ಕನ್ನಡಪ್ರಭ ವಾರ್ತೆ ಮಂಡ್ಯ
ಯುವಜನರಿಗೆ ಅವರು ನೀಡಿದ ಸಂದೇಶ, ವಿವೇಕ ವಾಣಿ, ವಿವೇಕಾಮೃತ ಎಲ್ಲವೂ ಸಾರ್ವಕಾಲಿಕವಾಗಿವೆ. ಇಂದಿನ ಯುವ ಪೀಳಿಗೆಗೆ ಅವರು ದಾರಿದೀಪವಾಗಿದ್ದಾರೆ. ಯುವಜನತೆಯನ್ನು ಎಚ್ಚರಿಸಿದ ವೀರಸನ್ಯಾಸಿ. ಜ್ಞಾನದ ಬೆಳಕಾಗಿ ಸ್ಫೂರ್ತಿ ತುಂಬಿದ ದಾರ್ಶನಿಕ. ವಿವೇಕಾನಂದರ ನುಡಿಗಳನ್ನು ಯುವಸಮೂಹ ಅನುಸರಿಸುವ ಮೂಲಕ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
೧೮೯೩ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಂಸತ್ತಿನಲ್ಲಿ ವಿವೇಕಾನಂದರು ತಮ್ಮ ಐತಿಹಾಸಿಕ ಭಾಷಣದ ಮೂಲಕ ಮೊದಲ ಬಾರಿಗೆ ರಾಷ್ಟ್ರೀಯ ಮತ್ತು ಜಾಗತಿಕ ಗಮನ ಸೆಳೆದರು. ಸಾಮಾಜಿಕ ಕಾರ್ಯ ಮತ್ತು ಮಾನವೀಯತೆಯ ಆದರ್ಶಗಳನ್ನು ಅತ್ಯುನ್ನತ ಸದ್ಗುಣಗಳಾಗಿ ಎತ್ತಿಹಿಡಿದರು, ಭಾರತ ದೇಶದ ಗೌರವ ಮತ್ತು ಹಿಂದೂ ಧರ್ಮದ ಸಂಸ್ಕಾರಗಳನ್ನು ತಿಳಿಸಿ ಘನತೆ ಹೆಚ್ಚಿಸಿದರು ಎಂದರು.ಚಿತ್ರಕೂಟ ಸಾಂಸ್ಕೃತಿಕ ಸಂಸ್ಥೆಯ ಸಂಚಾಲಕ ಅರವಿಂದಪ್ರಭು, ಸ್ವಾಮಿ ವಿವೇಕಾನಂದರು ನೀಡಿರುವ ಪ್ರತಿಯೊಂದು ಬೋಧನೆಗಳು ಇಂದಿಗೂ ನಮಗೆಲ್ಲಾ ದಾರಿದೀಪ. ಜೀವನವನ್ನು ಸುಂದರವಾಗಿಸುವ, ಅರ್ಥಪೂರ್ಣವನ್ನಾಗಿ ಮಾಡುವ ಶಕ್ತಿ ವಿವೇಕಾನಂದರ ಮಾತುಗಳಿಗಿವೆ. ಯುವಜನತೆಯಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಮತ್ತು ಸಮಾಜ ಕಲ್ಯಾಣ ಕಾರ್ಯಗಳ ಕುರಿತು ಅರಿವು ಮೂಡಿಸುವುದಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಇದು ಯುವಜನರಲ್ಲಿ ದೇಶದ ಅಭಿವೃದ್ಧಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗಿದೆ ಎಂದು ಸಲಹೆ ನೀಡಿದರು.
ಸ್ವಾಮಿ ವಿವೇಕಾನಂದರ ಜೀವನ ಕುರಿತ ಕಿರುಹೊತ್ತಿಗೆಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಡ್ಯಾಪೋಡಿಲ್ಸ್ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಸುಜಾತಾಕೃಷ್ಣ, ಮುಖ್ಯಶಿಕ್ಷಕಿ ನಯನಾ, ಅಲಯನ್ಸ್ ಸಂಸ್ಥೆ ೨ನೇ ಉಪ ರಾಜ್ಯಪಾಲ ಚಂದ್ರಶೇಖರ್, ಪ್ರತಿಭಾಂಜಲಿ ಅಲಯನ್ಸ್ ಸಂಸ್ಥೆ ಕೋ ಆರ್ಡಿನೇಟರ್ ಪ್ರೊ. ಡೇವಿಡ್ ಪ್ರತಿಭಾಂಜಲಿ, ಸಂಸ್ಥೆ ಅಧ್ಯಕ್ಷ ಸಂತೋಷ್, ಪರಿಚಯ ಪ್ರಕಾಶನ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಐಶ್ವರ್ಯ, ಖಜಾಂಚಿ ಧನಂಜಯ ಮತ್ತು ಶಿಕ್ಷಕಿಯರ ವೃಂದ ಮತ್ತಿತರರಿದ್ದರು.