ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಚಾಮುಲ್ ಉಪ ವಿಭಾಗದ ಕಚೇರಿಯಲ್ಲಿ ಚಾಮುಲ್ ಹಾಗೂ ರೈತ ಕಲ್ಯಾಣ ಟ್ರಸ್ಟ್ ನಿಂದ ನಿವೃತ್ತಿ ಹೊಂದಿದ್ದ ನೌಕರರಾದ ಸೋಮಹಳ್ಳಿ ಎಸ್.ಶಿವನಾಗಪ್ಪ, ಹೊಸಪುರ ಸಿದ್ದೇಗೌಡ, ಹಂಗಳದ ಕೊಂಗಳಶೆಟ್ಟಿಗೆ ನಿವೃತ್ತಿ ಪರಿಹಾರ ಧನದ ಚೆಕ್ ವಿತರಿಸಿ ಮಾತನಾಡಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಎಲ್ಲಾ ನೌಕರರಿಗೆ ನಿವೃತ್ತಿ ಪರಿಹಾರ ಧನ ನೀಡಬೇಕು ಎಂದು ಚಾಮುಲ್ ಅಧ್ಯಕ್ಷರಾಗಿದ್ದ ಸಿ.ಗುರುಮಲ್ಲಪ್ಪ ಅವರ ಅವಧಿಯಲ್ಲಿ ಚರ್ಚೆ ನಡೆದಿತ್ತು. ನನ್ನ ಅವಧಿಯಲ್ಲಿ ನಿವೃತ್ತಿಗೊಂಡ ನೌಕರರಿಗೆ ಪರಿಹಾರ ನೀಡಲು ಶುರುವಾಯಿತು ಎಂದರು.ರಾಜ್ಯದ ಇತರೆ ಒಕ್ಕೂಟದಲ್ಲಿ ನಿವೃತ್ತಿಗೊಂಡ ನೌಕರರಿಗೆ ಚಾಮುಲ್ ನೀಡುವ ಪರಿಹಾರದಷ್ಟು ಮೊತ್ತ ನೀಡುತ್ತಿಲ್ಲ, ಚಾಮುಲ್ ದೊಡ್ಡ ಪ್ರಮಾಣದಲ್ಲಿ ನಿವೃತ್ತಿ ಪರಿಹಾರ ಧನ ನೀಡುತ್ತಿದೆ, ಇದು ಹೆಮ್ಮೆಯ ವಿಷಯ ಎಂದರು.
ರಾಜ್ಯ ಹಾಲು ಉತ್ಪಾದಕರ ಸಹಕಾರ ನೌಕರರ ಸಂಘದ ಅಧ್ಯಕ್ಷ ಎಸ್.ಶಿವನಾಗಪ್ಪ ಕೂಡ ನಿವೃತ್ತಿ ಪರಿಹಾರ ಧನ ನೀಡಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದರು. ಚಾಮುಲ್ ಆಡಳಿತ ಮಂಡಳಿ ನೌಕರರಿಗೆ ಅನುಕೂಲವಾಗಲಿ ಎಂದು ನಿವೃತ್ತಿ ಪರಿಹಾರ ಹಣ ನೀಡಲಾಗುತ್ತಿದೆ, ಸದ್ಭಳಕೆ ಮಾಡಿಕೊಳ್ಳಿ ಎಂದರು.
ಚಾಮುಲ್ ನಿರ್ದೇಶಕ ಎಂ.ಪಿ.ಸುನೀಲ್, ನಿವೃತ್ತಿಗೊಂಡ ಸೋಮಹಳ್ಳಿ ಡೈರಿ ಸಿಇಒ ಎಸ್.ಶಿವನಾಗಪ್ಪ ಮಾತನಾಡಿದರು.ಚಾಮುಲ್ ವಿಸ್ತರಣಾಧಿಕಾರಿಗಳಾದ ಪ್ರಕಾಶ್, ಸಿದ್ದಲಿಂಗೇಶ್ ಕೋರೆ, ಉದಯ್, ಮುದ್ದಪ್ಪ, ಮಂಜೇಶ್ ಸೇರಿದಂತೆ ಸಂಘದ ಸಿಇಒಗಳು ಇದ್ದರು.