ನ್ಯಾಯಮೂರ್ತಿಗಳ ಮೇಲಿನ ದಾಳಿ ಸಂಭ್ರಮ ಖಂಡನೀಯ: ಪ್ರದೀಪ್ ಬೇಲಾಡಿ

KannadaprabhaNewsNetwork |  
Published : Oct 08, 2025, 01:01 AM IST
ಪ್ರದೀಪ್ ಬೇಲಾಡಿ | Kannada Prabha

ಸಾರಾಂಶ

ನ್ಯಾಯಾಲಯದ ಕಲಾಪ ನಡೆಯುತ್ತಿರುವ ಸಂದರ್ಭದಲ್ಲೇ ದೇಶದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಪ್ರಯತ್ನ ಮಾಡಿರುವುದು ಅತ್ಯಂತ ದುಃಖದ ಸಂಗತಿ. ಇದು ಕೇವಲ ವ್ಯಕ್ತಿಯ ಮೇಲಿನ ದಾಳಿ ಅಲ್ಲ, ಭಾರತದ ನ್ಯಾಯಾಂಗದ ಮೇಲಿನ ಕೋಮುವಾದಿ ಶಕ್ತಿಗಳ ನೇರ ದಾಳಿ. ಪ್ರಜಾಪ್ರಭುತ್ವ ರಾಷ್ಟ್ರದ ಘನತೆಗೆ ಈ ಘಟನೆ ಕಪ್ಪು ಚುಕ್ಕೆ ಹಚ್ಚಿದೆ ಎಂದು ಪ್ರದೀಪ್ ಬೇಲಾಡಿ ತಿಳಿಸಿದ್ದಾರೆ.

ಕಾರ್ಕಳ: ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಮೇಲಿನ ದಾಳಿ ಯತ್ನ ಖಂಡನೀಯವೆಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ತಿಳಿಸಿದ್ದಾರೆ.

ನ್ಯಾಯಾಲಯದ ಕಲಾಪ ನಡೆಯುತ್ತಿರುವ ಸಂದರ್ಭದಲ್ಲೇ ದೇಶದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಪ್ರಯತ್ನ ಮಾಡಿರುವುದು ಅತ್ಯಂತ ದುಃಖದ ಸಂಗತಿ. ಇದು ಕೇವಲ ವ್ಯಕ್ತಿಯ ಮೇಲಿನ ದಾಳಿ ಅಲ್ಲ, ಭಾರತದ ನ್ಯಾಯಾಂಗದ ಮೇಲಿನ ಕೋಮುವಾದಿ ಶಕ್ತಿಗಳ ನೇರ ದಾಳಿ. ಪ್ರಜಾಪ್ರಭುತ್ವ ರಾಷ್ಟ್ರದ ಘನತೆಗೆ ಈ ಘಟನೆ ಕಪ್ಪು ಚುಕ್ಕೆ ಹಚ್ಚಿದೆ ಎಂದು ಹೇಳಿದ್ದಾರೆ.

ಶೂ ಎಸೆಯಲು ಪ್ರಯತ್ನಿಸಿದ ವ್ಯಕ್ತಿ ವೃತ್ತಿಯಲ್ಲಿ ವಕೀಲನಾಗಿದ್ದು, ಬಿಜೆಪಿ ಪರವಾಗಿರುವ ಸಂಘಟನೆಗಳ ಸದಸ್ಯನಾಗಿರುವುದಾಗಿ ವರದಿಯಾಗಿದೆ. ಬಿಜೆಪಿ ಪರ ಸಂಘಟನೆಗಳ ಅಸಹಿಷ್ಣುತೆ ಮಿತಿ ಮೀರಿದೆ, ಆದರೆ ಅದನ್ನು ನಿಯಂತ್ರಿಸಬೇಕಾದ ಕೇಂದ್ರ ಸರ್ಕಾರವೇ ಅವರ ಬೆನ್ನಿಗೆ ನಿಂತಿದೆ ಎಂದು ಬೇಲಾಡಿ ಆರೋಪಿಸಿದ್ದಾರೆ.

ಈ ಘಟನೆಗೆ ವಿರೋಧ ಪಕ್ಷಗಳು ತೀವ್ರ ಖಂಡನೆ ವ್ಯಕ್ತಪಡಿಸಿದ್ದರೂ, ಆಡಳಿತ ಪಕ್ಷದ ನಾಯಕರಾದ ಬಿಜೆಪಿ ಸಂಸದರು, ಮಂತ್ರಿಗಳು, ಶಾಸಕರು ಮೌನವಾಗಿರುವುದು ಮೌನಂ ಸಮ್ಮತಿ ಲಕ್ಷಣಮ್ ಎಂಬಂತೆ ಕಾಣುತ್ತದೆ. ಕಾರ್ಕಳದ ಶಾಸಕ ಸುನೀಲ್ ಕುಮಾರ್ ಅವರು ಸಾಮಾನ್ಯ ವಿಷಯಗಳ ಮೇಲೂ ಹೇಳಿಕೆ ನೀಡುವವರು, ಆದರೆ ಈ ಗಂಭೀರ ಘಟನೆಯ ಕುರಿತು ಮೌನವಾಗಿರುವುದು ಅವರ ಮನೋಭಾವವನ್ನು ಸ್ಪಷ್ಟಪಡಿಸುತ್ತದೆ ಎಂದು ಅವರು ಟೀಕಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು ಈ ಘಟನೆಯನ್ನು ಸಂಭ್ರಮಿಸುತ್ತಿರುವುದು ಅತ್ಯಂತ ವಿಷಾದನೀಯ. ಇದು ಬಿಜೆಪಿಯ ನಿಜವಾದ ಮನಸ್ಥಿತಿಯ ಪ್ರತಿಫಲನವಾಗಿದೆ ಎಂದು ಪ್ರದೀಪ್ ಬೇಲಾಡಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಾಮರಸ್ಯದ ಸಂಕ್ರಾತಿ
48 ಪ್ರಕರಣದ 14 ಜನ ಆರೋಪಿಗಳ ಬಂಧನ