ಕನ್ನಪ್ರಭ ವಾರ್ತೆ ಚಾಮರಾಜನಗರ
ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಚಾಮರಾಜನಗರ ವಿಶ್ವವಿದ್ಯಾನಿಲಯ ಸುವರ್ಣಗಂಗೋತ್ರಿ ಸುವರ್ಣ ಸಂಭ್ರಮ -೨೦೨೪ ಕ್ರೀಡಾ ಚಟುವಟಿಕೆಗಳ ಸಮಾರಂಭವನ್ನು ಗುಂಡು ಎಸೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಸದ್ಯದಲ್ಲೇ ಚಾಮರಾಜನಗರ ವಿದ್ಯಾನಿಲಯದ ಆವರಣದಲ್ಲಿ ಕ್ರೀಡಾ ಮೈದಾನ ಮಾಡುವುದಕ್ಕೆ ಕ್ರಿಯಾ ಯೋಜನೆ ಸಿದ್ಧತೆಮಾಡುತ್ತಿದ್ದಾರೆ. ಮುಂದಿನ ವರ್ಷದಿಂದ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಕ್ರೀಡಾಕೂಟ ನಡೆಸಲಾಗುತ್ತದೆ ಎಂದು ಎಲ್ಲಾ ಕ್ರೀಡಾಪಟುಗಳಿಗೆ ಶುಭಾಶಯ ಕೋರಿದರು.
ಚಾಮರಾಜನಗರ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ಕ್ರೀಡಾ ಸಂಯೋಜಕ ಡಾ. ಶಾಂತರಾಜು ಮಾತನಾಡಿ, ೨೦೨೪-೨೫ನೇ ಶೈಕ್ಷಣಿಕ ಸಾಲಿನಿಂದ ಚಾಮರಾಜನಗರ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಬರುವ ಸಂಯೋಜಿತ ಕಾಲೇಜಿನಲ್ಲಿ ಓದುತ್ತಿರುವ ಕ್ರೀಡಾಪಟುಗಳಿಗೆ ದಕ್ಷಿಣ ಭಾರತ ಅಂತರ್ ವಿಶ್ವವಿದ್ಯಾನಿಲಯ ಕ್ರೀಡಾಕೂಟ ಭಾಗವಹಿಸಲು ಅವಕಾಶ ನೀಡಲಾಗುವುದು ಪ್ರಮುಖ ಕ್ರೀಡೆಗಳಾದ ಕಬಡ್ಡಿ, ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್, ಖೋ-ಖೋ, ಪೆಸ್ಸಿಂಗ್, ಮತ್ತು ಅಥ್ಲಟಿಕ್ ಗಳಲ್ಲಿ ಆಯ್ದ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಅವಕಾಶ ಕಲ್ಪಿಸಲಾಗುವುದು. ಕ್ರೀಡಾಪಟುಗಳಿಗೆ ವೆಚ್ಚಗಳನ್ನು ನಿಲಯದ ವತಿಯಿಂದ ಭರಿಸಲಾಗುವುದು ವಿದ್ಯಾರ್ಥಿಗಳು ಇಂತಹ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕ್ರೀಡಾ ಸಂಯೋಜಕರಾದ ಡಾ.ಮಹೇಶ್ ಕೋಡಿಉಗನೆ, ಡಾ. ಲಿಂಗರಾಜ, ಚೇತನ್, ಸಚಿನ್, ಮಹೇಶ್, ಮಹದೇವಮೂರ್ತಿ, ಉಪನ್ಯಾಸಕರಾದ ದಿವ್ಯ, ಸುಷ್ಮಾ, ನಂದಿನಿ ಕುಮಾರ್ ಚಿಕ್ಕಹೊಳೆ, ಬಸವಣ್ಣ, ದೈಹಿಕ ಮನೋಜ್, ಶ್ರೀಧರ್, ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.