ಉದ್ಯಮಿಯಾಗಲು ವೃತ್ತಿ ಕೌಶಲ ಬೆಳೆಸಿಕೊಳ್ಳಿ

KannadaprabhaNewsNetwork |  
Published : Aug 25, 2025, 01:00 AM IST
23ಕೆಜಿಎಫ್‌1 | Kannada Prabha

ಸಾರಾಂಶ

ಉದ್ದಿಮಶಾಹಿತ್ವ ಎಂಜಿನಿಯರಿಂಗ್ ಇನ್ನೊಂದು ಜೀವನ ಶೈಲಿ. ನಾಯಕತ್ವ, ಉದ್ದಿಮಶಾಹಿತ್ವ ವಿಭಿನ್ನವಾದರೂ ಅವುಗಳು ಸಾರುವ ಸಂದೇಶ ಒಂದೇ ಆಗಿದೆ. ಉದ್ದಿಮೆಶಾಹಿಗಳಾಗಿ ಯಶಸ್ಸು ಗಳಿಸಲು ಚರ್ಚೆ, ಉತ್ತಮ ಜನಪರ ಪರಿಣತಿ, ಕಠಿಣ ಪರಿಶ್ರಮ, ಉತ್ತೇಜನ ಅನಿವಾರ್ಯವಾಗಿದ್ದು, ಈ ರೀತಿಯ ಮೌಲ್ಯಗಳನ್ನು ಮತ್ತು ಕೌಶಲಗಳನ್ನು ಮೈಗೂಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೆಜಿಎಫ್ಎಂಜಿನಿಯರಿಂಗ್ ಪದವೀಧರರಿಗೆ ರಾಷ್ಟ್ರಮಟ್ಟದಲ್ಲಿ ವ್ಯಾಪಕ ಬೇಡಿಕೆಯಿದ್ದು, ಈ ಪದವಿ ಗಳಿಸಿದ ವಿದ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ಕೆಲಸ ನಿಭಾಯಿಸುವ ಸಾಮರ್ಥ್ಯ ಪಡೆದುಕೊಳ್ಳಬೇಕು ಎಂದು ವಿಪ್ರೋ ಸಂಸ್ಥೆಯ ಮಾನವ ಸಂಪ್ಮೂಲ ಹಾಗೂ ಗ್ಲೋಬಲ್ ಮುಖ್ಯಸ್ಥರಾದ ಪ್ರವೀಣ್ ಕಾಮತ್ ಕುಮ್ಲಾ ಹೇಳಿದರು. ಡಾ.ತಿಮ್ಮಯ್ಯ ತಾಂತ್ರಿಕ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ೩೬ ನೇ ವರ್ಷದ ಬ್ಯಾಚ್‌ನ ವಿದ್ಯಾರ್ಥಿಗಳ ಪದವಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳಿಗೆ ಗೌವರವ ನೀಡುವಂತಹ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದರು.

ವೃತ್ತಿ ಕೌಶಲ ಬೆಳೆಸಿಕೊಳ್ಳಿ

ಉದ್ದಿಮಶಾಹಿತ್ವ ಎಂಜಿನಿಯರಿಂಗ್ ಇನ್ನೊಂದು ಜೀವನ ಶೈಲಿ. ನಾಯಕತ್ವ, ಉದ್ದಿಮಶಾಹಿತ್ವ ವಿಭಿನ್ನವಾದರೂ ಅವುಗಳು ಸಾರುವ ಸಂದೇಶ ಒಂದೇ ಆಗಿದೆ. ಉದ್ದಿಮೆಶಾಹಿಗಳಾಗಿ ಯಶಸ್ಸು ಗಳಿಸಲು ಚರ್ಚೆ, ಉತ್ತಮ ಜನಪರ ಪರಿಣತಿ, ಕಠಿಣ ಪರಿಶ್ರಮ, ಉತ್ತೇಜನ ಅನಿವಾರ್ಯವಾಗಿದ್ದು, ಈ ರೀತಿಯ ಮೌಲ್ಯಗಳನ್ನು ಮತ್ತು ಕೌಶಲಗಳನ್ನು ಮೈಗೂಡಿಸಿಕೊಂಡ ವಿದ್ಯಾರ್ಥಿಗಳು ಜೀವನದಲ್ಲಿ, ವೃತ್ತಿಯಲ್ಲಿ ಯಶಸ್ಸು ಕಾಣುವುದಾಗಿ ತಿಳಿಸಿದರು. ಡಾ.ಟಿ.ವೆಂಕಟವರ್ದನ್ ಮಾತನಾಡಿ, ಭವಿಷ್ಯದ ಎಂಜಿನಿಯರ್‌ಗಳು ಹಾಗೂ ಕಾರ್ಪೋರೇಟ್ ನಾಯಕರು ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ಕಾಲೇಜಿಗೆ ಮತ್ತು ಪೋಷಕರಿಗೆ ಉತ್ತಮ ಹೆಸರನ್ನು ತಂದುಕೊಟ್ಟು ನಿಮ್ಮ ಭವಿಷ್ಯದ ಜೀವನಮಟ್ಟವು ಉತ್ತಮವಾಗಿರಲೆಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಸೈಯದ್ ಅರಿಫ್‌, ಕಾಲೇಜಿನ ಉಪಾಧ್ಯಕ್ಷ ಹರ್ಷ ವೆಂಕಟವರ್ಧನ್, ಉಪ ಪ್ರಾಂಶುಪಾಲ ಡಾ.ಶೆಣೈ, ಕಾಲೇಜಿನ ಸದಸ್ಯರಾದ ಮಣೀವಣ್ಣನ್, ವೆಂಕಟಕೃಷ್ಣ, ಕರ‍್ಯದರ್ಶೀ ಕೃಷ್ಣಕುಮಾರ್ ಉಪಸ್ಥಿತರಿದ್ದರು. ೨೩ಕೆಜಿಎಫ್೧ಡಾ.ತಿಮ್ಮಯ್ಯ ತಾಂತ್ರಿಕ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ೩೬ ನೇ ವರ್ಷದ ಪದವಿ ಪ್ರಾಧನ ಸಮಾರಂಭವನ್ನು ವಿಪ್ರೋ ಸಂಸ್ಥೆಯ ಮಾನವ ಸಂಪ್ಮೂಲ ಹಾಗೂ ಗ್ಲೋಬಲ್ ಮುಖ್ಯಸ್ಥರಾದ ಪ್ರವೀಣ್ ಕಾಮತ್ ಕುಮ್ಲಾ ಉದ್ಘಾಟಿಸಿದರು..

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ