ಹುಬ್ಬಳ್ಳಿ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರು, ಲೋಕೋಪಯೋಗಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸೇರಿ ವಿವಿಧ ಇಲಾಖೆ ಸಿಬ್ಬಂದಿ ಗಣತಿ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದ್ದು, 2047 ಬ್ಲಾಕ್ ಮಾಡಲಾಗಿದೆ. ಪ್ರತಿ ಬ್ಲಾಕ್‌ಗೆ ಒಬ್ಬರಂತೆ 2047 ಗಣತಿದಾರರನ್ನು ನೇಮಕ ಮಾಡಲಾಗಿದ್ದು, ಪ್ರತಿ ಗಣತಿದಾರರಿಗೆ 180 ಮನೆ ಬರಲಿವೆ ಎಂದು ವಿವರಿಸಿದರು.
ಆರು ಬ್ಲಾಕ್‌ಗೆ ಒಬ್ಬರಂತೆ 375 ಸೂಪರ್‌ವೈಸರ್ ನೇಮಕ ಮಾಡಿದ್ದು ಪಾಲಿಕೆ ವ್ಯಾಪ್ತಿಯಲ್ಲಿ ಇಬ್ಬರು ಮಾಸ್ಟರ್ ಟ್ರೇನರ್‌ಗಳಿದ್ದಾರೆ. ಗಣತಿದಾರರಿಗೆ ತರಬೇತಿ ನೀಡಲು 30 ಜನ ಮಾಸ್ಟರ್ ಟ್ರೇನರ್ ನೇಮಿಸಿದ್ದು ಒಟ್ಟು 2628 ಸಿಬ್ಬಂದಿ ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಗಣತಿದಾರರಿಗೆ ಏ. 3,4 ಮತ್ತು 5ರಂದು ಧಾರವಾಡದ ಜೆಎಸ್‌ಎಸ್ ಕಾಲೇಜು, ಹುಬ್ಬಳ್ಳಿಯ ಮಹಿಳಾ ಪಾಲಿಟೆಕ್ನಿಕ್ ಕಾಲೇಜು, ಐಬಿಎಂಆರ್ ಕಾಲೇಜಿನಲ್ಲಿ ತರಬೇತಿ ನಡೆಯಲಿದೆ. ಗಣತಿ ಕಾರ್ಯಕ್ಕೆ ನೇಮಕವಾದವರು ಕೇಂದ್ರ ಸ್ಥಾನದಲ್ಲಿ ಇರಬೇಕು ಎಂದು ಸೂಚಿಸಲಾಗಿದೆ ಎಂದರು.ಇದೇ ವೇಳೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಯಲಿದ್ದು 800 ಜನ ಬಿಎಲ್‌ಒ ನೇಮಕ ಮಾಡಲಾಗಿದೆ. ಬಹುತೇಕ ಪಾಲಿಕೆ ಸಿಬ್ಬಂದಿ ಎಸ್‌ಐಆರ್‌ಗೆ ನೇಮಕ ಮಾಡಲಾಗಿದೆ. ಉಳಿದಂತೆ ಶಿಕ್ಷಣ, ಕಂದಾಯ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಗಣತಿಗೆ ಬಳಕೆ ಮಾಡಲಾಗುತ್ತಿದೆ ಎಂದರು.
ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿದಾಗ ಅಂತರ್ಜಾಲ ಇಲ್ಲದ ಸ್ಥಳದಲ್ಲಿ ಸಮೀಕ್ಷೆ ನಡೆಸುವುದು ಕಷ್ಟವಾಗುತ್ತಿತ್ತು. ಆದರೆ, ಜನಗಣತಿ ವಿಷಯದಲ್ಲಿ ಆ ರೀತಿ ಆಗುವುದಿಲ್ಲ. ಇಲ್ಲಿ ಆಪ್‌ಲೈನ್, ಆನ್‌ಲೈನ್ ಎರಡು ಬಗೆಯಲ್ಲೂ ಗಣತಿ ಕಾರ್ಯ ಕೈಗೊಳ್ಳಬಹುದಾಗಿದೆ. ಆಪ್‌ಲೈನ್ ಮೂಲಕ ಗಣತಿ ಕಾರ್ಯ ನಡೆಸಿ ಅಂತರ್ಜಾಲ ಇರುವ ಸ್ಥಳದಲ್ಲೇ ತೆರಳಿ ಪೂರ್ಣಗೊಳಿಸಬಹುದಾಗಿದೆ ಎಂದು ಮಾಸ್ಟರ್ ಟ್ರೇನರ್ ತಿಳಿಸಿದರು.