ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದಲ್ಲಿ 10 ಸದಸ್ಯರನ್ನು ಒಳಗೊಂಡ 3 ಉಪ ತಂಡಗಳ ಅಂತರ ಸಚಿವಾಲಯದ ಕೇಂದ್ರ ಬರ ಅಧ್ಯಯನ ತಂಡವು ರಾಜ್ಯದ ತುಮಕೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ, ಯಾದಗಿರಿ, ರಾಯಚೂರು, ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಬರ ವೀಕ್ಷಣೆಗಾಗಿ ಅ.3ರಿಂದ 07ರವರೆಗೆ ರಾಜ್ಯದಲ್ಲಿ ತಾತ್ಕಾಲಿಕ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಗೆ ಅ.4ರ ಭಾನುವಾರ ಇದರ ಮೂರನೇ ತಂಡವು ಭೇಟಿ ನೀಡಿ, ಬರ ವೀಕ್ಷಣೆ ಮಾಡಲಿದೆ.
ಕನ್ನಡಪ್ರಭ ವಾರ್ತೆ ರಾಯಚೂರು

ಈ ತಂಡದಲ್ಲಿ ಪಾಟ್ನಾದ ಭತ್ತ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾದ ಡಾ.ಮಾನ್ ಸಿಂಗ್ ಅವರು ತಂಡದ ಮುಖ್ಯಸ್ಥರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಭಾರತ ಸರ್ಕಾರದ ವೆಚ್ಚ ಇಲಾಖೆಯ ಅಧೀನ ಕಾರ್ಯದರ್ಶಿ ಪಾರ್ಥ ಪಾಲ್ ಹಾಗೂ ಭಾರತ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ರಾಕೇಶ್ ಕುಮಾರ್ ಅವರು ಕಾರ್ಯನಿರ್ವಹಣೆ ಮಾಡಲಿದ್ದಾರೆ.
ಕೇಂದ್ರ ತಂಡವು ಯಾದಗಿರಿ ಜಿಲ್ಲೆಯ ಪಕ್ಕದ ಯಾದಗಿರಿ ಜಿಲ್ಲೆಯ ಶಹಪೂರಿನಿಂದ ಭಾನುವಾರ ಮಧ್ಯಾಹ್ನ ರಾಯಚೂರು ಜಿಲ್ಲೆಯ ದೇವದುರ್ಗಕ್ಕೆ ಆಗಮಿಸಿ, ದೇವದುರ್ಗದ ತಾಪಂ ಕಚೇರಿಯಲ್ಲಿ 12 ರಿಂದ 1.30ರವರೆಗೆ ಅಧಿಕಾರಿಗಳೊಂದಿಗೆ ಸಭೆ ನಡೆಸುವರು.
ನಂತರ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದ ಹತ್ತಿ ಬೆಳೆ ಕ್ಷೇತ್ರ ಹಾಗೂ ಮೆಣಸಿನಕಾಯಿ ಬೆಳೆ ಹಾನಿ ಕ್ಷೇತ್ರದ ವೀಕ್ಷಣೆ ಮಾಡಿ, ಅರಕೇರಾ ತಾಲೂಕಿನ ಎನ್. ಗಣೇಕಲ್ ಗ್ರಾಮಕ್ಕೆ ಭೇಟಿ ನೀಡಿ ವಿಬಿಜಿ ರಾಮ್‌ಜಿ ಕಾಮಗಾರಿ ಸ್ಥಳ ಹಾಗೂ ಹತ್ತಿ ಬೆಳೆ ಕ್ಷೇತ್ರ ವೀಕ್ಷಣೆ ಮಾಡುವರು. ನಂತರ ಮಧ್ಯಾಹ್ನ 3.30 ರಿಂದ 3.50ರವರೆಗೆ ರಾಯಚೂರು ತಾಲೂಕಿನ ಮರ್ರಾ ನಪುರ ಗ್ರಾಮಕ್ಕೆ ಭೇಟಿ ನೀಡಿ, ಹತ್ತಿ ಬೆಳೆ ಕ್ಷೇತ್ರ ಹಾಗೂ ಮೇವಿನ ಮಿನಿಕಿಟ್ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ನಂತರ ಸಂಜೆ 4:50 ರಿಂದ 5:10ರವರೆಗೆ ಮಸ್ಕಿ ತಾಲೂಕಿನ ಕೋಟ್ನೆಕಲ್ ಗ್ರಾಮಕ್ಕೆ ಭೇಟಿ ನೀಡಿ, ಹತ್ತಿ ಬೆಳೆ ಕ್ಷೇತ್ರ ಮಾಡಿ, ಲಿಂಗಸುಗೂರು ತಾಲೂಕಿನ ಸರ್ಜಾಪುರ ಹಾಗೂ ಯರಡೋಣ ಗ್ರಾಮಕ್ಕೆ ತೆರಳಿ ತೊಗರಿ ಕ್ಷೇತ್ರವನ್ನು ವೀಕ್ಷಣೆ ಮಾಡಿ, ಹಟ್ಟಿಯಲ್ಲಿ ಉಪಹಾರವನ್ನು ಮಾಡಿ ಸಂಜೆ 7ಕ್ಕೆ ಮುದಗಲ್, ಹುನಗುಂದ ಮಾರ್ಗವಾಗಿ ಬಾಗಲಕೋಟೆ ಜಿಲ್ಲೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.