ಓಟ ನಿಲ್ಲಿಸಿದ ಚಾಂಪಿಯನ್ ಚೆನ್ನ !

KannadaprabhaNewsNetwork |  
Published : Aug 15, 2025, 01:00 AM IST
14ಚೆನ್ನ | Kannada Prabha

ಸಾರಾಂಶ

ಕೊಳಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ ಅವರು ಮಾಲಕರಾಗಿದ್ದ 25 ವರ್ಷ ವಯಸ್ಸಿನ ಚೆನ್ನ ಹೆಸರಿನ ಕೋಣವು ಗುರುವಾರ ವಯೋಸಹಜ ಅಸೌಖ್ಯದ ಕಾರಣದಿಂದ ಕೊನೆಯುಸಿರೆಳೆದಿದೆ. ಸಂಜೆ ವಿಧವತ್ತಾಗಿ ನೂರಾರು ಕಂಬಳಪ್ರಿಯರ ಉಪಸ್ಥಿತಿಯಲ್ಲಿ ಮಾಲಕರು ಅದರ ಅಂತ್ಯಸಂಸ್ಕಾರವನ್ನು ನಡೆಸಿದರು.

  ಕಾಪು :  ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದ, ಕಂಬಳ ಕೂಟದಲ್ಲಿ ಅತಿಹೆಚ್ಚು ಪದಕಗಳನ್ನು ಗೆದ್ದ ಖ್ಯಾತಿಯ ಕೋಣ ಚಾಂಪಿಯನ್ ಚೆನ್ನ ಜೀವನದ ಓಟವನ್ನು ಶಾಶ್ವತವಾಗಿ ನಿಲ್ಲಿಸಿದೆ.ಇಲ್ಲಿನ ಕೊಳಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ ಅವರು ಮಾಲಕರಾಗಿದ್ದ 25 ವರ್ಷ ವಯಸ್ಸಿನ ಚೆನ್ನ ಹೆಸರಿನ ಕೋಣವು ಗುರುವಾರ ವಯೋಸಹಜ ಅಸೌಖ್ಯದ ಕಾರಣದಿಂದ ಕೊನೆಯುಸಿರೆಳೆದಿದೆ. ಸಂಜೆ ವಿಧವತ್ತಾಗಿ ನೂರಾರು ಕಂಬಳಪ್ರಿಯರ ಉಪಸ್ಥಿತಿಯಲ್ಲಿ ಮಾಲಕರು ಅದರ ಅಂತ್ಯಸಂಸ್ಕಾರವನ್ನು ನಡೆಸಿದರು.ಕರಾವಳಿಯಲ್ಲಿ ನಡೆಯುವ ಕಂಬಳ ಕೂಟಗಳಲ್ಲಿ ಚೆನ್ನ ಮತ್ತು ಮೋಡೆ ಕೋಣಗಳ ಜೋಡಿ ದಶಕಗಳ ಕಾಲ ತಮ್ಮ ಪಾರಮ್ಯವನ್ನು ಸ್ಥಾಪಿಸಿದ್ದವು. ಹಗ್ಗ ಹಿರಿಯ ವಿಭಾಗದಲ್ಲಿ ಚೆನ್ನ ಮತ್ತು ಮೋಡೆ ಜೊತೆಯಾಗಿ ಕರೆಗಿಳಿದರೇ ಚಿನ್ನದ ಪದಕ ಗ್ಯಾರಂಟಿ ಎಂಬಷ್ಟು ವೇಗದಲ್ಲಿ ಓಡುತ್ತಿದ್ದವು. ಈ ಜೋಡಿ ನಾಲ್ಕು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದ್ದವು.

ಸುಂದರ ಮತ್ತು ದೃಢಕಾಯದ, ಆದರೆ ಸ್ವಲ್ಪ ಒರಟ ಚೆನ್ನ ಸತತ 13 ವರ್ಷಗಳ ಕಾಲ ಓಡಿತ್ತು, ಅದನ್ನು ಓಡಿಸಿದ್ದ ಮಾರ್ನಾಡ್ ರಾಜೇಶ್, ಅಳದಂಗಡಿ ಸತೀಶ್, ನಕ್ರೆ ಜಯಕರ ಮಡಿವಾಳ, ಅಶ್ವತ್ಥಪುರ ಶ್ರೀನಿವಾಸ ಗೌಡ ಮುಂತಾದವರು ಹತ್ತಾರು ಪದಕಗಳನ್ನು ಗೆದ್ದಿದ್ದಾರೆ.

22 ವರ್ಷಗಳ ಹಿಂದೆ ಕಡಂದಲೆ ಕಾಳು ಪಾಣಾರ ಅವರ ಹಟ್ಟಿಯಲ್ಲಿದ್ದ ಚೆನ್ನನನ್ನು ಕಂಬಳದ ಗದ್ದೆಗೆ ಪರಿಚಯಿಸಿದವರು ಬಾರ್ಕೂರು ಶಾಂತರಾಮ ಶೆಟ್ಟರು, ಅವರಿಗೆ ಜ್ಯೂನಿಯರ್ ನೇಗಿಲು ವಿಭಾಗದಲ್ಲಿ ಚೆನ್ನ ಅನೇಕ ಪದಕ ಗೆಲ್ಲಿಸಿಕೊಟ್ಟಿತ್ತು. ಅಲ್ಲಿಂದ ಕೊಂಡೆಟ್ಟು ಹಟ್ಟಿ ಸೇರಿದ ಚೆನ್ನ ಸೀನಿಯರ್ ನೇಗಿಲು, ನಂತರ ಹಗ್ಗದಲ್ಲಿ ಚಾಂಪಿಯನ್ ಆಯಿತು.

ಮೂರು ವರ್ಷಗಳ ಹಿಂದೆ ಚೆನ್ನನನ್ನು ಕಂಬಳದಿಂದ ನಿವೃತ್ತಿಗೊಳಿಸಿ ವಿಶ್ರಾಂತಿ ನೀಡಲಾಗಿತ್ತು. ಹತ್ತಾರು ಕಡೆ ಸನ್ಮಾನವನ್ನೂ ಪಡೆದಿದ್ದ, ತನ್ನ ಮಾಲಕರಿಗೂ, ಓಡಿಸಿದವರಿಗೂ ಕೀರ್ತಿ ತಂದಿದ್ದ, ಚೆನ್ನ ಇನ್ನು ನೆನಪು ಮಾತ್ರ.

PREV
Read more Articles on

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ