ವಾರಕರಿ ಸಂಪ್ರದಾಯದಲ್ಲಿ ಮಕ್ಕಳ ಸಂಭ್ರಮ

KannadaprabhaNewsNetwork |  
Published : Jul 19, 2024, 01:01 AM IST
ರವೀಂದ್ರನಾಥ ಟಾಗೋರ್ ಶಾಲೆಯಲ್ಲಿ ಏಕಾದಶಿ ಆಚರಣೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಏಕಾದಶಿ ಹಿನ್ನೆಲೆ ನಗರದ ಛತ್ರಪತಿ ಶಿವಾಜಿ ಮಹಾರಾಜರ ಶಿಕ್ಷಣ ಸಂಸ್ಥೆಯ ರವೀಂದ್ರನಾಥ ಟಾಗೋರ್ ಶಾಲೆಯಲ್ಲಿ ವಿದ್ಯಾರ್ಥಿಗಳು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪವಿತ್ರ ಕ್ಷೇತ್ರ ಪಾಂಡುರಂಗ ವಿಠ್ಠಲನ ವಿಶೇಷ ಕಾರ್ಯಕ್ರಮ ಆಯೋಜಿಸಿ ಸಂಭ್ರಮದಿಂದ ನಲಿದಾಡಿದರು. ಚಿಣ್ಣರು ವಾರಕರಿ ಸಂಪ್ರದಾಯದಂತೆ ಉತ್ತರ ಕರ್ನಾಟಕ ಶೈಲಿಯಲ್ಲಿ ಪಂಚೆಯುಟ್ಟು, ನೆಹರು ಶರ್ಟ್ ಹಾಗೂ ತಲೆಯ ಮೇಲೆ ಗಾಂಧಿ ಟೋಪಿ ಹಾಕಿ ಹಣೆಯ ಮೇಲೆ ಪಾಂಡುರಂಗನ ಭಕ್ತಿಯ ಪ್ರತೀಕವಾದ ಗಂಧದ ತಿಲಕವನಿಟ್ಟು ಕೈಯಲ್ಲಿ ಘಂಟೆ ಹಿಡಿದು ಭಾರಿಸುತ್ತ ವಿಠ್ಠಲನ ಧ್ಯಾನ ಮಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಏಕಾದಶಿ ಹಿನ್ನೆಲೆ ನಗರದ ಛತ್ರಪತಿ ಶಿವಾಜಿ ಮಹಾರಾಜರ ಶಿಕ್ಷಣ ಸಂಸ್ಥೆಯ ರವೀಂದ್ರನಾಥ ಟಾಗೋರ್ ಶಾಲೆಯಲ್ಲಿ ವಿದ್ಯಾರ್ಥಿಗಳು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪವಿತ್ರ ಕ್ಷೇತ್ರ ಪಾಂಡುರಂಗ ವಿಠ್ಠಲನ ವಿಶೇಷ ಕಾರ್ಯಕ್ರಮ ಆಯೋಜಿಸಿ ಸಂಭ್ರಮದಿಂದ ನಲಿದಾಡಿದರು. ಚಿಣ್ಣರು ವಾರಕರಿ ಸಂಪ್ರದಾಯದಂತೆ ಉತ್ತರ ಕರ್ನಾಟಕ ಶೈಲಿಯಲ್ಲಿ ಪಂಚೆಯುಟ್ಟು, ನೆಹರು ಶರ್ಟ್ ಹಾಗೂ ತಲೆಯ ಮೇಲೆ ಗಾಂಧಿ ಟೋಪಿ ಹಾಕಿ ಹಣೆಯ ಮೇಲೆ ಪಾಂಡುರಂಗನ ಭಕ್ತಿಯ ಪ್ರತೀಕವಾದ ಗಂಧದ ತಿಲಕವನಿಟ್ಟು ಕೈಯಲ್ಲಿ ಘಂಟೆ ಹಿಡಿದು ಭಾರಿಸುತ್ತ ವಿಠ್ಠಲನ ಧ್ಯಾನ ಮಾಡಿದರು. ಮಕ್ಕಳು ರುಕ್ಮಿಣಿ ವೇಷ ತೊಟ್ಟು ಫಂಡರಪುರ ವಿಠ್ಠಲನ ಏಕಾದಶಿಯ ಮಹತ್ವವನ್ನು ತಿಳಿಸಿಕೊಟ್ಟರು.

ಭಗವಾಧ್ವಜ ಹಿಡಿದ ವಾರಕರಿಗಳು, ತುಳಸಿ ಕಟ್ಟೆ ಹೊತ್ತ ಪುಟಾಣಿಗಳು ಹಾಗೂ ತಾಳ, ತಂಬೂರಿ ಬಾರಿಸುತ್ತ ವಿಠಲ ನಾಮಸ್ಮರಣೆ ಮಾಡಿದರು. ಜೈಹರಿ ವಿಠಲ.. ಶ್ರೀ ಹರಿ ವಿಠಲ ಎನ್ನುವ ಜಯಘೋಷದೊಂದಿಗೆ ಸಖತ್ ಹೆಜ್ಜೆ ಹಾಕಿ ನರೆದವರನ್ನು ಭಕ್ತಿಯ ಲೋಕಕ್ಕೆ ಕರೆದೊಯ್ದರು. ಇದೇ ವೇಳೆ ಶಿಕ್ಷಕರು, ವಿದ್ಯಾರ್ಥಿಗಳು ವಿಠ್ಠಲನ ಕುರಿತು ಭಕ್ತಿ ಗೀತೆ ಹಾಡಿ ಗಮನ ಸೆಳೆದರು. ಈ ವೇಳೆ ಪಾಲ್ಗೊಂಡಿದ್ದ ಪುಟಾಣಿಗಳ ಪೋಷಕರು ತಮ್ಮ ಮಕ್ಕಳನ್ನು ವಿಠ್ಠಲ ರುಕ್ಮಿಣಿ ವೇಷದಲ್ಲಿ ಕಂಡು ಸಂತಸಪಟ್ಟರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶಿವಾಜಿ ಗಾಯಕವಾಡ, ಕಾರ್ಯದರ್ಶಿ ರೀತಾ ಗಾಯಕವಾಡ, ಮಹಾನಗರ ಪಾಲಿಕೆ ಸದಸ್ಯ ಪರಶುರಾಮ ಹೊಸಮನಿ, ಪ್ರಾಚಾರ್ಯ ಮಂಜುನಾಥ, ಉಪ ಪ್ರಾಚಾರ್ಯ ಶಿವರಾಮ ಜಮ್ಮನಕಟ್ಟಿ ದಿಂಡಿ ಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!