ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿಯ ಸಂಜೀವಿನಿ ಕಟ್ಟಡ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ( ಎನ್ ಡಿಎ) ಸರ್ಕಾರದ ಇಂಟಲಿಜೆನ್ಸ್ ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಗಣ್ಯಾತಿ ಗಣ್ಯರು ಓಡಾಡುವ ಜಾಗದಲ್ಲಿ ಬ್ಲಾಸ್ಟ್ ಆಗಿದೆ ಅಂದ್ರೆ ಅದು ಕೇಂದ್ರ ವೈಫಲ್ಯವಾಗಿದ್ದು, ಪ್ರಧಾನಿ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ರಾಜೀನಾಮೆ ಸಲ್ಲಿಸಬೇಕೆಂದು ಒತ್ತಾಯಿಸಿದರು.
ಅಪರಾಧಿಗಳಿಗೆ ಶಿಕ್ಷೆಯಾಗಲಿ:ಅಲ್ಲೆಲ್ಲೋ ಜೈಲಲ್ಲಿ ಪೋನ್ ಎತ್ತುಕೊಂಡ್ರೆ ಕಾಂಗ್ರೆಸ್ ವೈಫಲ್ಯ ಅಂತಾರೆ. ಡೆಲ್ಲಿಯಲ್ಲಿ ಬಾಂಬ್ ಬ್ಲಾಸ್ಟ್ ಆದ್ರೆ ಬಿಜೆಪಿಯವರು ಅಮಾಯಕರು ಅಂತಾರೆ. ಇದು ಇಂಟರ್ನಲ್ ಸೆಕ್ಯೂರಿಟಿಗೆ ದೊಡ್ಡ ಹೊಡೆತ ಆಗಿದ್ದು ಈ ಬ್ಲಾಸ್ಟ್ ಯಾರು ಮಾಡಿದ್ದಾರೆ ಅಂತ ಅಧಿಕಾರಿಗಳೆ ಹೇಳಬೇಕು. ಯಾವ ಉಗ್ರ ಸಂಘಟನೆ ಮಾಡಿದೆ ಎಂಬುದನ್ನ ಗುರ್ತಿಸಿ ಅವರನ್ನ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದರು.
ಬಾಂಬ್ ಸ್ಫೋಟದಲ್ಲಿ ಅಮಾಯಕ ಜನ ಸತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಯಾಕೆ ಆಗುತ್ತೆ ಗೊತ್ತಿಲ್ಲ. ಭದ್ರತಾ ವೈಫಲ್ಯ ಬಗ್ಗೆ ನಂಗೆ ಗೊತ್ತಿಲ್ಲ. ಭದ್ರತಾ ವೈಫಲ್ಯದ ತನಿಖೆಗೆ ಆಗಲಿ. ಆದರೆ ಇಂತಹ ಪೈಶಾಚಿಕ ಕೃತ್ಯ ಯಾರೇ ಎಸಗಿರಲಿ ಅವರನ್ನು ಕಠಿಣವಾಗಿ ಶಿಕ್ಷಿಸಬೇಕು. ದೇಶದ ಆಂತರಿಕ ಭದ್ರತೆ ವಿಷಯದಲ್ಲಿ ರಾಜಕಾರಣ ಮಾಡಬಾರದು ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹೇಳಿದರು.ಗ್ರಾಮ ಸಂಜೀವಿನಿ ಕಟ್ಟಡ:
ಇಂದು ಸುಮಾರು 35.5 ಲಕ್ಷ ರೂಗಳ ವೆಚ್ಚದಲ್ಲಿ ಗ್ರಾಮ ಪಂಚಾಯತಿ ಮೊದಲ ಮಹಡಿಯಲ್ಲಿ ಗ್ರಾಮ ಸಂಜೀವಿನಿ ಕಟ್ಟಡ ಉದ್ಘಾಟಿಸಲಾಗಿದ್ದು, ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು. ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಡಿಯಲ್ಲಿ 200ಕ್ಕೂ ಹೆಚ್ಚು ಗ್ರಾಮಗಳಿಗೆ ಬೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ನೀಡಿದ್ದೇನೆ. ವೃದ್ದಾಪ್ಯ ವೇತನ ಪಡೆಯ ಬೇಕಾದರೆ ಮೂರು ತಿಂಗಳು ಬೇಕಾಗುತ್ತದೆ ಎಂದರು.ತಾವು ಗ್ರಾಮಗಳಿಗೆ ತಹಸೀಲ್ದಾರ್, ಕಂದಾಯ ಅಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅರ್ಹರಿಗೆ ಸ್ಥಳದಲ್ಲೇ ವೃದ್ದಾಪ್ಯವೇತನ, ವಿಧವಾ ವೇತನವನ್ನು ಮಂಜೂರು ಮಾಡಿ ಕೊಡುವ ಕೆಲಸ ಮಾಡುತ್ತಿದ್ದೇನೆ. ಮೂರು ದಿನದ ಹಿಂದೆ ಇದೇ ಆವಲ ಗುರ್ಕಿ ಪಂಚಾಯತಿಯ ವಡ್ಡರೆ ಪಾಳ್ಯ ಮತ್ತು ಕುರ್ಲಹಳ್ಲಿ ಗ್ರಾಮಗಳಿಗೆ ಬೇಟಿ ನೀಡಿ ಅರ್ಹರಿಗೆ ವೃದ್ದಾಪ್ಯವೇತನ, ವಿಧವಾ ವೇತನವನ್ನು ಮಂಜೂರು ಮಾಡಿದ್ದೇನೆ ಎಂದರು.
ಈ ವೇಳೆ ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧೀಕಾರಿ ಮಂಜುನಾಥ್, ಗ್ರಾಮಪಂಚಾಯತಿ ಅಧ್ಯಕ್ಷೆ ನಳಿನಾರಮೇಶ್, ಪಿಡಿಓ ಅರುಣಾಗೋಪಿ, ಕಾರ್ಯದರ್ಶಿ ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗಭೂಷಣ್, ರಕ್ಷತ್ ರೆಡ್ಡಿ, ಮುಖಂಡರಾದ ಡ್ಯಾನ್ಸ್ ಶ್ರೀನಿವಾಸ್, ನಾಗೇಶ್, ರಮೇಶ್ ಬಾಬು,ದೇವರಾಜ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ, ಸದಸ್ಯರು, ಸಾರ್ವಜನಿಕರು ಇದ್ದರು.