ಕನ್ನಡಪ್ರಭ ವಾರ್ತೆ, ತುಮಕೂರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಆರ್‌ಟಿಪಿ ಕನ್ವೆನ್‌ಷೆನ್ ಹಾಲ್‌ನಲ್ಲಿ ಅಂದು ಬೆಳಿಗ್ಗೆ 10.30 ಕ್ಕೆ ಆರಂಭವಾಗುವ ಸಮಾರಂಭದಲ್ಲಿ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಎನ್.ಆರ್.ಪುರದ ಸಿಂಹಗದ್ದೆ ಬಸ್ತಿಮಠದ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ವಾಸವಿ ಪೀಠಂನ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಮಾರಂಭ ಉದ್ಘಾಟಿಸಿದರೆ, ಕೇಂದ್ರ ಸಚಿವ ವಿ.ಸೋಮಣ್ಣ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಟಿ.ಬಿ. ಜಯಚಂದ್ರ, ಬಿ. ಸುರೇಶ್‌ಗೌಡ, ಕೆ.ಎನ್. ರಾಜಣ್ಣ, ಎಸ್.ಆರ್.ಶ್ರೀನಿವಾಸ್, ಆರ್.ರಾಜೇಂದ್ರ, ಟಿಜಿಎಂಸಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ. ದಿವ್ಯಾನಂದಮೂರ್ತಿ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಮಧ್ಯಾಹ್ನ 3.30ಕ್ಕೆ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯದ ಸಮಾರಂಭದಲ್ಲಿ 70 ವರ್ಷ ವಯಸ್ಸು ಮೇಲ್ಪಟ್ಟ ಹಿರಿಯ ಸದಸ್ಯರು, ಮಾಜಿ ಅಧ್ಯಕ್ಷರು, ನಿರ್ದೇಶಕರನ್ನು ಸನ್ಮಾನಿಸಲಾಗುವುದು. ಮಾಜಿ ಸಚಿವ ಸೊಗಡು ಶಿವಣ್ಣ, ಧಾನ್ಯ ವ್ಯಾಪಾರಿಗಳ ಸಂಘದ ಮಾಜಿ ಅಧ್ಯಕ್ಷ ಟಿ.ಕೆ.ನಂಜುಂಡಪ್ಪ ಮತ್ತಿತರರು ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.ಸಂಘದ ಉಪಾಧ್ಯಕ್ಷ ಸಿ.ಎಸ್. ನಂಜುಂಡಪ್ಪ, ಕಾರ್ಯದರ್ಶಿ ಕೆ.ವಿ. ಬೆಟ್ಟಯ್ಯ, ಜಂಟಿ ಕಾರ್ಯದರ್ಶಿ ಆರ್. ನಾಗಪ್ರಕಾಶ್, ಖಜಾಂಚಿ ನಟರಾಜ್ ಐವಾರ್, ನಿರ್ದೇಶಕರಾದ ಜಿ.ಎಚ್. ಪರಮಶಿವಯ್ಯ, ಟಿ.ಎಂ. ಚನ್ನಪ್ಪ, ಎ.ಆರ್. ಶ್ರೀನಾಥ್, ಎಚ್.ಎಸ್. ಸುರೇಶ್‌ಕುಮಾರ್, ಟಿ.ಎಚ್. ಪ್ರಸನ್ನಕುಮಾರ್, ಜಿ.ಸಿ. ಬಸವರಾಜು, ಜಿ.ಎಸ್. ಅರುಣಾಚಲಂ, ಎಂ.ಜಿ. ನಾಗೇಂದ್ರ, ಆರ್.ಎನ್. ಜ್ವಾಲನಪ್ಪ, ಸಿ.ಸರವಣನ್, ವ್ಯವಸ್ಥಾಪಕ ಸಿ.ಎನ್. ಉದಯ್‌ಕುಮಾರ್ ಹಾಜರಿದ್ದರು.