ಚಾಮುಂಡೇಶ್ವರಿ ಹಬ್ಬ ನನಗೂ ಪ್ರಿಯ: ಬಾನು

KannadaprabhaNewsNetwork |  
Published : Aug 26, 2025, 01:04 AM IST
ಕಲಾವಿದೆಯಿಂದ ಬಾಗಿನ ಸ್ವೀಕರಿಸಿದ ಲೇಖಕಿ ಬಾನು | Kannada Prabha

ಸಾರಾಂಶ

‘ನಾಡಹಬ್ಬ ದಸರಾ ಉದ್ಘಾಟಿಸಲು ನನಗೆ ಆಹ್ವಾನ ನೀಡಿದ್ದಕ್ಕೆ ಖುಷಿ ತಂದಿದೆ. ಚಾಮುಂಡೇಶ್ವರಿ ಹಬ್ಬ ನನಗೂ ಪ್ರಿಯ. ಚಿಕ್ಕವಳಿದ್ದಾಗ ನಾನು ನನ್ನ ತಂದೆ-ತಾಯಿ ಜತೆ ಜಂಬೂಸವಾರಿ ನೋಡಲು ಹೋಗುತ್ತಿದ್ದೆ. ನಾಡಹಬ್ಬದ ಬಗ್ಗೆ ನನಗೂ ಪ್ರೀತಿ ಇದೆ’ ಎಂದು ಬುಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಭಾನು ಮುಷ್ತಾಕ್‌ ತಿಳಿಸಿದರು.

ಕನ್ನಡಪ್ರಭವಾರ್ತೆ, ಹಾಸನ

‘ನಾಡಹಬ್ಬ ದಸರಾ ಉದ್ಘಾಟಿಸಲು ನನಗೆ ಆಹ್ವಾನ ನೀಡಿದ್ದಕ್ಕೆ ಖುಷಿ ತಂದಿದೆ. ಚಾಮುಂಡೇಶ್ವರಿ ಹಬ್ಬ ನನಗೂ ಪ್ರಿಯ. ಚಿಕ್ಕವಳಿದ್ದಾಗ ನಾನು ನನ್ನ ತಂದೆ-ತಾಯಿ ಜತೆ ಜಂಬೂಸವಾರಿ ನೋಡಲು ಹೋಗುತ್ತಿದ್ದೆ. ನಾಡಹಬ್ಬದ ಬಗ್ಗೆ ನನಗೂ ಪ್ರೀತಿ ಇದೆ’ ಎಂದು ಬುಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಭಾನು ಮುಷ್ತಾಕ್‌ ತಿಳಿಸಿದರು.

ನಗರದ ಅವರ ನಿವಾಸದಲ್ಲಿ ಸೋಮವಾರ ಮಾತನಾಡಿದ ಮುಸ್ತಾಕ್‌, ಖಂಡಿತಾ ಇದು ನನಗೆ ಖುಷಿಯ ವಿಚಾರ. ಇದನ್ನು ನಾವು ಹಲವು ದೃಷ್ಟಿಕೋನಗಳಲ್ಲಿ ನೋಡಬಹುದು. ನೀವು ಚಾಮುಂಡೇಶ್ವರಿ ತಾಯಿ ಅಂತೀರಿ. ನಿಮ್ಮ ಭಾವವನ್ನು ನಾನು ಗೌರವಿಸುತ್ತೇನೆ. ಅನೇಕರು ಇದನ್ನು ನಾಡಹಬ್ಬ ಅಂತಾರೆ. ಅದನ್ನೂ ಗೌರವಿಸುತ್ತೇನೆ. ನಾಡಹಬ್ಬ, ಚಾಮುಂಡೇಶ್ವರಿ ತಾಯಿ ಅಂತಾ ಪ್ರೀತಿ ಅಭಿಮಾನದಿಂದ ನೀವು ಕರೀತೀರಿ. ಅದನ್ನು ನಾನು ಗೌರವಿಸುತ್ತೇನೆ ಎಂದರು.

ದಸರಾ, ನಮ್ಮ ಸಂಸ್ಕೃತಿಯ ಭಾಗವೇ ಆಗಿದೆ. ನಾಡಿನ ಭಾಗ ಕೂಡ ಆಗಿದೆ. ಹಾಗಾಗಿ, ಇದು ನನಗೂ ಪ್ರಿಯವಾಗಿದೆ. ನಾನು ಗೌರವಿಸುವ ಹಾಗೂ ಪ್ರೀತಿಯಿಂದ ಭಾಗಿಯಾಗುವ ಹಬ್ಬವಾಗಿದೆ. ನಾನು ತಂದೆ-ತಾಯಿ ಜೊತೆ ಹಲವು ಬಾರಿ ಜಂಬೂಸವಾರಿ ನೋಡಲು ಮೈಸೂರಿಗೆ ಹೋಗಿದ್ದೆ. ಈಗ ನನಗೇ ದಸರಾ ಉದ್ಘಾಟನೆಗೆ ಆಹ್ವಾನ ಬಂದಿದೆ. ಹಾಗಾಗಿ, ನನಗೆ ತುಂಬಾ ಸಂತೋಷವಾಗಿದೆ ಎಂದರು.ಕಲಾವಿದೆಯಿಂದ ಬಾಗಿನ ಸ್ವೀಕರಿಸಿದ ಲೇಖಕಿ ಬಾನು:

ದಸರಾ ಉದ್ಘಾಟನೆ ಮಾಡಲಿರುವ ಬಾನು ಮುಷ್ತಾಕ್‌ ಅವರ ಮನೆಗೆ ಬೆಂಗಳೂರಿನ ಕಲಾವಿದೆ, ‘ಅಮ್ಮನ ಮಡಿಲು’ ಸಂಸ್ಥಾಪಕಿ ಶಶಿಕಲಾ ಅವರು ಸೋಮವಾರ ಭೇಟಿ ನೀಡಿದ್ದರು. ಈ ವೇಳೆ ಹಿಂದೂ ಸಂಪ್ರದಾಯದಂತೆ ಹೂ, ಬಳೆ, ಸೀರೆ ಅರಿಶಿನ-ಕುಂಕುಮದೊಂದಿಗೆ ಬಾಗಿನ ನೀಡಿ ಶುಭ ಹಾರೈಸಿದರು. ಅದನ್ನು ಆತ್ಮೀಯವಾಗಿ ಸ್ವೀಕರಿಸಿದ ಮುಷ್ತಾಕ್‌, ಶಶಿಕಲಾಗೆ ಧನ್ಯವಾದ ಹೇಳಿದರು. ಜೊತೆಗೆ, ಶಶಿಕಲಾ ಅವರಿಗೂ ಹಿಂದೂ ಸಂಪ್ರದಾಯದಂತೆ ಹೂ, ಬಳೆ, ಸೀರೆ ಅರಿಶಿನ-ಕುಂಕುಮದೊಂದಿಗೆ ಬಾಗಿನ ನೀಡಿ ಬೀಳ್ಕೊಟ್ಟರು.ಜಾತ್ಯತೀತ ಬಾನು ಕುಂಕುಮ, ಹೂವು ತೊಡಲಿ: ಮುನಿರತ್ನಬುಕರ್‌ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅವರು ಹಣೆಗೆ ಕುಂಕುಮ, ತಲೆಗೆ ಹೂವು ಮುಡಿದು ದಸರಾ ಉದ್ಘಾಟನೆ ಮಾಡಲಿ ಎಂದು ಬಿಜೆಪಿ ಶಾಸಕ ಮುನಿರತ್ನ ಸವಾಲು ಹಾಕಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಾನು ಮುಷ್ತಾಕ್‌ ಅವರು ನಮ್ಮ ನೆಲದ ಮಗಳು. ಆದರೆ ದಸರಾ ಹಿಂದೂ ಧರ್ಮದ ಹಬ್ಬ. ಅವರು ಹೇಗಿದ್ದರೂ ಜಾತ್ಯತೀತರಲ್ಲವೇ? ಹೀಗಾಗಿ ಕುಂಕುಮ, ಹೂವು ಮುಡಿದು ನಾಡಹಬ್ಬ ಉದ್ಘಾಟನೆ ಮಾಡಲಿ ಎಂದರು.ಬಾನು ಪೂಜೆ ಮಾಡಿದ್ರೆ ಅವರ ಧರ್ಮದವರು ವಿರೋಧಿಸ್ತಾರೆ: ಅಶೋಕ್‌ದಸರಾ ಮುಸ್ಲಿಮರ ಹಬ್ಬವಲ್ಲ, ಅವರ ಧರ್ಮದಲ್ಲಿ ಮೂರ್ತಿ ಪೂಜೆಗೆ ನಿಷೇಧವಿದೆ. ದಸರಾ ಉದ್ಘಾಟನೆ ವೇಳೆ ಬಾನು ಮುಷ್ತಾಕ್ ಅವರು ಚಾಮುಂಡಿ ದೇವಿಯ ಪೂಜೆ ಮಾಡಿದರೆ ಅವರ ಧರ್ಮದವರೇ ವಿರೋಧಿಸುತ್ತಾರೆ. ಅವರನ್ನು ಧರ್ಮದಿಂದ ಹೊರಹಾಕಿದ್ರೆ ಏನು ಮಾಡ್ತಿರಾ? ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಪ್ರಶ್ನಿಸಿದರು.ಹೊಸಪೇಟೆಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ದಸರಾ ಹಬ್ಬಕ್ಕೆ ಚಾಲನೆ ನೀಡುವ ಕುರಿತು ಪ್ರತಿಕ್ರಿಯಿಸಿ, ಚಾಮುಂಡೇಶ್ವರಿಗೆ ಅವರಿಂದ ಯಾಕೆ ಪೂಜೆ ಮಾಡಿಸಬೇಕು?. ಹಿಂದೂಗಳನ್ನು ವಿರೋಧ ಮಾಡೋರು ಚಾಮುಂಡೇಶ್ವರಿ ಪೂಜೆಯನ್ನು ಯಾಕೆ ಮಾಡಬೇಕು?. ನಮ್ಮ ಹಿಂದೂ ಧರ್ಮದಲ್ಲಿ ಯಾರು ಇಲ್ವಾ? ಎಂದು ಪ್ರಶ್ನಿಸಿದರು.ಸಿದ್ದರಾಮಯ್ಯ ಸರ್ಕಾರ ಹಿಂದೂ ಧರ್ಮಕ್ಕೆ‌ ಕಳಂಕ ತರುತ್ತಿದೆ. ಸಿದ್ದರಾಮಯ್ಯ ಅವರಿಗೆ ಟಿಪ್ಪು ಮನಸ್ಥಿತಿ ಇದೆ. ಹಾಗಾಗಿ, ಮುಸ್ಲಿಮರನ್ನು ಆಯ್ಕೆ ಮಾಡಿದ್ದಾರೆ ಎಂದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ