ಗ್ರಾಪಂ ಕೇಂದ್ರವಾಗಿ ತಗಡೂರು ಅಭಿವೃದ್ಧಿಯಲ್ಲಿ ಛೇರ್ಮನ್ ನಿಂಗೇಗೌಡರ ಪಾತ್ರ ಮಹತ್ವದ್ದು: ಶಿವಾನಂದ ತಗಡೂರು

KannadaprabhaNewsNetwork |  
Published : Aug 28, 2026, 02:00 AM IST
26ಎಚ್ಎಸ್ಎನ್12: ಕಲ್ಲೇಸೋಮನಹಳ್ಳಿ ಗ್ರಾಮದಲ್ಲಿ ಮಾಜಿ ಚೇರ್ಮನ್ ನಿಂಗೇಗೌಡ ಅವರನ್ನು ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಟಿ.ವಿ. ಶಿವಾನಂದ್ ತಗಡೂರು  ಸನ್ಮಾನಿಸಿದರು. ಬಸವರಾಜ್, ಭಾರತೀಶ್, ಕಾಂತರಾಜ್, ರವಿ, ಯಶೋಧ, ನಾಗಮ್ಮ, ಶಾಂತಮ್ಮ, ಶೋಭಾ, ಇತರರು ಹಾಜರಿದ್ದರು. | Kannada Prabha

ಸಾರಾಂಶ

ತಗಡೂರಿನಲ್ಲಿ ಪ್ರೌಢಶಾಲೆ ಸ್ಥಾಪನೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಸೌಲಭ್ಯ, ಪಶು ಆಸ್ಪತ್ರೆ ಹಾಗೂ ಬಿಸಿಎಂ ವಿದ್ಯಾರ್ಥಿನಿಲಯ ಸೇರಿದಂತೆ ಹಲವು ಪ್ರಮುಖ ಸರ್ಕಾರಿ ಸೌಲಭ್ಯಗಳು ದೊರಕಲು ನಿಂಗೇಗೌಡರ ನೇತೃತ್ವದ ಹೋರಾಟ ಮತ್ತು ಸಂಘಟಿತ ಪ್ರಯತ್ನವೇ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಹೋಬಳಿಯ ತಗಡೂರು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿ ಸಮಗ್ರ ಅಭಿವೃದ್ಧಿ ಹೊಂದುವಲ್ಲಿ ಹಿರಿಯ ನಾಯಕ ಹಾಗೂ ಮಾಜಿ ಛೇರ್ಮನ್ ನಿಂಗೇಗೌಡರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.

ಕಲ್ಲೇಸೋಮನಹಳ್ಳಿ ಗ್ರಾಮದ ಹಿರಿಯ ಮುಖಂಡ ಹಾಗೂ ಮಾಜಿ ಛೇರ್ಮನ್ ನಿಂಗೇಗೌಡರ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಸನ್ಮಾನಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ದೂರದೃಷ್ಟಿಯ ನಾಯಕತ್ವ ಅಗತ್ಯವಾಗಿದ್ದು, ನಿಂಗೇಗೌಡರು ಹಲವು ದಶಕಗಳ ಹಿಂದೆಯೇ ತಗಡೂರು ಗ್ರಾಮದ ಭವಿಷ್ಯದ ಅಭಿವೃದ್ಧಿಯ ಕುರಿತು ಚಿಂತನೆ ನಡೆಸಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಂಬತ್ತರ ದಶಕದಲ್ಲಿಯೇ ತಗಡೂರು ಗ್ರಾಮವನ್ನು ಕೇವಲ ಒಂದು ಸಾಮಾನ್ಯ ಗ್ರಾಮವಾಗಿ ನೋಡದೆ, ಸುತ್ತಮುತ್ತಲಿನ ಗ್ರಾಮಗಳಿಗೆ ಕೇಂದ್ರ ಸ್ಥಾನವಾಗುವಂತೆ ಅಭಿವೃದ್ಧಿಪಡಿಸುವ ಕನಸನ್ನು ನಿಂಗೇಗೌಡರು ಹೊಂದಿದ್ದರು. ಆ ಕಾಲದಲ್ಲಿಯೇ ಗ್ರಾಮಕ್ಕೆ ಅಗತ್ಯವಿರುವ ಮೂಲಸೌಕರ್ಯಗಳು, ಶಿಕ್ಷಣ, ಆರೋಗ್ಯ ಹಾಗೂ ಇತರ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅವರು ನಿರಂತರ ಹೋರಾಟ ನಡೆಸಿದ್ದರು ಎಂದು ಹೇಳಿದರು.

ತಗಡೂರಿನಲ್ಲಿ ಪ್ರೌಢಶಾಲೆ ಸ್ಥಾಪನೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಸೌಲಭ್ಯ, ಪಶು ಆಸ್ಪತ್ರೆ ಹಾಗೂ ಬಿಸಿಎಂ ವಿದ್ಯಾರ್ಥಿನಿಲಯ ಸೇರಿದಂತೆ ಹಲವು ಪ್ರಮುಖ ಸರ್ಕಾರಿ ಸೌಲಭ್ಯಗಳು ದೊರಕಲು ನಿಂಗೇಗೌಡರ ನೇತೃತ್ವದ ಹೋರಾಟ ಮತ್ತು ಸಂಘಟಿತ ಪ್ರಯತ್ನವೇ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಛೇರ್ಮನ್ ನಿಂಗೇಗೌಡರು, ತಗಡೂರು ಗ್ರಾಮದ ಅಭಿವೃದ್ಧಿ ತನ್ನೊಬ್ಬರ ಪ್ರಯತ್ನದಿಂದ ಸಾಧ್ಯವಾದದ್ದಲ್ಲ ಎಂದು ವಿನಮ್ರವಾಗಿ ಹೇಳಿದರು.

ಗ್ರಾಮದ ಅಭಿವೃದ್ಧಿಗೆ ಅನೇಕ ಹಿರಿಯ ಮುಖಂಡರು, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ನೀಡಿದ ಸಹಕಾರವೇ ತಮ್ಮ ಹೋರಾಟಕ್ಕೆ ಶಕ್ತಿಯಾಯಿತು ಎಂದು ಸ್ಮರಿಸಿದರು.

ತಗಡೂರು ಪುರುದೇಗೌಡರು, ಪಟೇಲ್ ಕೆಂಪೇಗೌಡರು, ಹಿಂದಲಮನೆ ಶಿವಗಂಗಪ್ಪ ಸೇರಿದಂತೆ ಅನೇಕ ಹಿರಿಯರ ಮಾರ್ಗದರ್ಶನ ಮತ್ತು ಸಹಕಾರವನ್ನು ಅವರು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ನೆನಪಿಸಿಕೊಂಡರು. ಅಲ್ಲದೇ ಲಕ್ಕರಸನಹಳ್ಳಿ, ರಂಗಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ತಗಡೂರು ಅಭಿವೃದ್ಧಿಗೆ ನೀಡಿದ ಬೆಂಬಲವನ್ನು ವಿಶೇಷವಾಗಿ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಸವರಾಜ್, ಭಾರತೀಶ್, ರವಿ, ಕಾಂತರಾಜು, ಚನ್ನೇಗೌಡ, ಗುಂಡೇಗೌಡ, ನಾಗಮ್ಮ, ಶಾಂತಮ್ಮ, ಯಶೋಧ, ಶಿವೇಗೌಡ, ತಾಲೂಕು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಶೋಭಾ, ಸಂಚಿತ, ಕಾವ್ಯ, ತೇಜು, ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಳ್ಳಾರಿಯಲ್ಲಿ ಫುಟ್‌ಪಾತ್‌ಗಳು ಬಾಯಿ ತೆರೆದುಕೊಂಡಿವೆ; ಹುಷಾರು!
ಬೆಳಗಾವಿಯಲ್ಲೂ ಶಾಸಕರ ಭವನ: ಸ್ಪೀಕರ್‌ ಜಿ.ಎಸ್. ಪಾಟೀಲ