ಚಿಂಚೋಳಿ ತಾಲೂಕಿನಲ್ಲಿ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಅಸ್ತು

KannadaprabhaNewsNetwork | Published : Feb 4, 2024 1:30 AM

ಸಾರಾಂಶ

ಚಿಂಚೋಳಿ ತಾಲೂಕಿಗೆ ಕೇಂದ್ರ ಸರ್ಕಾರದಿಂದ ₹೪೦೫.೩೦ ಕೋಟಿ ಅನುದಾನದಲ್ಲಿ ೧೫.೮೭ಕಿಮೀ ಚತುಷ್ಪಥ ರಸ್ತೆ ಮಂಜೂರಾಗಿದ್ದು, ಈ ಹೆದ್ದಾರಿಯು ತೆಲಂಗಾಣ ಗಡಿಪ್ರದೇಶದ ಮಿರಿಯಾಣ, ಪೋಲಕಪಳ್ಳಿ, ಚಿಂಚೋಳಿವರೆಗೆ ಸಂಪರ್ಕ ಕಲ್ಪಿಸಲಿದೆ: ಕೇಂದ್ರ ಸಚಿವ ಭಗವಂತ ಖೂಬಾ

ಕನ್ನಡಪ್ರಭ ವಾರ್ತೆ ಚಿಂಚೋಳಿ

ಬೀದರ್‌ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಂಚೋಳಿ ತಾಲೂಕಿಗೆ ಕೇಂದ್ರ ಸರ್ಕಾರದಿಂದ ₹೪೦೫.೩೦ ಕೋಟಿ ಅನುದಾನದಲ್ಲಿ ೧೫.೮೭ಕಿಮೀ ಚತುಷ್ಪಥ ರಸ್ತೆ ಮಂಜೂರಾಗಿದ್ದು, ಈ ಹೆದ್ದಾರಿಯು ತೆಲಂಗಾಣ ಗಡಿಪ್ರದೇಶದ ಮಿರಿಯಾಣ, ಪೋಲಕಪಳ್ಳಿ, ಚಿಂಚೋಳಿವರೆಗೆ ಸಂಪರ್ಕ ಕಲ್ಪಿಸಲಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು.

ಸದರಿ ರಾಷ್ಟ್ರೀಯ ಹೆದ್ದಾರಿಯಾಗಿರುವ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತೀನ ಗಡ್ಕರಿಯವರು, ಕೇಂದ್ರ ಸಚಿವ ಖೂಬಾರವರಿಗೆ ಪತ್ರ ಬರೆದು ತಿಳಿಸಿದ್ದಾರೆ. ಈ ಹೆದ್ದಾರಿಯೂ ಎನ್.ಎಚ್.೧೬೭ಕಿ.ಮೀನಿಂದ ಪ್ರಾರಂಭವಾಗಿಒಟ್ಟು೧೫.೮೦ ಕಿಮೀ. ವರೆಗೆ ಚತುಷ್ಪಥ ರಸ್ತೆ ನಿರ್ಮಾಣವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಚತುಷ್ಪಥ ರಸ್ತೆಯ ನಿರ್ಮಾಣದಿಂದ ಚಿಂಚೋಳಿ ತಾಲೂಕಿಗೆ ಹೊಸ ಕಳೆ ಬರಲಿದೆ ಹಾಗೂ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳು ಅಭಿವೃದ್ದಿಗೊಳ್ಳಲಿವೆ. ನಗರದ ಸೌಂದರ್ಯಿಕರಣವು ಹೆಚ್ಚಲಿದೆ,ಹೆದ್ದಾರಿಗೆ ಹೊಂದಿಕೊಂಡ ಎಲ್ಲಾ ಗ್ರಾಮಗಳಲ್ಲಿಯ ಜನರಿಗೂ ಮತ್ತು ಬೇರೆ ಭಾಗದ ಜನರಿಗೂ ಹೆದ್ದಾರಿಯಿಂದ ಹಲವಾರು ರೀತಿಯ ಸಹಾಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಕಳೆದ ೧೦ ವರ್ಷಗಳಲ್ಲಿ ಪಿ.ಎಂ.ಜಿ.ಎಸ್.ವೈ. ಯೋಜನೆಯಡಿ ಸುಮಾರು ೬೦ ಕೋಟಿ ಅನುದಾನದಲ್ಲಿ ೬೦ ಕಿಮೀ. ಗ್ರಾಮೀಣ ರಸ್ತೆಗಳು ನಿರ್ಮಿಸಲಾಗಿದೆ. ೫ ಕೋಟಿ ರು. ವೆಚ್ಚದಲ್ಲಿ ಕೋಡ್ಲಿ-ತಾಂಡೂರ ವಾಯಾ ಚಿಂಚೋಳಿವರೆಗೆ ೮ ಕೋಟಿ ರು. ವೆಚ್ಚದಲ್ಲಿ ಚಿಂಚೋಳಿ ಮುಖ್ಯರಸ್ತೆಯು ತಾಂಡೂರ ರಸ್ತೆಯಿಂದ ಕುಂಚಾವರಂ ವರೆಗೆ ೨೦ ಕೋಟಿ ರು. ವೆಚ್ಚದಲ್ಲಿ ಕೋಡ್ಲಿ ಕ್ರಾಸ್‌ನಿಂದ ಚಂದನಕೇರಾವರೆಗೆ ರಸ್ತೆ ಅಭಿವೃದ್ಧಿಯನ್ನು ಕೇಂದ್ರ ರಸ್ತೆ ಅಭಿವೃದ್ಧಿ ಯೋಜನೆಅಡಿಯಲ್ಲಿ ಅಭಿವೃದ್ದಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಚಿಂಚೊಳಿ ಅಭಿವೃದ್ಧಿಗೆ ನನ್ನ ಹತ್ತಾರು ಕೊಡುಗೆಗಳಿಗೆ ಇದೊಂದು ಹೊಸ ಸೆರ್ಪಡೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ. ಜೊತೆಗೆ ನನ್ನ ಈ ಕಾರ್ಯಕ್ಕೆ ನಮ್ಮ ಸ್ಥಳಿಯ ಶಾಸಕರಾದ ಡಾ. ಅವಿನಾಶ ಜಾಧವ್‌ ಅವರ ಸಹಕಾರವೂ ಇತ್ತು. ಆದ್ದರಿಂದ ಎಲ್ಲಾ ಕೆಲಸಗಳು ನಿರ್ಗಳವಾಗಿ ಮುಗಿದಿವೆ, ಆದ್ದರಿಂದ ಈ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಮಂಜೂರಿಯಾಗಿದೆ ಎಂದು ಸಚಿವ ಖೂಬಾ ತಿಳಿಸಿದ್ದಾರೆ.

ಸಮಸ್ತ ಚಿಂಚೊಳಿ ತಾಲೂಕಿನ ಜನತೆಯ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರಿಗೆ, ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವರಾದ ಸನ್ಮಾನ್ಯ ನೀತಿನ ಗಡ್ಕರಿಯವರಿಗೆ, ಕೇಂದ್ರ ಸಚಿವರು ಹಾಗೂ ಸಂಸದರಾದ ಭಗವಂತ ಖೂಬಾ ಧನ್ಯವಾದಗಳು ತಿಳಿಸಿದ್ದಾರೆ.

Share this article