ಸೆಂಟ್ರಲ್‌ ಮಾರ್ಕೆಟ್‌ ಶೇ.80 ಕಾಮಗಾರಿ ಪೂರ್ಣ, ಏಪ್ರಿಲ್‌ಗೆ ಉದ್ಘಾಟನೆಗೆ ಸಿದ್ಧ: ಮೇಯರ್‌

KannadaprabhaNewsNetwork |  
Published : Jan 04, 2025, 12:30 AM IST
ಸೆಂಟ್ರಲ್‌ ಮಾರುಕಟ್ಟೆ ಕಾಮಗಾರಿಯ ಬಗ್ಗೆ ಸ್ಮಾರ್ಟ್‌ಸಿಟಿ ಅಧಿಕಾರಿಗಳಿಂದ ವಿವರ ಪಡೆಯುತ್ತಿರುವ ಮೇಯರ್‌ ಮನೋಜ್‌ ಕುಮಾರ್‌ | Kannada Prabha

ಸಾರಾಂಶ

ಹೊಸ ಮಾರುಕಟ್ಟೆಯನ್ನು ಒಟ್ಟು 150 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅದರಲ್ಲಿ 5 ಲಕ್ಷ ಚದರ ಅಡಿ ವಿಸ್ತೀರ್ಣ ಗುತ್ತಿಗೆದಾರರಿಗೆ ಹಾಗೂ ಒಂದೂವರೆ ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಪಾಲಿಕೆಗೆ ನೀಡಲಾಗಿದೆ. 30 ವರ್ಷಗಳ ಕಾಲ ಲೀಸ್‌ಗೆ ಗುತ್ತಿಗೆದಾರರರೇ ಕಟ್ಟಡದ ಜವಾಬ್ದಾರಿ ಹೊಂದಲಿದ್ದಾರೆ ಎಂದು ಮೇಯರ್‌ ಮನೋಜ್‌ ಕುಮಾರ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಅಂತಿಮ ಹಂತದ ಕಾಮಗಾರಿಯಲ್ಲಿರುವ ಐದು ಮಹಡಿಗಳ ಬಹು ನಿರೀಕ್ಷಿತ ಕಟ್ಟಡ ಮಂಗಳೂರಿನ ಸೆಂಟ್ರಲ್‌ ಮಾರ್ಕೆಟ್‌ಗೆ ಮೇಯರ್ ಮನೋಜ್‌ ಕುಮಾರ್‌ ಹಾಗೂ ಪಾಲಿಕೆ ಸದಸ್ಯರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶೇ.80ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ ಎಂದರು.

ಈ ಸೆಂಟ್ರಲ್‌ ಮಾರ್ಕೆಟ್‌ ಪಿಪಿಪಿ (ಸಾರ್ವಜನಿಕ, ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ನಿರ್ಮಾಣಕ್ಕೆ 2026ರ ಏಪ್ರಿಲ್‌ಗೆ ಗಡುವು ಇದ್ದರೂ ಒಂದು ವರ್ಷ ಮೊದಲೇ ಅಂದರೆ 2025 ಏಪ್ರಿಲ್‌ಗೆ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದು ಮೇಯರ್‌ ಮನೋಜ್‌ ಕುಮಾರ್‌ ಬಳಿಕ ಸುದ್ದಿಗಾರರಿಗೆ ತಿಳಿಸಿದರು. ಹಳೆ ಸೆಂಟ್ರಲ್‌ ಮಾರ್ಕೆಟ್‌ ಕಟ್ಟಡವನ್ನು 2021ರಲ್ಲಿ ಕೆಡವಿ ಅಲ್ಲಿಯೇ ಹೊಸ ಮಾರುಕಟ್ಟೆಯನ್ನು ಒಟ್ಟು 150 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅದರಲ್ಲಿ 5 ಲಕ್ಷ ಚದರ ಅಡಿ ವಿಸ್ತೀರ್ಣ ಗುತ್ತಿಗೆದಾರರಿಗೆ ಹಾಗೂ ಒಂದೂವರೆ ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಪಾಲಿಕೆಗೆ ನೀಡಲಾಗಿದೆ. 30 ವರ್ಷಗಳ ಕಾಲ ಲೀಸ್‌ಗೆ ಗುತ್ತಿಗೆದಾರರರೇ ಕಟ್ಟಡದ ಜವಾಬ್ದಾರಿ ಹೊಂದಲಿದ್ದಾರೆ ಎಂದು ಮೇಯರ್‌ ಮನೋಜ್‌ ಕುಮಾರ್‌ ತಿಳಿಸಿದರು.

ಕೆಳ ಅಂತಸ್ತಿನಲ್ಲಿ 86 ಒಣ ಮೀನು ಹಾಗೂ 188 ಹಸಿ ಮೀನು ಶಾಪ್‌, 11 ಚಿಕನ್‌ ಸ್ಟಾಲ್‌, 24 ಮಾಂಸದ ಅಂಗಡಿ, 3 ಮೊಟ್ಟೆಯ ಅಂಗಡಿ ಸೇರಿ ಒಟ್ಟು 121 ಶಾಪ್‌ಗಳು, ಮಾಂಸಾಹಾರಿ ಕ್ಯಾಂಟಿನ್‌ ಇರಲಿದೆ. ತಳ ಅಂತಸ್ತಿನಲ್ಲಿ 106 ತರಕಾರಿ ಅಂಗಡಿಗಳು ಇರಲಿದ್ದು, ಮೇಲಂತಸ್ತಿನಲ್ಲಿ 132 ಹಣ್ಣುಹಂಪಲು ಸ್ಟಾಲ್ ಇರಲಿದೆ. ಇದರ ಹೊರಾಂಗಣದ ಸುತ್ತ 114 ದ್ವಿಚಕ್ರ ವಾಹನ ಪಾರ್ಕಿಂಗ್‌ ಸೌಲಭ್ಯ ಇರಲಿದೆ. ಪ್ರಥಮ ಮಹಡಿಯಲ್ಲಿ ಗುತ್ತಿಗೆದಾರರ 63 ಶಾಪ್‌ ಇರಲಿದ್ದು, 142 ಸ್ಟಾಲ್‌ಗಳು ಇರಲಿದೆ. ಎರಡು ಮತ್ತು ಮೂರನೇ ಮಹಡಿಯಲ್ಲಿ 85 ಶಾಪ್‌, ನಾಲ್ಕು ಮತ್ತು ಐದನೇ ಮಹಡಿಯಲ್ಲಿ ಕಾರು ಪಾರ್ಕಿಂಗ್‌ಗೆ ಮೀಸಲಿರಿಸಲಾಗಿದೆ ಎಂದರು.

ಉಪ ಮೇಯರ್‌ ಭಾನುಮತಿ, ಮಾಜಿ ಮೇಯರ್‌ ದಿವಾಕರ್‌, ಪಾಲಿಕೆ ಸದಸ್ಯರಾದ ಪೂರ್ಣಿಮಾ, ವೀಣಾಮಂಗಳಾ, ಸ್ಮಾರ್ಟ್‌ಸಿಟಿ ಅಧಿಕಾರಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!