ಸಿರಿಧಾನ್ಯ, ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2025

KannadaprabhaNewsNetwork |  
Published : Dec 22, 2024, 01:32 AM IST
ಕ್ಯಾಪ್ಷನ20ಕೆಡಿವಿಜಿ37, 38 ದಾವಣಗೆರೆಯಲ್ಲಿ ನಡೆದ ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ ಕಾರ್ಯಕ್ರಮವನ್ನು ಡಿಸಿ ಜಿ.ಎಂ.ಗಂಗಾಧರ ಸ್ವಾಮಿ, ಸಿಇಓ ಸುರೇಶ ಇಟ್ನಾಳ್ ಉದ್ಘಾಟಿಸಿ, ವೀಕ್ಷಿಸಿದರು. | Kannada Prabha

ಸಾರಾಂಶ

ದಾವಣಗೆರೆ: ನಗರದ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಆವರಣದಲ್ಲಿ ಸಿರಿಧಾನ್ಯ ಮತ್ತು ಸಾವಯವ ಅಂತರ ರಾಷ್ಟ್ರೀಯ ವಾಣಿಜ್ಯ ಮೇಳ- 2025 ಹಮ್ಮಿಕೊಳ್ಳಲಾಗಿತ್ತು. ಮೇಳದ ಪ್ರಯುಕ್ತ ಜಿಲ್ಲಾಮಟ್ಟದ ''''ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ'''' ಸಹ ನಡೆಯಿತು. ವಿವಿಧ ಬಗೆಯ ತಿಂಡಿ-ತಿನಿಸುಗಳು ನೋಡುಗರ ಕಣ್ಮನ ಸೆಳೆದವು. ಮೇಳದಲ್ಲಿ ಭಾಗವಹಿಸಿದವರಿಗೆ ಖಾದ್ಯಗಳ ರುಚಿ ನೋಡುವ ಅವಕಾಶ ಇತ್ತು.

ದಾವಣಗೆರೆ: ನಗರದ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಆವರಣದಲ್ಲಿ ಸಿರಿಧಾನ್ಯ ಮತ್ತು ಸಾವಯವ ಅಂತರ ರಾಷ್ಟ್ರೀಯ ವಾಣಿಜ್ಯ ಮೇಳ- 2025 ಹಮ್ಮಿಕೊಳ್ಳಲಾಗಿತ್ತು. ಮೇಳದ ಪ್ರಯುಕ್ತ ಜಿಲ್ಲಾಮಟ್ಟದ ''''''''ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ'''''''' ಸಹ ನಡೆಯಿತು. ವಿವಿಧ ಬಗೆಯ ತಿಂಡಿ-ತಿನಿಸುಗಳು ನೋಡುಗರ ಕಣ್ಮನ ಸೆಳೆದವು. ಮೇಳದಲ್ಲಿ ಭಾಗವಹಿಸಿದವರಿಗೆ ಖಾದ್ಯಗಳ ರುಚಿ ನೋಡುವ ಅವಕಾಶ ಇತ್ತು.

ಸಿರಿಧಾನ್ಯ ರಾಗಿ ಕಿಲ್ಸಾ, ರೊಟ್ಟಿ, ರಾಗಿ ಕೇಕ್, ಖರ್ಜಿ ಕಾಯಿ, ನವಣೆ ಲಡ್ಡು, ನವಣೆ ಚಕ್ಕುಲಿ, ನವಣೆ ಬಿಸಿಬೇಳೆ ಬಾತ್, ಸಜ್ಜೆ ತಾಲಿಪೆಟ್ಟು, ಸಜ್ಜೆ ಕಡಬು, ರಾಗಿ ಬಿಳಿಹೋಳಿಗೆ. ಒಂದಲ್ಲ, ಎರಡಲ್ಲ ಬಾಯಲಿ ನೀರೂರಿಸುವ ವಿವಿಧ ಬಗೆ ಬಗೆಯ ಭಕ್ಷ್ಯ ಭೋಜನಗಳ ಪ್ರದರ್ಶನ ಎಲ್ಲರ ಗಮನ ಸೆಳೆದವು.

ಮರೆತುಹೋದ ಖಾದ್ಯದ ವಿಭಾಗದಲ್ಲಿ ಕುಂಬಳಕಾಯಿ ಕಡಬು, ಕುಂಬಳಕಾಯಿ ಗಾರ್ಗಿ, ಪಪ್ಪಾಯ ಉಪ್ಪಿನಕಾಯಿ, ಪೇರಲ ಹಲ್ವ, ಜೋಳದ ಅನ್ನ, ಶೆಂಡಿಗೆ ಹುಗ್ಗಿ, ಗೋದಿ ಕುದುರೆ, ಖಾದ್ಯಗಳು ನೋಡುಗರ ಬಾಯಲ್ಲಿ ನೀರೂರಿಸಿದವು.

ಭಾಗವಹಿಸುವ ಪ್ರತಿ ಸ್ಪರ್ಧಿಗೆ ಒಂದು ಸಿಹಿ ತಿನಿಸು ಅಥವಾ ಖಾರ ಅಥವಾ ಮರೆತುಹೋದ ಖಾದ್ಯವನ್ನು ತಯಾರಿಸಲು ಅವಕಾಶ ನೀಡಲಾಗಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಿಂದ 58 ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ, ಜಿಲ್ಲಾಮಟ್ಟದಲ್ಲಿ ಸಿರಿಧಾನ್ಯ ಖಾದ್ಯ ತಯಾರಿಸುವ ತಯಾರಕರಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಜಿಲ್ಲಾಮಟ್ಟದಲ್ಲಿ ಸಿರಿಧಾನ್ಯ ಖಾದ್ಯ ಮಳಿಗೆಯನ್ನು ಪ್ರಾರಂಭಿಸಲು ಯೋಚಿಸಲಾಗಿದೆ ಎಂದು ತಿಳಿಸಿದರು.

ಜಿಪಂ ಸಿಇಒ ಸುರೇಶ್ ಇಟ್ನಾಳ್ ಮಾತನಾಡಿ, ಮಾರ್ಚ್ ತಿಂಗಳಲ್ಲಿ ಸಿರಿಧಾನ್ಯಗಳ ಸೂಪರ್ ಮಾರ್ಕೆಟ್ ಪ್ರಾರಂಭಿಸಲಾಗುವುದು. ಧಾನ್ಯ ಮಾರಾಟಗಾರರು ಮತ್ತು ಖಾದ್ಯ ಮಾರಾಟಗಾರರು ಸೂಪರ್ ಮಾರ್ಕೆಟ್‌ನ್ನು ಉಪಯೋಗಿಸಿಕೊಳ್ಳಲು ತಿಳಿಸಿದರು.

ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ಸಹಾಯಕ ಕೃಷಿ ಅಧಿಕಾರಿ ಶ್ರೀಧರಮೂರ್ತಿ, ತಾಲೂಕುಮಟ್ಟದ ಕೃಷಿ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ಪಾಕ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರು

ದಾವಣಗೆರೆ: ಸಿರಿಧಾನ್ಯ ಮತ್ತು ಸಾವಯವ ಅಂತರ ರಾಷ್ಟ್ರೀಯ ವಾಣಿಜ್ಯ ಮೇಳದ ಪ್ರಯುಕ್ತ ಜಿಲ್ಲಾಮಟ್ಟದ ''''''''ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ''''''''ಯಲ್ಲಿ ವಿವಿಧ ವಿಭಾಗಗಳಲ್ಲಿ ವಿಜೇತರಾದವರ ಫಲಿತಾಂಶ ಪ್ರಕಟವಾಗಿದೆ.

ಬಹುಮಾನ ವಿಜೇತರು:

ಇಂದ್ರಮ್ಮ ಧನಂಜಯ ಮೂರ್ತಿ, ಹಾಲುವರ್ತಿ, ದಾವಣಗೆರೆ ತಾ. (ಸಜ್ಜೆ ಬರ್ಫಿ) ಪ್ರಥಮ, ಪ್ರೇಮಾ ಬಸವನಗೌಡ, ವಡ್ಡನಾಳು, ಚನ್ನಗಿರಿ ತಾ. (ರಾಗಿ ಹಲ್ವಾ) ದ್ವಿತೀಯ, ರಾಕೇಶ್, ದೊಡ್ಡ ಮಲ್ಲಾಪುರ (ಸಿರಿಧಾನ್ಯದ ಕಡಬು) ತೃತೀಯ ಬಹುಮಾನ.

ಸಿರಿಧಾನ್ಯ ಖಾರ ಖಾದ್ಯ ವಿಭಾಗ:

ಕೋಮಲ ರಮೇಶ್, ಮಾದಪುರ, ಚನ್ನಗಿರಿ ತಾ.(ನವಣಕ್ಕಿ ಬಿಸಿಬೇಳೆ ಬಾತ್) ಪ್ರಥಮ, ಪೂಜ ಪ್ರಶಾಂತ್, ಹಾಲುವರ್ತಿ, ದಾವಣಗೆರೆ ತಾ. (ಸಜ್ಜೆ ಕಡಬು) ದ್ವಿತೀಯ, ಹೇಮಲತ ದಾವಣಗೆರೆ (ನವಣೆ ಬಿಸಿಬೇಳೆ ಬಾತ್) ತೃತೀಯ ಬಹುಮಾನ.

ಮರೆತು ಹೋದ ಖಾದ್ಯ ವಿಭಾಗ:

ಉಮಾದೇವಿ ಶಿವಲಿಂಗಪ್ಪ, ನಾಗರಕಟ್ಟೆ, ಕಾಡಜ್ಜಿ (ನಾಟಿ ಕುಂಬಳಕಾಯಿ ಅರಿಶಿಣ ಕಡಬು) ಪ್ರಥಮ, ಶೀಲಾ, ಹೊನ್ನಾಳಿ (ಕುಂಬಳಕಾಯಿ ಸಿಹಿ ಕಡಬು) ದ್ವಿತೀಯ, ಮೆಹರುನ್ನೀಸ ಬಶೀರ್‌ ಸಾಬ್, ದಾವಣಗೆರೆ, (ಗೋಧಿ ಕುದುರೆ) ತೃತೀಯ ಬಹುಮಾನ ಪಡೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!