ಕೇಂದ್ರ ಸರ್ಕಾರದ ಜಾತಿ ಗಣತಿ ನಿರ್ಧಾರ ಸ್ವಾಗತ

KannadaprabhaNewsNetwork | Published : May 4, 2025 1:34 AM

ಸಾರಾಂಶ

ಕೇಂದ್ರ ಸರ್ಕಾರ ಜನಗಣತಿ ಜೊತೆಗೆ ಜಾತಿ ಗಣತಿ ಮಾಡಲು ತೆಗೆದುಕೊಂಡಿರುವ ನಿರ್ಧಾರ ಒಳ್ಳೆಯದು, ದೇಶದಲ್ಲಿ ಯಾವ ಯಾವ ಸಮುದಾದ ಜನಸಂಖೆ ಎಷ್ಟಿದೆ ಎನ್ನುವುದು ತಿಳಿದರೆ ಎಲ್ಲರಿಗೂ ಒಳ್ಳೆಯದೇ ಎಂದು ಕೇಂದ್ರ ಸರ್ಕಾರ ಜಾತಿ ಗಣತಿ ಮಾಡಲು ತೆಗೆದುಕೊಂಡ ನಿರ್ಧಾರವನ್ನು ಶಾಸಕ ಕೊತ್ತೂರು ಮಂಜುನಾಥ್ ಸ್ವಾಗತಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರಕೇಂದ್ರ ಸರ್ಕಾರ ಜನಗಣತಿ ಜೊತೆಗೆ ಜಾತಿ ಗಣತಿ ಮಾಡಲು ತೆಗೆದುಕೊಂಡಿರುವ ನಿರ್ಧಾರ ಒಳ್ಳೆಯದು, ದೇಶದಲ್ಲಿ ಯಾವ ಯಾವ ಸಮುದಾದ ಜನಸಂಖೆ ಎಷ್ಟಿದೆ ಎನ್ನುವುದು ತಿಳಿದರೆ ಎಲ್ಲರಿಗೂ ಒಳ್ಳೆಯದೇ ಎಂದು ಕೇಂದ್ರ ಸರ್ಕಾರ ಜಾತಿ ಗಣತಿ ಮಾಡಲು ತೆಗೆದುಕೊಂಡ ನಿರ್ಧಾರವನ್ನು ಶಾಸಕ ಕೊತ್ತೂರು ಮಂಜುನಾಥ್ ಸ್ವಾಗತಿಸಿದರು. ನಗರದ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಒಳ್ಳೆ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲು ಹೊರಟಿರುವುದು ಶ್ಲಾಘನೀಯ, ಈ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್‌ರ ಅವಧಿಯಲ್ಲಿ ಜಾತಿಗಣತಿ ಮಾಡಿದ್ದರು, ಈಗ ಜಾತಿಗಣತಿ ಮಾಡುವುದು ಉತ್ತಮ, ಹತ್ತು ವರ್ಷಕ್ಕೊಮ್ಮೆ ಜಾತಿಗಣತಿ ಮಾಡುವುದು ಉತ್ತಮ ನಿರ್ಧಾರ ಎಂದು ತಿಳಿಸಿದರು. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸತ್ತವರು ನಮ್ಮ ಅಣ್ಣ ತಮ್ಮಂದಿರು. ಇದು ತುಂಬಾ ಘೋರವಾದ ವಿಚಾರ, ಭಯೋತ್ಪಾದಕರು ದಾಳಿ ನಡೆಸಿ ಇಷ್ಟು ದಿನ ಕಳೆದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸಮಂಜಸವಲ್ಲ, ಯುದ್ದ ವಿಮಾನಗಳನ್ನು ಆಕಾಶದಲ್ಲಿ ಚಾಲನೆ ಮಾಡಿಕೊಂಡು ದೇಶದ ಜನತೆಗೆ ನಾಟಕ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ನಮ್ಮ ಜಾಗದಲ್ಲಿ ಬಂದು ಭಯೋತ್ಪಾದಕರು ನಮ್ಮ ಜನರ ಮೇಲೆ ದಾಳಿ ನಡೆಸಿ ಅಮಾಯಕ ೨೬ ಜನರನ್ನು ಬಲಿ ತೆಗೆದುಕೊಂಡರೂ ಕೇಂದ್ರ ಸರ್ಕಾರ ಈ ವೆರೆಗೂ ಯಾವುದೇ ದಿಟ್ಟ ನಿರ್ಧಾರ ಕೈಗೊಳ್ಳದಿರುವುದು ಅವರಿಗೆ ಶೋಭೆ ತರುವುದಿಲ್ಲ, ಭಯೋತ್ಪಾದಕರು ದಾಳಿ ನಡೆಸಿದ ತಕ್ಷಣ ಎಚ್ಚೆತ್ತುಕೊಂಡಿದ್ದರೆ ಅವರು ನಮ್ಮ ಸ್ಥಳದ ಒಳಗೆ ಸಿಗುತ್ತಿದ್ದರು, ಭಯೋತ್ಪದಕರ ದಾಳಿ ಕೇಂದ್ರ ಸರ್ಕಾರ ಇಂಟಲಿಜೆಂಟ್ಸ್ ಲೋಪ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ ಎಂದರು. ಭಯೋತ್ಪಾದಕರ ದಾಳಿ ನಡೆಸಿದ ತಕ್ಷಣ ಕೇಂದ್ರ ಸರ್ಕಾರ ನಮ್ಮ ದೇಶದಿಂದ ಪಾಕಿಸ್ತಾನಕ್ಕೆ ಹರಿಯುತ್ತಿರುವ ಸಿಂಧೂ ನದಿಯ ನೀರನ್ನು ನಿಲ್ಲಿಸಿದ್ದೇವೆ ಎಂದು ಹೇಳಿದ್ದಾರೆ, ಆದರೆ ಅದು ಸಾಧ್ಯವೇ?.ಸಿಂಧೂ ನದಿ ನೀರನ್ನು ನಿಲ್ಲಿಸಲು ಬೃಹದಾಕರಾದ ಅಣೆಕಟ್ಟು ಕಟ್ಟಬೇಕು, ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ಬೇರೊಂದು ಕರೆಡೆ ಹರಿಸಲು ಲಕ್ಷಾಂತರ ರು. ಅನುದಾನ ಬೇಕು. ಇದೆಲ್ಲಾ ಕೇಂದ್ರ ಸರ್ಕಾರದ ಗಿಮಿಕ್ ಹಾಗಿದೆ, ದೇಶದ ಜನರನ್ನು ನಾವು ಸಿಂಧೂ ನಂದಿಯ ನೀರನ್ನು ನಿಲ್ಲಿಸಿದ್ದೇವೆ ಎಂದು ದೇಶದ ಜನರನ್ನು ಯಾಮಾರಿಸುತ್ತಿದೆ, ದೇಶದಿಂದ ಪಾಕಿಸ್ತಾನಕ್ಕೆ ರಫ್ತಾಗುತ್ತಿರುವ ಔಷಧಿಗಳನ್ನು ನಿಲ್ಲಿಸಿದ್ದಲ್ಲಿ ಪಾಕಿಸ್ತಾನದಲ್ಲಿರುವ ಅರ್ಥದಷ್ಟು ಜನ ಮೂರು ದಿನದಲ್ಲಿ ಸಾಯುತ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ಕೋಲಾರ ನಗರಸಭೆ ಬರುವ ಅಧಿಕಾರಿಗೆ ಬೈಕ್‌ ಉಡುಗೊರೆ:

ನಗರಸಭೆಯಲ್ಲಿ ಕೆಲ ಅಧಿಕಾರಿಗಳು ಕಳೆದ ಹತ್ತು ವರ್ಷಗಳಿಂದ ಬೇರೂರಿದ್ದು ಸಾಕಷ್ಟು ಅಕ್ರಮದಲ್ಲಿ ಪಾಲುದಾರರಾಗಿದ್ದಾರೆ. ಅವರನ್ನೆಲ್ಲಾ ಬೇರೋಂದು ಜಿಲ್ಲೆಗೆ ವರ್ಗಾವಣೆ ಮಾಡಿ ಅಲ್ಲಿರುವವರನ್ನು ಕೋಲಾರಕ್ಕೆ ತರಬೇಕು ಎಂದು ಪ್ರಯತ್ನಗಳು ನಡೆಯುತ್ತಿವೆ, ಆದರೆ ಕೋಲಾರ ನಗರಸಭೆಗೆ ಅಧಿಕಾರಿಗಳು ಬರಲು ಮುಂದಾಗುತ್ತಿಲ್ಲಾ ಉತ್ತಮವಾಗಿ ಜನರಿಗೆ ಸ್ಪಂದಿಸುವ ಅಧಿಕಾರಿಗಳು ಕೋಲಾರ ನಗರಸಭೆಗೆ ಬಂದರೆ ಅವರಿಗೆ ಸ್ವಾಗತಿಸಿ ಸಂಪೂರ್ಣ ಸಹಕಾರ ನೀಡುವುದಲ್ಲದೆ ಬರುವ ಅಂತಹ ಅಧಿಕಾರಿಗೆ ಉಚಿತವಾಗಿ ಒಂದು ದ್ವಿಚಕ್ರವಾಹನವನ್ನು ನೀಡಲಾಗುವುದು ಎಂದು ತಿಳಿಸಿದರು. ಬೆಟ್ಟಿಂಗ್ ಹಾವಳಿಗೆ ಯುವಕರ ಬಲಿಮುಳಬಾಗಿಲು ಅಲ್ಲದೆ ಕೋಲಾರದಲ್ಲೂ ಎಥೇಚ್ಚವಾಗಿ ಐಪಿಎಲ್ ಬೆಟ್ಟಿಂಗ್ ದಂದೆ ನಡೆಯುತ್ತಿದೆ. ಬೆಟ್ಟಿಂಗ್ ದಂದೆಯಿಂದ ಎಷ್ಟೋ ಅಮಾಯಕರ ಯುವಕರು ಬಲಿಯಾಗಿದ್ದಾರೆ. ಎಷ್ಟೋ ಕುಟುಂಬಗಳು ಸಹ ಬೀದಿಗೆ ಬಿದ್ದಿವೆ. ಬೆಟ್ಟಿಂಗ್ ದಂದೆಯಿಂದ ದ್ವಿಚಕ್ರ ವಾಹನ, ಮನೆ ಮಾರಿಕೊಂಡಿರುವ ಉದಾಹರಣೆಗಳೂ ಇವೆ. ಬೆಟ್ಟಿಂಗ್ ದಂದೆ ಕುರಿತು ಇಂಚಿಂಚು ಮಾಹಿತಿ ಪೋಲೀಸರಿಗೆ ಗೊತ್ತಿಲ್ಲದೆ. ಅವರಿಗೆ ಗೊತ್ತಿಲ್ಲದೆ ಇರುವ ವಿಚಾರ ಯಾವುದು ಇಲ್ಲ ಆದರೆ ಪೊಲೀಸರೆ ಅವರನ್ನು ಬಿಟ್ಟುಬಿಟ್ಟಿದ್ದಾರೆ. ಪೋಲೀಸ್ ಇಲಾಖೆ ಕಾರ್ಯವೈಕರಿ ಬಗ್ಗೆ ಅಸಮಾಧಾನವನ್ನು ಶಾಸಕ ಕೊತ್ತೂರು ಮಂಜುನಾಥ್ ಹೊರಹಾಕಿದರು. ವಕ್ಕಲೇರಿ ಗ್ರಾಪಂ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಶಾಸಕ ಆಪ್ತ ಕಾರ್ಯದರ್ಶಿ ತಿಪ್ಪೇಸ್ವಾಮಿ, ರೆಡ್ಡಿ ಕಠಾರಿಪಾಳ್ಯ ಗಂಗಣ್ಣ, ಗ್ಯಾರೆಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್, ಕುಡಾ ಅಧ್ಯಕ್ಷ ಮಹ್ಮದ್ ಹನೀಫ್ ಇದ್ದರು.

ಖಾದ್ರಿಪುರದಲ್ಲಿ ನಗರಸಬೆಗೆ ಸೇರಿದ ಜಾಗವನ್ನು ನಗರಸಭೆಗೆ ಸುಪರ್ದಿಗೆ ಪಡೆಯಲು ಈಗಾಗಲೆ ಕ್ರಮ ವಹಿಸಲಾಗಿದೆ. ಕೋಲಾರ ತಹಸೀಲ್ದಾರ್, ಹಾಗೂ ಉಪವಿಭಾಗಾಧಿಕಾರಿಗೆ ಸೂಚನೆ ನೀಡಲಾಗಿದೆ. ಅತಿ ಶೀಘ್ರದಲ್ಲೇ ದಾಖಲೆಗಳನ್ನು ತಿರುಚಿ ನಗರಸಭೆ ಆಸ್ತಿಯನ್ನು ಕಬಳಿಸಿರುವವರಿಂದ ನಗರಸಭೆ ಆಸ್ತಿಯಲ್ಲಿ ವಾಪಸ್ ಪಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ.

- ಕೊತ್ತೂರು ಜಿ ಮಂಜುನಾಥ್, ಕೋಲಾರ ಶಾಸಕ.

Share this article