ಕನ್ನಡದ ಮನೆ-ಮನ ಅಭಿಯಾನ

KannadaprabhaNewsNetwork |  
Published : Aug 25, 2025, 01:00 AM IST
ಕನ್ನಡದ ಮನೆ - ಕನ್ನಡದ ಮನ ಅಭಿಯಾನೆಃ ಸೂರಿ ಶ್ರೀನಿವಾಸ್ | Kannada Prabha

ಸಾರಾಂಶ

ತರೀಕೆರೆಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕೇಂದ್ರ ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಅವರ ಪರಿಕಲ್ಪನೆಯಂತೆ ಹಮ್ಮಿಕೊಂಡಿರುವ ಕನ್ನಡದ ಮನೆ ಕನ್ನಡದ ಮನ ಅಭಿಯಾನವನ್ನು ಜಿಲ್ಲೆಯಾದ್ಯಂತ ಎಲ್ಲಾ ತಾಲೂಕು ಗಳಲ್ಲೂ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸೂರಿ ಶ್ರೀನಿವಾಸ್

ಕನ್ನಡಪ್ರಭ ವಾರ್ತೆ, ತರೀಕೆರೆ

ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕೇಂದ್ರ ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಅವರ ಪರಿಕಲ್ಪನೆಯಂತೆ ಹಮ್ಮಿಕೊಂಡಿರುವ ಕನ್ನಡದ ಮನೆ ಕನ್ನಡದ ಮನ ಅಭಿಯಾನವನ್ನು ಜಿಲ್ಲೆಯಾದ್ಯಂತ ಎಲ್ಲಾ ತಾಲೂಕು ಗಳಲ್ಲೂ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ಜಿಲ್ಲೆಯಲ್ಲಿ ಈ ಅಭಿಯಾನದಲ್ಲಿ ಪಾಲ್ಗೊಳ್ಳುವವರು ತಮ್ಮ ಮನೆಗಳಲ್ಲಿ ಬಳಸುವ ಅದರಲ್ಲೂ ನಶಿಸಿ ಹೋಗುತ್ತಿರುವ ಕನ್ನಡ ಪದಗಳನ್ನು ಪಟ್ಟಿ ಮಾಡಿ ಕಸಾಪಗೆ ಕಳುಹಿಸಿದರೆ ಅದನ್ನು ಕೇಂದ್ರ ಪರಿಷತ್ತಿಗೆ ಕಳುಹಿಸಿ ಆ ಪದಗಳನ್ನು ಸಂಗ್ರಹಿಸಿ ಸಂಪಾದಕ ಮಂಡಳಿ ಪರಿಶೀಲಿಸಿ ನಿತ್ಯ ಕನ್ನಡದ ನಿಘಂಟು ಸಿದ್ಧಪಡಿಸಲಿದೆ. ಅತಿ ಹೆಚ್ಚು ಮನೆ ಬಳಕೆ ಕನ್ನಡ ಪದಗಳನ್ನು ಕಳಿಸಿದವರಿಗೆ ರಾಜ್ಯ ಹಾಗೂ ಜಿಲ್ಲಾಮಟ್ಟದಲ್ಲಿ ಬಹುಮಾನ ನೀಡಲಾಗುತ್ತದೆ ಎಂದು ಕಸಾಪ ತಿಳಿಸಿದೆ.ಕನ್ನಡದ ಅಪಾರ ಪದ ಸಂಪತ್ತನ್ನು ನಾವು ಬಳಸಿ ಉಳಿಸಿಕೊಳ್ಳಬೇಕಿದೆ ಆದ್ದರಿಂದ ಕನ್ನಡದ ಮನೆ ಕನ್ನಡದ ಮನ ಎಂಬ ಅಭಿಯಾನವನ್ನು ಪರಿಷತ್ತು ಆರಂಭಿಸಲಿದೆ. ಮನೆಯಲ್ಲಿ ಬಳಕೆಯಾಗುತ್ತಿರುವ ಕನ್ನಡ ಪದಗಳನ್ನು ಉಳಿಸಲು ಮಾಡುತ್ತಿರುವ ಪ್ರಯತ್ನ ಹಂಚಿಕೊಳ್ಳಲು ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.ಈ ಪದಗಳನ್ನು ಒಟ್ಟುಗೂಡಿಸಿ ನಿಘಂಟು ಸಿದ್ಧಪಡಿಸಲಾಗುತ್ತದೆ. ಅಧಿಕ ಅಚ್ಚ ಕನ್ನಡ ಪದಗಳನ್ನು ಬಳಸುವ ಮನೆಗಳನ್ನು ಗುರುತಿಸಿ ಕನ್ನಡದ ಮನೆ ಕನ್ನಡದ ಮನ ಎಂಬ ಅಭಿಮಾನದ ಗೌರವ ನೀಡಲಾಗುತ್ತದೆ. ನಮ್ಮ ಮನೆಗಳಲ್ಲಿ ಕನ್ನಡ ಉಳಿದರೆ ಅದು ಮನಕ್ಕೆ ತಾನಾಗಿಯೇ ಬರುತ್ತದೆ ಎಂಬ ನಿಟ್ಟಿನಲ್ಲಿ ಆದ್ದರಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪದಗಳನ್ನು ಕಳುಹಿಸಬೇಕಾದ ವಿಳಾಸ ಸೂರಿ ಶ್ರೀನಿವಾಸ್ ಅಧ್ಯಕ್ಷರು, ಜಿಲ್ಲಾ ಕಸಾಪ , ಅಜ್ಜಂಪುರ ಜಿ. ಸೂರಿ ರಸ್ತೆ ಕಡೂರು -577548 .ಮೊ.9449315663ಹೆಚ್ಚಿನ ಮಾಹಿತಿಗೆ ನವೀನ್ ಪೆನ್ನಯ್ಯ ಮೊ. 9972058159, ಸಂಘಟನಾ ಕಾರ್ಯದರ್ಶಿ, ಜಿಲ್ಲಾ ಸಂಚಾಲಕರಾದ ಸುನಿತಾ ನವೀನ್ ಗೌಡ 8073233268, ಜಿಲ್ಲಾ ಮಟ್ಟದ ಕನ್ನಡದ ಮನೆ- ಕನ್ನಡದ ಮನ ಅಭಿಯಾನದ ಸಂಚಾಲಕರಾದ ಮುಗುಳಿ ಲಕ್ಷ್ಮೀ ದೇವಮ್ಮ 8105647671 ಇವರನ್ನು ಸಂಪರ್ಕಿಸಲು ಕೋರಲಾಗಿದೆ.

--

23ಕೆಟಿಆರ್.ಕೆ.20ಃ ಸೂರಿ ಶ್ರೀನಿವಾಸ್

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ