ಮೆರಿಟೈಮ್‌ ಅಭಿವೃದ್ಧಿಗೆ 80 ಲಕ್ಷ ಕೋಟಿ ರು. ಕೇಂದ್ರ ಹೂಡಿಕೆ: ಸಚಿವ ಸರ್ಬಾನಂದ

KannadaprabhaNewsNetwork |  
Published : Nov 15, 2025, 02:45 AM IST
ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ್‌  | Kannada Prabha

ಸಾರಾಂಶ

ಪಡೀಲ್‌ ಪದವಿನಲ್ಲಿರುವ ಮಂಗಳೂರು ಮೆರೈನ್‌ ಕಾಲೇಜು ಅಂಡ್‌ ಟೆಕ್ನಾಲಜಿ(ಎಂಎಂಸಿಟಿ)ಯ ನವೀಕರಿಸಿದ ಎಂಎಂಸಿಟಿ 2.0 ಕ್ಯಾಂಪಸ್‌ನ ಉದ್ಘಾಟನೆಗ್‌ ಗುರುವಾರ ನೆರವೇರಿತು.

ಮಂಗಳೂರು: ಅಮೃತ್‌ ಕಾಲ್‌ ಭಾರತ್‌ಯೋಜನೆಯಡಿಯಲ್ಲಿ ಮರಿಟೈನ್‌ಗಾಗಿ 80 ಲಕ್ಷ ಕೋಟಿ ರು. ಮೊತ್ತವನ್ನು ಹೂಡಿಕೆ ಮಾಡಲು ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದೆ. ಈ ಮೂಲಕ ಸಾಕಷ್ಟು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಯಾನ ಸಚಿವ ಸರ್ಬಾನಂದ ಸೋನೋವಾಲ್‌ ಹೇಳಿದರು.

ಕೊಯಮತ್ತೂರು ಮರೈನ್‌ ಕಾಲೇಜ್‌ ಸಮೂಹ ಸಂಸ್ಥೆಯಡಿ ಕಾರ್ಯನಿರ್ವಹಿಸಲಿರುವ ಕೆಲೆಂಜಾರು ಗ್ರಾಮದ ಪಡೀಲ್‌ ಪದವಿನಲ್ಲಿರುವ ಮಂಗಳೂರು ಮೆರೈನ್‌ ಕಾಲೇಜು ಅಂಡ್‌ ಟೆಕ್ನಾಲಜಿ(ಎಂಎಂಸಿಟಿ)ಯ ನವೀಕರಿಸಿದ ಎಂಎಂಸಿಟಿ 2.0 ಕ್ಯಾಂಪಸ್‌ನ ಉದ್ಘಾಟನೆಯನ್ನು ಗುರುವಾರ ನೆರವೇರಿಸಿ ಅವರು ಮಾತನಾಡಿದರು.

ನೌಕಾ ಕ್ಷೇತ್ರದಲ್ಲಿ ಆಧುನೀಕರಣ, ಡಿಜಿಟೈಲೇಜೇಶನ್‌ ಸೇರಿದಂತೆ ಹೊಸ ವರ್ಕ್ ಫೋರ್ಸ್‌ನ್ನು ಸೃಷ್ಟಿಮಾಡುವ ಮೂಲಕ ಮತ್ತಷ್ಟು ಬಲವರ್ಧನೆ ಮಾಡಲಾಗುವುದು. ಜತೆಗೆ 20 ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿ ಸಾಧ್ಯವಾಗಲಿದೆ. 2047ರ ಅಮೃತ್‌ ಕಾಲ್‌ ಯೋಜನೆಯ ಮೂಲಕ ಇದನ್ನು ಸಕಾರಗೊಳಿಸಲು ಸರ್ಕಾರ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.ಭಾರತ ಶಕ್ತಿ ಶಾಲಿ ದೇಶವಾಗಿದ್ದು, 2029ರ ಹೊತ್ತಿಗೆ ಭಾರತವನ್ನು ವಿಶ್ವದ ಆರ್ಥಿಕ ಮಟ್ಟದಲ್ಲಿ ಮೂರನೇ ಸ್ಥಾನಕ್ಕೆ ತಂದು ನಿಲ್ಲಿಸುವ ಗುರಿಯನ್ನು ನಿಗದಿ ಮಾಡಲಾಗಿದೆ. ಇದಕ್ಕೆ ಎಲ್ಲರೂ ಜತೆಗೂಡಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯತೆಯಿದೆ ಎಂದರು.

ಮುಂಬಯಿ ಹಡಗು ನಿರ್ದೇಶನಾಲಯದ ಮಹಾ ನಿರ್ದೇಶಕ ಶ್ಯಾಮ್‌ ಜಗನ್ನಾಥನ್‌ ಮಾತನಾಡಿ, ದೇಶದ ನೌಕಾ ಕ್ಷೇತ್ರ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ. ಈಗಾಗಲೇ ದಿಲ್ಲಿಯಲ್ಲಿ ನಡೆದ ಇಂಡಿಯಾನ್‌ ಮರಿಟೈನ್‌ ವೀಕ್‌ ಇದಕ್ಕೆ ಸಾಕ್ಷಿ ನೀಡಿದಂತಾಗಿದೆ. ನಾವಿಕ ಶಿಕ್ಷಣದಲ್ಲಿ ಹೊಸ ತಂತ್ರಜ್ಞಾನದ ಅಳವಡಿಕೆ, ಸ್ಮಾರ್ಟ್‌ ಕ್ಲಾಸ್‌, ಕಲಿಕೆಯಲ್ಲಿ ಗುಣಮಟ್ಟದ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ನೌಕಾ ಕ್ಷೇತ್ರದಲ್ಲಿ ಪ್ರಗತಿ ದಾಖಲಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಮುಂಬಯಿಯ ಡೈರೆಕ್ಟರ್‌ ಜನರಲ್‌ ಆಫ್‌ ಶಿಪ್ಪಿಂಗ್‌ನ ಹೆಚ್ಚುವರಿ ಮಹಾ ನಿರ್ದೇಶಕ ಸುಶೀಲ್‌ ಖೋಪ್ಡೆ ಮಾತನಾಡಿ, ನೌಕಾಯಾನದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಕೆಲಸ ಬಹಳ ಪರಿಶ್ರಮದಿಂದ ಕೂಡಿದೆ. ಅವರಿಗೆ ನೆರವಾಗಲಿ ಎನ್ನುವ ಉದ್ದೇಶದಿಂದ ಸಾಗರ್‌ ಮೇ ಯೋಗ ಎನ್ನುವ ವಿಚಾರವನ್ನು ಅಳವಡಿಸಿಕೊಳ್ಳಲಾಗಿದೆ. ಈ ಮೂಲಕ ಅವರು ತಮ್ಮ ಕೆಲಸದಲ್ಲಿ ತಕ್ಷಣ ನಿರ್ಧಾರ ಕೈಗೊಳ್ಳಲು ಯೋಗ ಕೂಡ ಅವರಿಗೆ ನೆರವಾಗಲಿದೆ ಎಂದರು.ಸಂಸದ ಕ್ಯಾ.ಬ್ರಿಜೇಶ್‌ ಚೌಟ, ಶಾಸಕ ಡಾ.ಭರತ್‌ ಶೆಟ್ಟಿ, ಎಂಎಸ್‌ಸಿ ಕ್ರೂಯಿಂಗ್‌ ಸರ್ವಿಸಸ್‌ ಪ್ರೈ.ಲಿ. ಇಂಡಿಯಾದ ಮೆನೇಜಿಂಗ್‌ ಡೈರೆಕ್ಟರ್‌ ಕ್ಯಾ.ಎಂ.ಪಿ.ಭಾಸಿನ್‌, ಎನ್‌ಎಂಎ ಚೇರ್‌ಮನ್‌ ಡಾ.ವೆಂಕಟರಮಣ ಅಕ್ಕರಾಜು ಮತ್ತಿತರರರು ಮಾತನಾಡಿದರು. ಸಿಎಂಸಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌ ಸ್ಥಾಪಕ ಹಾಗೂ ಅಧ್ಯಕ್ಷ ಎಸ್‌.ಐ. ನಾಥನ್‌ ಅಧ್ಯಕ್ಷತೆ ವಹಿಸಿದ್ದರು.ಇದೇ ಸಂದರ್ಭ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಹಾಗೂ ಕಾಲೇಜು ಸಿಬ್ಬಂದಿಗಳನ್ನು ಗೌರವಿಸಲಾಯಿತು.

ಸಿಎಂಸಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌ ಎಂಡಿ ಕ್ಲಾರಿಸಾ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ