ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಅವರಿಗೆ ತಾಲೂಕು ಆಡಳಿತದಿಂದ 116 ಮನೆಗಳನ್ನು ನಿಗದಿಪಡಿಸಿ ಸೆ.22ರಂದು ಸೂಚನೆ ನೀಡಲಾಗಿತ್ತು.
ಸಮೀಕ್ಷೆಯ ಬಗ್ಗೆ ಹಿರಿಯ ಅಧಿಕಾರಿಗಳು, ತಹಸೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಮೇಲ್ವಿಚಾರಕರೊಂದಿಗೆ ಚರ್ಚೆ ನಡೆಸಿದ್ದಲ್ಲದೆ, ಮಾಹಿತಿಯನ್ನು ಪೂರ್ಣ ಪ್ರಮಾಣದಲ್ಲಿ ಓದಿ ಅರ್ಥೈಸಿಕೊಂಡು ಅಂದಿನಿಂದಲೇ ಗಣತಿ ಕಾರ್ಯವನ್ನು ಆರಂಭಿಸಿದ್ದಾರೆ. ಅವರೇ ತಿಳಿಸುವಂತೆ ಹಗಲು ವೇಳೆ ಗ್ರಾಮೀಣ ಪ್ರದೇಶದಲ್ಲಿ ಸರ್ವರ್ ಸಮಸ್ಯೆಯ ಜೊತೆಗೆ ಗ್ರಾಮೀಣ ಭಾಗದ ಜನರು ಮಾಹಿತಿ ನೀಡಲು ಗ್ರಾಮದಲ್ಲಿ ಇರದ ಕಾರಣ ಸಮೀಕ್ಷೆ ಕಾರ್ಯವನ್ನು ಪೂರೈಸಲು ಶಿಕ್ಷಕಿ ಎಂ.ರಾಧ ಸಂಜೆ ವೇಳೆಯಲ್ಲಿ ಮನೆಗಳಿಗೆ ತೆರಳಿ ಮಾಹಿತಿ ಪಡೆಯುತ್ತಿದ್ದರು. ಅವರೇ ತಿಳಿಸುವಂತೆ ಅವರಿಗೆ ಯಾವುದೇ ಸರ್ವರ್ ಸಮಸ್ಯೆ ಎದುರಾಗಲಿಲ್ಲ. ಅತ್ಯಂತ ಆತ್ಮವಿಶ್ವಾಸದಿಂದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿದ್ದೇನೆ ಎಂದು ತಿಳಿಸಿದ್ದಾರೆ.ವಿಶೇಷವೆಂದರೆ ದಾರ‍್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದು ಇದು ಅವರಿಗೆ ಹೆಚ್ಚಿನ ಬಲ ನೀಡಿದೆ. ಗಣತಿ ಕಾರ್ಯಕ್ಕೆ ಮನೆ, ಮನೆಗೂ ತೆರಳಿದಾಗ ಸಾರ್ವಜನಿಕರು ಹಿಂದೇಟು ಹಾಕದೆ ಅವರು ಕೇಳಿದ ಮಾಹಿತಿ ನೀಡಿದ್ದಾರೆ. ಗ್ರಾಮೀಣ ಜನರಿಗೂ ನಮ್ಮ ಗ್ರಾಮದ ಶಿಕ್ಷಕಿ ಎಂಬ ಅಭಿಮಾನವೂ ಸಹ ಇವರ ಗಣತಿ ಕಾರ್ಯಕ್ಕೆ ಹೆಚ್ಚು ಸಹಕಾರ ನೀಡಿದೆ. ಗಣತಿ ಕಾರ್ಯವನ್ನು ಪೂರೈಸಿದ ಶಿಕ್ಷಕಿ ಎಂ.ರಾಧಅವರ ಕಾರ್ಯವನ್ನು ಮೆಚ್ಚಲೇಬೇಕಾಗಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಿಗದಿತ ಅವಧಿಗೆ ಮುನ್ನವೇ ಸಮೀಕ್ಷೆ ಪೂರೈಸುವ ಮೂಲಕ ಹೆಗ್ಗಳಿಕೆಗೆ ಪಾತ್ರರಾದ ಶಿಕ್ಷಕಿ ಎಂ.ರಾಧ ಅವರನ್ನು ಅಭಿನಂದಿಸುವುದಾಗಿ ತಹಸೀಲ್ದಾರ್ ರೇಹಾನ್ ಪಾಷ ತಿಳಿಸಿದ್ದಾರೆ. ದಾರ‍್ಲಹಳ್ಳಿಯ ಶಿಕ್ಷಕಿ ಎಂ.ರಾಧ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಉತ್ತಮ ಕಾರ್ಯ ನೆರವೇರಿಸಿ ತನ್ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ಪೂರೈಸುವ ಮೂಲಕ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಕೀರ್ತಿ ತಂದಿದ್ದಾರೆ ಎಮದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ತಿಳಿಸಿ ಶಿಕ್ಷಕಿಯನ್ನು ಅಭಿನಂದಿಸಿದ್ದಾರೆ.