರೂ ದಯವಿಟ್ಟು ಕಾರ್ಯಕ್ರಮದ ಪ್ರಾಯೋಜಕರು, ಜಾನಪದ ಹಾಡು, ನೃತ್ಯ, ನಾಟಕ, ಕ್ರೀಡೆಗಳಿಗೆ ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಕಲಾವಿದ ಚಿಕ್ಕನಲ್ಲೂರು ಜಯಣ್ಣ, ಮುಖ್ಯ ಅತಿಥಿಗಳಾಗಿ ಡಾ. ಮಾಳೇನಹಳ್ಳಿ ಬಸಪ್ಪ, ಸಾಹಿತಿ ನವೀನ್ ಪೆನ್ನಯ್ಯ, ಬಿ ರಾಜಪ್ಪ, ಜಯಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಕ್ಷೇತ್ರ ಪಾಲ್, ನಿವೃತ್ತ ಶಿಕ್ಷಕ ಸಿ. ಕೆ. ಸ್ವಾಮಿ, ಪರಮೇಶ್ವರಪ್ಪ,ತಿಪ್ಪೇಶ್, ಭುವನೇಶ್ವರಿ ಸಂಘದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

23ಕೆಕೆಡಿಯು1.

ಚಿಕ್ಕನಲ್ಲೂರು ಗ್ರಾಮದ ಶ್ರೀಕಲ್ಲೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಕಜಾಪದ ಕಡೂರು ತಾಲೂಕು ಹಾಗೂ ಚಿಕ್ಕಮಗಳೂರು ಜಿಲ್ಲಾ ಘಟಕದ ಸಹಯೋಗದಲ್ಲಿ ನಡೆದ ವಿಶ್ವಜಾನಪದ ದಿನಾಚರಣೆಯನ್ನು ಜಾನಪದ ಸಾಹಿತಿ ಅಹಮದ್ ಬೇಗ್ ಉಧ್ಘಾಟಿಸಿದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ