ನಗರದ ವಿನಾಯಕ ಕಲ್ಯಾಣ ಮಂಟಪದಿಂದ ಮುಷ್ಟೂರು ಹಾಗೂ ಮುಷ್ಟೂರಿನ ಕೆರೆಕಟ್ಟೆವರೆವಿಗೆ ಸುಸಜ್ಜಿತವಾಗಿ ಸಿಮೆಂಟ್ ರಸ್ತೆ ನಿರ್ಮಾಣ ಆಗುತ್ತಿರುವುದರಿಂದಾಗಿ ಈ ಭಾಗದಿಂದ ಹಾದು ಹೋಗುತ್ತಿದ್ದ ಜನತೆಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕಳೆದೆರಡು ದಶಕಗಳಿಂದ ನಗರದಿಂದ ಮುಷ್ಟೂರು-ಆದಿಯೋಗಿ ಗೇಟ್ ಮಾರ್ಗ ಎಸ್.ಗೊಲ್ಲಹಳ್ಳಿ ಕಡೆ ಹೋಗುವ ರಸ್ತೆ ಹದಗೆಟ್ಟಿದ್ದು, ಇದೀಗ ಸಿಮೆಂಟ್ ರಸ್ತೆಯಾಗಿ ಮಾರ್ಪಡುತ್ತಿರುವುದರಿಂದಾಗಿ ಈ ಭಾಗದ ಜನತೆಗೆ ತುಸು ನಿರಾಳವಾಗಿದೆ.ಕಳೆದ ಎರಡು ದಶಕಗಳಿಂದಲೂ ಸಿಮೆಂಟ್ ರಸ್ತೆ ಇರಲಿ ಸರಿಯಾಗಿ ಜಲ್ಲಿ ಕಾಣದ ರಸ್ತೆಯಿಂದ ಈ ಭಾಗದಲ್ಲಿ ಹಾದುಹೋಗುವ ಜನರು ವ್ಯವಸ್ಥೆಯ ವಿರುದ್ಧ ಹರಿಹಾಯ್ದಿದ್ದರು.ಇದೀಗ ನಗರದ ವಿನಾಯಕ ಕಲ್ಯಾಣ ಮಂಟಪದಿಂದ ಮುಷ್ಟೂರು ಹಾಗೂ ಮುಷ್ಟೂರಿನ ಕೆರೆಕಟ್ಟೆವರೆವಿಗೆ ಸುಸಜ್ಜಿತವಾಗಿ ಸಿಮೆಂಟ್ ರಸ್ತೆ ನಿರ್ಮಾಣ ಆಗುತ್ತಿರುವುದರಿಂದಾಗಿ ಈ ಭಾಗದಿಂದ ಹಾದು ಹೋಗುತ್ತಿದ್ದ ಜನತೆಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ.ಕಳೆದ ಎರಡು ದಶಕಗಳಿಂದಲೂ ರಸ್ತೆ ಟಾರ್ ಕಾಣದೆ ಗುಣಿ ಬಿದ್ದ ರಸ್ತೆಗಳಲ್ಲಿ ಎದ್ದು ಬಿದ್ದು ಹೋಗಬೇಕಾದ ಅನಿವಾರ್ಯತೆ ಉಂಟಾಗಿತ್ತು. ಅಲ್ಲದೆ ಸಣ್ಣ ಮಳೆ ಬಂದರೂ ಜನ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ರಸ್ತೆಯಲ್ಲಿ ಗದ್ದೆ ಪೈರು ನಾಟಿ ಮಾಡಬೇಕು ಅಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ಇದರಿಂದಾಗಿ ಜನ ಬೇಸತ್ತು ವ್ಯವಸ್ಥೆ ವಿರುದ್ದ ಕಿಡಿಕಾರಿ ಸಾಕಷ್ಟು ಬಾರಿ ಯಾತನೆಯನ್ನು ಅನುಭವಿಸಿದ್ದರು.ಯುವ ಮುಖಂಡನ ಸಾಮಾಜಿಕ ಕಳಕಳಿ:ಸಂಪೂರ್ಣ ಹಾಳಾಗಿದ್ದ ಈ ರಸ್ತೆಯ ಯಾತನೆ ಕಂಡ ಮುಷ್ಟೂರು ಗ್ರಾಮದ ಯುವ ಮುಖಂಡ ಶ್ರೀಧರ್ ಎಂಬುವವರು ತನ್ನ ವೈಯಕ್ತಿಕ ಹಿತಾಸಕ್ತಿಯಿಂದ ರಸ್ತೆಗೆ ಒಂದಷ್ಟು ಚೆಲ್ಲಿ ಹಾಗೂ ಮಣ್ಣು ಹಾಕಿಸಿ ರಸ್ತೆಯ ಮೂಲಕ ಜನ ಸ್ವಲ್ಪ ದಿನ ಆದರೂ ಸುಧಾರಿಸಿಕೊಂಡು ಹೋಗುವಂತೆ ಮಾಡಿದ್ದರು. ಅಲ್ಲದೆ ಸಾಕಷ್ಟು ಬಾರಿ ಗ್ರಾಮಸ್ಥರೊಂದಿಗೆ ಸೇರಿ ರಸ್ತೆ ತಡೆ ನಡೆಸಿ. ಶಾಸಕ ಪ್ರದೀಪ್ ಈಶ್ವರ್ ಅವರ ಗಮನವನ್ನು ಸಹ ಸೆಳೆದು ಈ ರಸ್ತೆ ದುರಸ್ತಿ ಮಾಡಿಸಿಕೊಡಲು ಮನವಿಯನ್ನ ಸಲ್ಲಿಸಿದ್ದ ಮನವಿಯ ಮೇರೆಗೆ ಅವರು ತಮ್ಮ ಅನುದಾನದಲ್ಲಿ ರಸ್ತೆಯನ್ನು ಮಾಡಿಸಿ ಕೊಡುವ ಇಂಗಿತ ವ್ಯಕ್ತಪಡಿಸಿದರು.ಅದರಂತೆ ಕಳೆದ 15 ದಿನಗಳಿಂದ ಈ ರಸ್ತೆ ವ್ಯವಸ್ಥಿತವಾಗಿ ಸಿಮೆಂಟ್ ರಸ್ತೆಯಾಗಿ ಮಾರ್ಪಡುತ್ತಿದೆ. ಇನ್ನು ಒಂದು ತಿಂಗಳ ವರವಿಗೆ ಸಿಮೆಂಟ್ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಈ ರಸ್ತೆಯ ಮೂಲಕ ಆದಿಯೋಗಿಶಿವ, ವಡ್ರೆಪಾಳ್ಯ, ಆವಲಗುರ್ಕಿ ಎಸ್.ಗೊಲ್ಲಹಳ್ಳಿ ಮಾರ್ಗವಾಗಿ ಕೇತೇನಹಳ್ಳಿ ಗುಡಿಬಂಡೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಇನ್ನು ಕೆಲವೇ ದಿನಗಳಲ್ಲಿ ಸುಗಮ ಹಾದಿ ಕಲ್ಪಿಸಲಿದೆ. ಮುಸ್ಟೂರಿನ ಶ್ರೀಧರ್ ಸಹ ಗುಣಮಟ್ಟದ ರಸ್ತೆ ಹಾಗೂ ನಿಗದಿತ ವೇಳೆಗೆ ಸಮರ್ಪಕವಾಗಿ ಮಾಡುತ್ತಿರುವುದರ ಬಗ್ಗೆ ಕಾಲ ಕಾಲಕ್ಕೆ ಶಾಸಕರಿಗೆ ಮಾಹಿತಿಯನ್ನು ನೀಡಿ ಸಾರ್ವಜನಿಕರ ಹಿತಾಸಕ್ತಿ ಬಯಸಿ ಕಾರ್ಯನಿರ್ವಹಿಸುತ್ತಿರುವುದು ಅವರ ಸಾಮಾಜಿಕ ಕಾಳಜಿ ಎತ್ತಿ ತೋರಿಸಿದೆ.ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನೊಂದು ತಿಂಗಳಲ್ಲಿ ಚಿಕ್ಕಬಳ್ಳಾಪುರ ನಗರದಿಂದ ಕೇತೇನಹಳ್ಳಿ ಕಡೆಗೆ ತೆರಳುವ ಈ ರಸ್ತೆಗೆ ಮೋಕ್ಷ ಪ್ರಾಪ್ತಿಯಾಗಿ ಲೋಕಕಲ್ಯಾಣಕ್ಕಾಗಿ ಸಮರ್ಪಣೆ ಗೊಳ್ಳಲಿದೆ. ಆಗ ಈ ರಸ್ತೆಯ ಮೂಲಕ ಆದಿಯೋಗಿ ಕಡೆ ಬೆಂಗಳೂರು ಸೇರಿದಂತೆ ದಿನಂಪ್ರತಿ ಇತರೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಹಾದು ಹೋಗುವ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಲಿದೆ.
ಸಿಕೆಬಿ-3 ನಗರದ ವಿನಾಯಕ ಕಲ್ಯಾಣ ಮಂಟಪದಿಂದ ಮುಷ್ಟೂರು ಹಾಗೂ ಮುಷ್ಟೂರಿನ ಕೆರೆಕಟ್ಟೆವರೆವಿಗೆ ಸುಸಜ್ಜಿತವಾಗಿ ನಿರ್ಮಾಣ ಆಗುತ್ತಿರುವ ಸಿಮೆಂಟ್ ರಸ್ತೆ ಕಾಮಗಾರಿ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.