ಭದ್ರಾ ಮೇಲ್ದಂಡೆಗೆ ಕೇಂದ್ರ ಸರಕಾರ ತಕ್ಷಣ ಹಣ ಬಿಡುಗಡೆ ಮಾಡಲಿ: ಶ್ರೀ ನಂಜಾವಧೂತ ಸ್ವಾಮೀಜಿ

KannadaprabhaNewsNetwork |  
Published : Oct 23, 2026, 01:15 AM IST
೨೨ಶಿರಾ೨: ಶಿರಾ ತಾಲೂಕಿನ ಪಟ್ಟ ನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ ದಸರಾ ಹಬ್ಬದ ವಿಜಯದಶಮಿ ಉತ್ಸವದಲ್ಲಿ ನಂಜಾವಧೂತ ಶ್ರೀಗಳು ದಿವ್ಯ ನೇತೃತ್ವ ವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಅನುಷ್ಠಾನಗೊಳ್ಳಲು ಪ್ರೇರಣೆಯಾಯಿತು. ಪ್ರಸ್ತುತ ಭದ್ರಾ ಮೇಲ್ದಂಡೆ ಯೋಜನೆಯ ಸೌಲಭ್ಯ ಚಿತ್ರದುರ್ಗ ಜಿಲ್ಲೆಗೆ ದೊರೆತಿರುವುದು ಸ್ವಾಗತ. ಅದೇ ರೀತಿ ತುಂಗೆಯಿಂದ ಭದ್ರಗೆ ೧೭ ಟಿಎಂಸಿ ನೀರು ಹರಿಸುವ ಕಾಮಗಾರಿ ತಕ್ಷಣ ಪೂರ್ಣಗೊಳಿಸುವುದರ ಜೊತೆಗೆ, ತುಮಕೂರು ನಾಲಾ ಕಾಮಗಾರಿಯನ್ನು ಪೂರ್ಣಗೊಳಿಸಬೇಕು.

ಕನ್ನಡಪ್ರಭ ವಾರ್ತೆ ಶಿರಾ

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಕೇಂದ್ರ ಸರಕಾರ ೫೩೦೦ ಕೋಟಿ ರು. ಅನುದಾನ ತಕ್ಷಣ ಬಿಡುಗಡೆ ಮಾಡುವ ಮೂಲಕ ಮಧ್ಯಕರ್ನಾಟಕ ಜನರ ಕುಡಿಯುವ ನೀರಿನ ಬವಣೆ ನೀಗಿಸಬೇಕು ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಶಿರಾ ತಾಲೂಕಿನ ಪಟ್ಟ ನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ ನಡೆದ ದಸರಾ ಹಬ್ಬದ ವಿಜಯದಶಮಿ ಉತ್ಸವದಲ್ಲಿ ನೇತೃತ್ವ ವಹಿಸಿ ಮಾತನಾಡಿ, ಮಧ್ಯ ಕರ್ನಾಟಕದ ಜಿಲ್ಲೆಗಳಿಗೆ ನೀರು ಹರಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸಬೇಕೆಂಬ ಉದ್ದೇಶದಿಂದ ೧೯೯೮ರಲ್ಲಿ ಶ್ರೀಮಠದಲ್ಲಿ ನಡೆದ ನೀರಾವರಿ ಹಕ್ಕೊತ್ತಾಯ ಸಮಾವೇಶ

ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಅನುಷ್ಠಾನಗೊಳ್ಳಲು ಪ್ರೇರಣೆಯಾಯಿತು. ಪ್ರಸ್ತುತ ಭದ್ರಾ ಮೇಲ್ದಂಡೆ ಯೋಜನೆಯ ಸೌಲಭ್ಯ ಚಿತ್ರದುರ್ಗ ಜಿಲ್ಲೆಗೆ ದೊರೆತಿರುವುದು ಸ್ವಾಗತ. ಅದೇ ರೀತಿ ತುಂಗೆಯಿಂದ ಭದ್ರಗೆ ೧೭ ಟಿಎಂಸಿ ನೀರು ಹರಿಸುವ ಕಾಮಗಾರಿ ತಕ್ಷಣ ಪೂರ್ಣಗೊಳಿಸುವುದರ ಜೊತೆಗೆ, ತುಮಕೂರು ನಾಲಾ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ತುಮಕೂರು ನಾಲೆ ಮುಖಾಂತರ ಶಿರಾ ಭಾಗದ ೬೫ ಕೆರೆಗಳಿಗೆ ನೀರು ಹರಿಸುವಂತಹ ಇಚ್ಛಾ ಶಕ್ತಿ ಸರಕಾರ ಪ್ರದರ್ಶಿಸಬೇಕು. ಶಿರಾ ಭಾಗದ ರೈತರು ನೀರಾವರಿ ವಿಚಾರವಾಗಿ ಆತಂಕ ಪಡುವ ಅವಶ್ಯಕತೆ ಇಲ್ಲ. ತುಮಕೂರು ನಾಲೆ ಕಾಮಗಾರಿ ಪೂರ್ಣಗೊಂಡ ನಂತರ ಶಿರಾ ಭಾಗದ ಕೆರೆಗಳಿಗೆ ನೀರು ಹರಿಯಲಿದೆ ಎಂದರು.ನೀರಾವರಿ ವಿಚಾರವಾಗಿ ಹೋರಾಟ ಮಾಡಿದರೆ ಶ್ರೀಮಠ ಸದಾ ಬೆಂಬಲವಾಗಿ ನಿಲ್ಲಲಿದೆ. ಜಗತ್ತಿನ ದುಷ್ಟ ಶಕ್ತಿ ಸಂಹಾರ ಮಾಡಿ ಮನುಕುಲಕ್ಕೆ ನೆಮ್ಮದಿ ನೀಡಿದ ಶ್ರೀ ಚಾಮುಂಡೇಶ್ವರಿ ತಾಯಿ ವಿಜಯದ ಸಂಕೇತವೇ ವಿಜಯದಶಮಿ ಎಂದು ಅವರು ತಿಳಿಸಿದರು. ಶ್ರೀಮಠದ ಪಿಆರ್ ಓ ತಮ್ಮಣ್ಣ, ನಿರಂಜನ್, ಮುಖಂಡರಾದ ಮೆಡಿಕಲ್ ಉಮೇಶ್, ಕುಮಾರ್, ಮಂಜುನಾಥ ಗುಪ್ತ, ಹನುಮಂತರಾಯಪ್ಪ ಸೇರಿದಂತೆ ನೂರಾರು ಭಕ್ತರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೈಸೂರು ದಸರಾದಲ್ಲಿ ಸ್ತ್ರೀ ಶಕ್ತಿಗೆ ಭಾರೀ ಮೆಚ್ಚುಗೆ
ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಭೂಮಿ ಕೊಡಲು ವಿಳಂಬ