ಕೆ.ಆರ್.ಸಾಗರ ಅಣೆಕಟ್ಟೆಗೆ ಕೇಂದ್ರ ಬರ ಸಮಿತಿ ತಂಡ ಭೇಟಿ, ವಾಸ್ತವ ಸ್ಥಿತಿ ಪರಿಶೀಲನೆ

KannadaprabhaNewsNetwork |  
Published : Oct 04, 2026, 01:45 AM IST
3ಕೆಎಂಎನ್ ಡಿ14 | Kannada Prabha

ಸಾರಾಂಶ

ಈ ಭಾರಿ ಮಳೆ ಪ್ರಮಾಣ ಕಡಿಮೆಯಾಗಿ ನಾಲೆಗಳಿಗೆ ನೀರು ಬಿಡುಗಡೆ ಕಡಿಮೆಯಾಗಿದೆ. ಕೆರೆ-ಕಟ್ಟೆಗಳು, ಕುಡಿಯುವ ನೀರು ಮತ್ತು ರೈತರು ಅರೆ ಖುಷ್ಕಿ ಬೆಳೆಯುವಂತೆ ತಿಳಿಸಲಾಗಿದೆ. ಪ್ರಸ್ತುತ ಶೇಕಡಾ 50ಕ್ಕಿಂತ ಕಡಿಮೆ ನೀರು ಸಿಗಲಿದೆ. ಈ ಭಾಗಗಳಲ್ಲಿ ಶೇಕಡಾ 80 ರಷ್ಟು ರೈತರು ಎರಡು ಎಕರೆಗಿಂತ ಜಮೀನು ಉಳ್ಳವರಾಗಿದ್ದು, ಒಂದು ತಿಂಗಳು ತಡವಾಗಿ ನಾಟಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೇಂದ್ರ ಬರ ಸಮಿತಿ ಸದಸ್ಯ ಡಾ.ನವೀನ್ ಕುಮಾರ ಜೈನ್ ನೇತೃತ್ವದ ತಂಡ ತಾಲೂಕಿನ ಕೆ.ಆರ್.ಸಾಗರ ಅಣೆಕಟ್ಟೆಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಮಾಹಿತಿ ಪಡೆದರು.

ಇದಕ್ಕೂ ಮುನ್ನ ಕಬಿನಿ ಅಣೆಕಟ್ಟೆ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದ ಬರ ಸಮಿತಿ ಸದಸ್ಯ ತಂಡ ನಂತರ ಕೆ.ಆರ್.ಸಾಗರ ಅಣೆಕಟ್ಟೆಗೆ ಹಾಗೂ ಮಂಡ್ಯ ಜಿಲ್ಲೆ ಕಾವೇರಿ ನೀರು ಬಳಕೆ ಮಾಡುವ ಜಮೀನು ಪ್ರಾಂತ್ಯದ ವಿವಿಧೆಡೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.

ಕಾವೇರಿ ನೀರಾವರಿ ನಿಗಮದ ಮಂಡ್ಯ ವೃತ್ತದ ಅಧೀಕ್ಷಕ ಅಭಿಯಂತರ ಕೆ.ರಘುರಾಮ್ ಅವರು ಅಣೆಕಟ್ಟೆಯ ವಾಸ್ತವ ಸ್ಥಿತಿಗತಿಗಳು ನೀರಿನ ಸಂಗ್ರಹ, ಒಳಹರಿವಿನ ಪ್ರಮಾಣ ಬಳಕೆ, ಹಿಂದಿನ ವರ್ಷಗಳ ನೀರಿನ ಸಂಗ್ರಹದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ನಂತರ ಮಂಡ್ಯ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ ಜೊತೆಗೂಡಿ ಬೆಳಗೊಳ ಮತ್ತು ಪಾಲಹಳ್ಳಿ ಬಳಿ ಜಮೀನುಗಳಿಗೆ ತೆರಳಿ ರೈತರು ಬೆಳೆದಿರುವ ಭತ್ತ ಫಸಲನ್ನು ಪರಿಶೀಲನೆ ನಡೆಸಿದರು.

ಈ ವೇಳೆ ರೈತರು ನಮಗೆ ಈ ಬಾರಿ ಕಡಿಮೆ ಪ್ರಮಾಣದಲ್ಲಿ ನೀರು ಸಿಕ್ಕಿದ್ದು ಒಂದು ತಿಂಗಳ ನಂತರ ನಾಡಿ ಮಾಡಿದ್ದೇವೆ. ನಾವೆಲ್ಲ ಪಶು ಸಂಗೋಪನೆ ಅವಲಂಬಿಸಿದ್ದು, ನಮಗೆ ಭತ್ತ, ರಾಗಿ ಸಿಗದೆ ಇದ್ದರೂ ಇದನ್ನು ಮೇವಿಗಾಗಿ ಬಳಸುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ಈ ಭಾರಿ ಮಳೆ ಪ್ರಮಾಣ ಕಡಿಮೆಯಾಗಿ ನಾಲೆಗಳಿಗೆ ನೀರು ಬಿಡುಗಡೆ ಕಡಿಮೆಯಾಗಿದೆ. ಕೆರೆ-ಕಟ್ಟೆಗಳು, ಕುಡಿಯುವ ನೀರು ಮತ್ತು ರೈತರು ಅರೆ ಖುಷ್ಕಿ ಬೆಳೆಯುವಂತೆ ತಿಳಿಸಲಾಗಿದೆ. ಪ್ರಸ್ತುತ ಶೇಕಡಾ 50ಕ್ಕಿಂತ ಕಡಿಮೆ ನೀರು ಸಿಗಲಿದೆ. ಈ ಭಾಗಗಳಲ್ಲಿ ಶೇಕಡಾ 80 ರಷ್ಟು ರೈತರು ಎರಡು ಎಕರೆಗಿಂತ ಜಮೀನು ಉಳ್ಳವರಾಗಿದ್ದು, ಒಂದು ತಿಂಗಳು ತಡವಾಗಿ ನಾಟಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಹೆಚ್ಚಾಗಿ ಪಶುಸಂಗೊಪನೆ ಜೊತೆಗೆ ಭತ್ತ ಮತ್ತು ರಾಗಿ ಬೆಳೆಯುತ್ತಿದ್ದು, ನೀರಿನ ಕೊರತೆ ನಡುವೆ ಭತ್ತ ಮತ್ತು ರಾಗಿ ಫಲಗಳು ಸಿಗದೆ ಇದ್ದರೂ ಕೂಡ ಇದನ್ನು ಮೇವಾಗಿ ಉಪಯೋಗ ಮಾಡಲು ಸಿದ್ಧರಾಗಿದ್ದಾರೆ ಎಂದು ಬರ ಸಮಿತಿ ಸದಸ್ಯ ಡಾ.ನವೀನ್ ಕುಮಾರ್ ಜೈನ್ ಅವರಿಗೆ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ ಮಾಹಿತಿ ನೀಡಿದ್ದಾರೆ.

ಬಳಿಕ ಡಾ.ನವೀನ್ ಕುಮಾರ್ ಜೈನ್ ಮಾತನಾಡಿ, ರೈತರು ಕಡಿಮೆ ನೀರು ಬಳಸಿ, ಫಸಲು ಹೆಚ್ಚಿಸಲು ನೇರ ನಾಟಿ ವಿಧಾನ ಅಳವಡಿಸಿಕೊಳ್ಳುವಂತೆ ತಿಳಿಸಲು ಹೇಳಿ ಕಡಿಮೆ ನೀರು ಬಳಕೆಯಾಗುವ ಜೊತೆಗೆ ಇತರೆ ರೈತರುಗಳಿಗೆ ಉಪಯೋಗ ಹೆಚ್ಚುತ್ತದೆ ಎಂದರು.

ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ, ಪಾಲಹಳ್ಳಿ, ಮದ್ದೂರು ತಾಲೂಕಿನ ಹೆಮ್ಮನಹಳ್ಳಿ, ಯರಗನಹಳ್ಳಿ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.

ಈ ವೇಳೆ ಕೆ.ಆರ್.ಸಾಗರ ಕಾ.ನೀ.ನಿಗಮದ ಕಾರ್ಯಪಾಲಕ ಅಭಿಯಂತರ ವೆಂಕಟರವಣಪ್ಪ, ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಸರ್ಕಾರ ಎಕರೆಗೆ ₹25000 ಪರಿಹಾರ ನೀಡಲಿ
ಯುವ ಸಮೂಹಕ್ಕೆ ಉತ್ತಮ ಸಂದೇಶಗಳು ಅಗತ್ಯ