ಬೇಲೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

KannadaprabhaNewsNetwork | Published : Feb 10, 2025 1:45 AM

ಸಾರಾಂಶ

ದೆಹಲಿಯ ಮತದಾರರು ಭಾರತೀಯ ಜನತಾ ಪಾರ್ಟಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿಯ ಬೆಂಬಲಕ್ಕೆ ನಿಂತು ಬಿಜೆಪಿಗೆ ಅಧಿಕಾರವನ್ನು ನೀಡುವ ಮೂಲಕ ಕೇಜ್ರಿವಾಲ್ ಅವರ ಭ್ರಷ್ಟ ಆಡಳಿತಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಹಾಸನ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ರೇಣುಕುಮಾರ್ ಹೇಳಿದರು. ದೆಹಲಿಯಲ್ಲಿ ಬಿಜೆಪಿ ಅಧಿಕಾರ ಪಡೆದ ಹಿನ್ನೆಲೆಯಲ್ಲಿ ಬಿಜೆಪಿ ಘಟಕದಿಂದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ದೆಹಲಿಯ ಮತದಾರರು ಭಾರತೀಯ ಜನತಾ ಪಾರ್ಟಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿಯ ಬೆಂಬಲಕ್ಕೆ ನಿಂತು ಬಿಜೆಪಿಗೆ ಅಧಿಕಾರವನ್ನು ನೀಡುವ ಮೂಲಕ ಕೇಜ್ರಿವಾಲ್ ಅವರ ಭ್ರಷ್ಟ ಆಡಳಿತಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಹಾಸನ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ರೇಣುಕುಮಾರ್ ಹೇಳಿದರು.

ದೆಹಲಿಯಲ್ಲಿ ಬಿಜೆಪಿ ಅಧಿಕಾರ ಪಡೆದ ಹಿನ್ನೆಲೆಯಲ್ಲಿ ಬಿಜೆಪಿ ಘಟಕದಿಂದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ ಸಂದರ್ಭದಲ್ಲಿ ಮಾತನಾಡಿ, ದೇಶದಲ್ಲಿ ಅತ್ಯಂತ ಭ್ರಷ್ಟತನದ ಆಡಳಿತವನ್ನು ನೀಡಿದ ಹೆಗ್ಗಳಿಕೆಗೆ ಮುಖ್ಯಮಂತ್ರಿ ಕೇಜ್ರಿವಾಲ್‌ರಿಗೆ ಸಲ್ಲುತ್ತದೆ. ತನ್ನ ಅಧಿಕಾರದಲ್ಲಿ ಸ್ವಾರ್ಥ ಮತ್ತು ಸ್ಚಜನ ಪಕ್ಷಪಾತವನ್ನು ಬಳಸಿಕೊಂಡು ಜೈಲು ಸೇರಿದ್ದ ಕೇಜ್ರಿವಾಲ್‌ ಮುಖವಾಡವನ್ನು ದೆಹಲಿಯ ಮತದಾರರು ಬಯಲು ಮಾಡಿದ್ದಾರೆ. ಅಲ್ಲದೇ ದೇಶದಲ್ಲಿ ಸುಭದ್ರ ಮತ್ತು ಅಭಿವೃದ್ಧಿ ಪರ ಆಡಳಿತವನ್ನು ಪ್ರಧಾನಿ ನೀಡುತ್ತಾರೆ ಎಂಬ ಆಶಾಭಾವನೆಯಿಂದ ಅವರಿಗೆ ಬೆಂಬಲವನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇಡೀ ದೇಶದ ರಾಜ್ಯಗಳಲ್ಲಿ ಬಿಜೆಪಿಯ ಬಾವುಟ ಹಾರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಕೌರಿ ಸಂಜು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯ ಆಡಳಿತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ. ಆದರೆ ನಮ್ಮ ದೇಶದಲ್ಲಿನ ನಕಲಿ ಕಾಂಗ್ರೆಸ್ ಗಾಂಧಿಗಳು ಟೀಕೆ, ಟಿಪ್ಪಣಿ ಮಾಡುವುದರ ಮೂಲಕವಾಗಿ ಜನರಿಗೆ ಇಲ್ಲಸಲ್ಲದ ಆಸೆ ಆಮಿಷಗಳನ್ನು ನೀಡಿ ಓಟು ಪಡೆಯುವ ಹುನ್ನಾರ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದೆಹಲಿಯ ಮತದಾರರು ಕಳೆದ 27 ವರ್ಷಗಳ ಬಳಿಕ ಬಿಜೆಪಿ ಪಕ್ಷಕ್ಕೆ ಅಧಿಕಾರವನ್ನು ನೀಡಿರುವುದು ಮೋದಿಯವರ ಆಡಳಿತ ವೈಖರಿಗೆ ಸಾಕ್ಷಿಯಾಗಿದೆ. ಅಲ್ಲದೆ ಶೂನ್ಯ ಸಾಧನೆಗೆ ನಕಲಿ ಕಾಂಗ್ರೆಸ್ ಗಾಂಧಿಗಳು ಪಾತ್ರರಾಗಿದ್ದಾರೆ ಎಂದು ಕಿಡಿಕಾರಿದ ಅವರು, ಮುಂದಿನ ದಿನಗಳಲ್ಲಿ 2028ಕ್ಕೆ ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವದು ಶತಃಸಿದ್ಧವೆಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೋಗಿಲೆಮನೆ ಅರುಣಕುಮಾರ್, ರಮೇಶ, ಪುರಸಭಾ ಸದಸ್ಯ ಪ್ರಭಾಕರ್, ಶ್ರೀನಿವಾಸ್, ಚಂದ್ರಶೇಖರ್, ಯತೀಶ್, ಇತರರು ಇದ್ದರು.

Share this article