ಚಾಮರಾಜನಗರ ೨ನೇ ವಾರ್ಡ್‌ ಸ್ವಚ್ಛತೆಗೆ ನಗರಸಭೆ ಅಧ್ಯಕ್ಷ ಮೆಚ್ಚುಗೆ

KannadaprabhaNewsNetwork |  
Published : Nov 18, 2024, 12:03 AM IST
ಚಾಮರಾಜನಗರ ನಗರಸಭೆ ೨ನೇ ವಾರ್ಡಿನಲ್ಲಿ ಅಧ್ಯಕ್ಷ ಸುರೇಶ್, ಆಯುಕ್ತ ರಾಮದಾಸ್ ಪರಿಶೀಲನೆ  | Kannada Prabha

ಸಾರಾಂಶ

ನಗರಸಭೆಯ ೨ನೇ ವಾರ್ಡ್‌ ಸ್ವಚ್ಚತೆ, ಕುಡಿಯುವ ನೀರು ಪೊರೈಕೆ ಮತ್ತು ನೈರ್ಮಲ್ಯ ಬಗ್ಗೆ ನಗರಸಭೆ ಅಧ್ಯಕ್ಷ ಸುರೇಶ್, ಆಯುಕ್ತ ರಾಮದಾಸ್ ಪರಿಶೀಲನೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಚಾಮರಾಜನಗರದ ೨ನೇ ವಾರ್ಡ್ ವ್ಯಾಪ್ತಿಗೆ ಬರುವ ವರದರಾಜಪುರ ಬಡಾವಣೆ, ಎಪಿಎಂಸಿ ಮುಖ್ಯ ದ್ವಾರದ ಮುಖ್ಯ ರಸ್ತೆ ಹಾಗೂ ಪುನೀತ್‌ ರಾಜಕುಮಾರ್ ಉದ್ಯಾನ ಪರಿಶೀಲಿಸಿದರು.

ಅಧ್ಯಕ್ಷ ಸುರೇಶ್, ಆಯುಕ್ತ ರಾಮದಾಸ್ ಪ್ರದೇಶದ ವಿವಿಧ ಅಂಶಗಳ ಪರಿಶೀಲನೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರಸಭೆಯ ೨ನೇ ವಾರ್ಡ್‌ ಸ್ವಚ್ಚತೆ, ಕುಡಿಯುವ ನೀರು ಪೊರೈಕೆ ಮತ್ತು ನೈರ್ಮಲ್ಯ ಬಗ್ಗೆ ನಗರಸಭೆ ಅಧ್ಯಕ್ಷ ಸುರೇಶ್, ಆಯುಕ್ತ ರಾಮದಾಸ್ ಪರಿಶೀಲನೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ೨ನೇ ವಾರ್ಡ್ ವ್ಯಾಪ್ತಿಗೆ ಬರುವ ವರದರಾಜಪುರ ಬಡಾವಣೆ, ಎಪಿಎಂಸಿ ಮುಖ್ಯ ದ್ವಾರದ ಮುಖ್ಯ ರಸ್ತೆ ಹಾಗೂ ಪುನೀತ್‌ ರಾಜಕುಮಾರ್ ಉದ್ಯಾನವನ್ನು ಬೆಳಿಗ್ಗೆ ೮ರ ಸಮಯದಲ್ಲಿ ಅಧ್ಯಕ್ಷರು, ಪೌರಾಯುಕ್ತರು ಹಾಗೂ ವಾರ್ಡಿನ ಸದಸ್ಯರಾದ ಗೌರಿ ಸೆಂಥಿಲ್ ಅವರು ಬಡಾವಣೆಗಳಿಗೆ ತೆರಳಿ ಪರಿಶೀಲನೆ ಮಾಡುವ ಜತೆಗೆ ನಿವಾಸಿಗಳ ಮನವಿಯನ್ನು ಆಲಿಸಿದರು.

ವರದರಾಜಪುರ ಬಡಾವಣೆ ಚರಂಡಿಗಳು ಸ್ವಚ್ಛತೆಯಿಂದ ಕೂಡಿದ್ದು, ಗಿಡಗಂಟಿಗಳು ಬೆಳೆಯದಂತೆ ಮುನ್ನಚ್ಚರಿಕೆ ವಹಿಸಿ, ಆಗಿಂದಾಗ್ಗೆ ತೆರವು ಮಾಡಿರುವುದು ಕಂಡು ಬಂದಿತು. ಅಲ್ಲದೇ ಕುಡಿಯುವ ನೀರು ಸಹ ಮನೆ ಮನೆಗೆ ಸಕಾಲದಲ್ಲಿ ತಲುಪುತ್ತಿರುವ ಬಗ್ಗೆ ನಿವಾಸಿಗಳು ತಿಳಿಸಿದರು. ಪ್ರತಿ ದಿನವು ಸಹ ಕಸ ತೆಗೆದುಕೊಳ್ಳುವ ವಾಹನ ಬರುತ್ತಿದೆ. ಈ ವಾರ್ಡಿನ ಸದಸ್ಯರಾದ ಗೌರಿ ಸೆಂಥಿಲ್ ಜನ ಸಾಮಾನ್ಯರ ಸಂಕಷ್ಟಗಳಲ್ಲಿ ಸ್ಪಂದಿಸುತ್ತಾರೆ ಎಂಬ ಮೆಚ್ಚುಗೆ ಮಾತುಗಳನ್ನಾಡಿದರು.

ಅಲ್ಲದೇ ಪುನೀತ್ ರಾಜ್‌ಕುಮಾರ್ ಉದ್ಯಾನವನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿಪಡಿಸಬೇಕಾಗಿದೆ. ಗಿಡಗಳನ್ನು ನೆಟ್ಟು ಪೋಷಣೆ ಮಾಡಬೇಕು, ಎಪಿಎಂಸಿಯಿಂದ ಬಡಾವಣೆಗೆ ಹೋಗುವ ಮುಖ್ಯ ರಸ್ತೆಯನ್ನು ಅಭಿವೃದ್ದಿಪಡಿಸಲು ಅನುದಾನ ನೀಡುವಂತೆ ಅಧ್ಯಕ್ಷರಲ್ಲಿ ಸದಸ್ಯೆ ಗೌರಿ ಸೆಂಥಿಲ್ ಮನವಿ ಮಾಡಿದರು.

ಪಕ್ಕದ ವಾರ್ಡಿನ ಬದಿಯಲ್ಲಿ ಕಸದ ರಾಶಿ ಬಿದ್ದಿರುವ ಬಗ್ಗೆ ಪೌರಾಯುಕ್ತರು ಪ್ರಶ್ನೆ ಮಾಡಿ, ಅಲ್ಲಿನ ನಿವಾಸಿಗಳು ಬೈಕ್‌ನಲ್ಲಿ ಬಂತು ಕಸ ಇಟ್ಟು ಹೋಗುತ್ತಾರ ಎಂಬ ಮಾಹಿತಿ ನೀಡಿದರು. ತಕ್ಷಣ ಅಲ್ಲಿನ ಸ್ವಚ್ಛತೆ ಕೆಲಸಗಾರರನ್ನು ಕರೆಸಿ, ಈ ಕಸವನ್ನು ತೆರವು ಮಾಡಿ, ಕಸ ಎಸೆಯುವವರಿಗೆ ದಂಡ ಹಾಕುವಂತೆ ಸೂಚನೆ ನೀಡಿದರು. ಇದು ಮುಖ್ಯ ರಸ್ತೆಯಾಗಿದ್ದು, ಯಾರು ಸಹ ಕಸವನ್ನು ಇಲ್ಲಿ ಹಾಕದಂತೆ ಆಯುಕ್ತರು ಮನವಿ ಮಾಡಿದರು.

ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಕಾಯಂ ಅಗಿ ಒಬ್ಬ ನೌಕರರನ್ನು ನೇಮಕ ಮಾಡಿ, ನಿತ್ಯವು ಈ ಬಡಾವಣೆಯ ಜನರಿಗೆ ಶುದ್ಧ ಕುಡಿಯುವ ನೀರು ಕಲ್ಪಿಸಿಕೊಡಬೇಕು. ಇದರ ಬಗ್ಗೆ ಕ್ರಮ ವಹಿಸುವಂತೆ ಆರೋಗ್ಯ ನಿರೀಕ್ಷಕರಿಗೆ ಸೂಚನೆ ಕೊಟ್ಟರು.

ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಮಂಜು, ಪೌರ ಕಾರ್ಮಿಕ ವೆಲನ್ ಗಿರಿ, ಇತರರು ಇದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ