ಚಾಮರಾಜನಗರದ ಸರ್ಕಾರಿ ನೌಕರರ ಸಂಘ ಚುನಾವಣೆ ಪ್ರೌಢಶಾಲಾ ವಿಭಾಗದಿಂದ ಕೊತ್ತಲವಾಡಿ ಮಹದೇವಸ್ವಾಮಿ, ಶಿವಕುಮಾರ್ ಆಯ್ಕೆ

KannadaprabhaNewsNetwork |  
Published : Nov 17, 2024, 01:23 AM IST
ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ : ಪ್ರೌಢಶಾಲಾ ವಿಭಾಗದಿಂದ ಕೊತ್ತಲವಾಡಿ ಮಹದೇವಸ್ವಾಮಿ, ಶಿವಕುಮಾರ್ ಆಯ್ಕೆ | Kannada Prabha

ಸಾರಾಂಶ

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕಕ್ಕೆ ನಡೆದ ಚುನಾವಣೆಯಲ್ಲಿ ಪ್ರೌಢಶಾಲಾ ವಿಭಾಗದಿಂದ ಸಂಘದ ಪ್ರಧಾನ ಕಾರ್ಯದರ್ಶಿ ಕೊತ್ತಲವಾಡಿ ಮಹದೇವಸ್ವಾಮಿ ಹಾಗೂ ಶಿವಕುಮಾರ್ ಹೆಚ್ಚಿನ‌ ಮತಗಳನ್ನು ಪಡೆದು ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕಕ್ಕೆ ನಡೆದ ಚುನಾವಣೆಯಲ್ಲಿ ಪ್ರೌಢಶಾಲಾ ವಿಭಾಗದಿಂದ ಸಂಘದ ಪ್ರಧಾನ ಕಾರ್ಯದರ್ಶಿ ಕೊತ್ತಲವಾಡಿ ಮಹದೇವಸ್ವಾಮಿ ಹಾಗೂ ಶಿವಕುಮಾರ್ ಹೆಚ್ಚಿನ‌ ಮತಗಳನ್ನು ಪಡೆದು ಆಯ್ಕೆಯಾದರು.

ನಗರದ ಸಿ.ಆರ್.ಬಾಲರಪಟ್ಟಣ ಪ್ರೌಢ ಶಾಲೆಯಲ್ಲಿ ಮತ ಎಣಿಕೆ ನಡೆಯಿತು. ಕೊತ್ತಲವಾಡಿ ಮಹದೇವಸ್ವಾಮಿ 161 ಮತಗಳು, ಶಿವಕುಮಾರ್ 131 ಮತಗಳನ್ನು ಪಡೆದು ನಿರ್ದೇಶಕರಾಗಿ ಆಯ್ಕೆಯಾದರು.ವಿಜಯೋತ್ಸವ: ಪ್ರೌಢಶಾಲಾ ವಿಭಾಗದಿಂದ ಕೊತ್ತಲವಾಡಿ ಮಹದೇವಸ್ವಾಮಿ ಹಾಗೂ ಶಿವಕುಮಾರ್ ಆಯ್ಕೆಯಾಗುತ್ತಿದ್ದಂತೆ ಶಿಕ್ಷಕರು, ಸಂಘದ ಸದಸ್ಯರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ನಂತರ ನೂತನ ನಿರ್ದೇಶಕ ಮಹದೇವಸ್ವಾಮಿ ಅವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹದೇವಸ್ವಾಮಿ, ನನಗೆ ಮತ ನೀಡಿದ ಶಿಕ್ಷಕ ಬಂದುಗಳಿಗೆ ನನ್ನ ಅಭಿಮಾನಪೂರ್ವಕ ಕೃತಜ್ಞತೆಗಳನ್ನು ಈ ಮೂಲಕ ಸಲ್ಲಿಸುತ್ತೇನೆ. ಕಳೆದ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ನಮ್ಮನ್ನು ಮತ್ತೊಮ್ಮೆ ಆಯ್ಕೆ ಮಾಡಿದ್ದಕ್ಕೆ ಚಿರ ಋಣಿಯಾಗಿರುತ್ತೇನೆ. ಮುಂದಿನ ಸಂಘದ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಸಂಘದ ಎಲ್ಲಾ ನಿರ್ದೇಶಕರು ಸಹಕಾರ ನೀಡಬೇಕು ಮನವಿ ಮಾಡಿದರು.

ಈ ವೇಳೆ ಶಿಕ್ಷಕರಾದ ಸಿದ್ದಮಲ್ಲಪ್ಪ, ನಾಗೇಂದ್ರ ಕಾಗಲವಾಡಿ, ಮಲ್ಲೇಶ್, ಕಿರಣ್ ರಾಜ್, ಮಂಜುನಾಥ್, ದೊಡ್ಡರಸ್, ಶ್ರೀಧರ್, ಅರ್ಕಪ್ಪ ಮಹೇಶ್, ಎಲ್.ಜಿ. ಮಾದಪ್ಪ, ನಿರ್ಮಲ, ನಾಗೇಶ್, ರವಿ ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ