ಲಕ್ಕುಂಡಿಯಲ್ಲಿ ಚಕ್ರವರ್ತಿ ಸೂಲಿಬೆಲೆ ಬೈಕ್ ರ‌್ಯಾಲಿ

KannadaprabhaNewsNetwork | Published : Oct 12, 2023 12:00 AM

ಸಾರಾಂಶ

ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮೂರನೇ ಬಾರಿ ಮೋದಿ ಜಯಭೇರಿ ಎಂಬ ಘೋಷಣೆಯೊಂದಿಗೆ ಇಲ್ಲಿಯ ಪ್ರಮುಖ ರಸ್ತೆಯಲ್ಲಿ ನಮೋ ಬ್ರೀಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಕಾರ್ಯಕರ್ತರೊಂದಿಗೆ ಬೈಕ್ ಜಾಥಾದೊಂದಿಗೆ ಜಾಗೃತಿ ಮೂಡಿಸಿದರು.

ಕನ್ನಡಪ್ರಭ ವಾರ್ತೆ ಗದಗ

ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮೂರನೇ ಬಾರಿ ಮೋದಿ ಜಯಭೇರಿ ಎಂಬ ಘೋಷಣೆಯೊಂದಿಗೆ ಇಲ್ಲಿಯ ಪ್ರಮುಖ ರಸ್ತೆಯಲ್ಲಿ ನಮೋ ಬ್ರೀಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಕಾರ್ಯಕರ್ತರೊಂದಿಗೆ ಬೈಕ್ ಜಾಥಾದೊಂದಿಗೆ ಜಾಗೃತಿ ಮೂಡಿಸಿದರು.

ಚಕ್ರವರ್ತಿ ಸೂಲಿಬೇಲೆ ಅವರು ಜನ ಗಣ ಮನ ಬೆಸೆಯೋಣ ಎಂಬ ಧ್ಯೆಯ ವಾಕ್ಯ ಬರೆದ ತಮ್ಮ ಬೈಕ್ ಮೂಲಕ ಜಾಥಾ ಕೈಗೊಂಡರು. ಇವರೊಂದಿಗೆ ಗ್ರಾಮದ ನಮೋ ಬ್ರೀಗೇಡ್ ಕಾರ್ಯಕರ್ತರು ಬೈಕ್ ರ್‍ಯಾಲಿ ನಡೆಸಿ ಸಾಥ್‌ ನೀಡಿದರು. ಇವರೊಂದಿಗೆ ಪ್ರಧಾನಿ ಮೋದಿ,ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ, ಬಸವೇಶ್ವರ, ಸುತ್ತೂರು ಮಠದ ಸ್ವಾಮೀಜಿಗಳ ಭಾವಚಿತ್ರವಿರುವ ವಾಹನವು ಜಾಥಾದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ವಾಹನದ ಮುಂಭಾಗ, ಹಿಂಭಾಗದಲ್ಲಿ ಜನ ಗಣ ಮನ ಬೆಸೆಯೋಣ, ಮೂರನೇ ಭಾರಿ ಮೋದಿ ಜಯಭೇರಿ ಎಂಬ ವಾಕ್ಯ ಬರೆಯಲಾಗಿತ್ತು. ಇದಕ್ಕೂ ಪೂರ್ವ ಗ್ರಾಮದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯಕರ್ತರು ಸೂಲಿಬೆಲೆ ಅವರನ್ನು ಶಾಲು ಹೂಮಾಲೆ ಹಾಕಿ ಸ್ವಾಗತಿಸಿದರು.

೧೧ಜಿಡಿಜಿ೧೩ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಚಕ್ರವರ್ತಿ ಸೂಲಿಬೆಲೆ ಜನ ಗಣ ಮನ ಬೆಸೆಯೋಣ ಎಂಬ ಧ್ಯೆಯ ವಾಕ್ಯದೊಂದಿಗೆ ಮೂರನೇ ಭಾರಿ ಮೋದಿ ಜಯಭೇರಿ ವಾಕ್ಯದೊಂದಿಗೆ ಬೈಕ್ ರ್‍ಯಾಲಿ ನಡೆಸಿದರು.

Share this article