ಚಾಮುಂಡಿ ಬೆಟ್ಟ ಎಂದೆಂದಿಗೂ ಹಿಂದೂಗಳದ್ದೇ: ಯದುವೀರ್‌

KannadaprabhaNewsNetwork |  
Published : Aug 27, 2025, 01:00 AM ISTUpdated : Aug 27, 2025, 04:33 AM IST
Chamundi Hill Yaduveer Vs DK Shivakumar

ಸಾರಾಂಶ

ಗೌರಿ ಹಬ್ಬದ ದಿನವೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ‘ಚಾಮುಂಡಿ ಬೆಟ್ಟ, ಚಾಮುಂಡಿ ದೇವಿ ಹಿಂದೂಗಳ ಆಸ್ತಿ ಅಲ್ಲ’ ಎಂದಿರುವುದು ಅತ್ಯಂತ ದುಃಖಕರ ಮತ್ತು ನಿಂದನೀಯ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಕಿಡಿಕಾರಿದ್ದಾರೆ.  

  ಮೈಸೂರು :  ಗೌರಿ ಹಬ್ಬದ ದಿನವೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ‘ಚಾಮುಂಡಿ ಬೆಟ್ಟ, ಚಾಮುಂಡಿ ದೇವಿ ಹಿಂದೂಗಳ ಆಸ್ತಿ ಅಲ್ಲ’ ಎಂದಿರುವುದು ಅತ್ಯಂತ ದುಃಖಕರ ಮತ್ತು ನಿಂದನೀಯ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಕಿಡಿಕಾರಿದ್ದಾರೆ. ಚಾಮುಂಡಿ ಬೆಟ್ಟ ಎಂದೆಂದಿಗೂ ಹಿಂದೂಗಳದ್ದೇ ಎಂದಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿರುವ ತುಣುಕಿನೊಂದಿಗೆ ಪೋಸ್ಟ್ ಹಾಕಿರುವ ಯದುವೀರ್ ಅವರು, ಚಾಮುಂಡಿ ಬೆಟ್ಟ ಶಕ್ತಿ ಪೀಠ. ಶಾಸ್ತ್ರಸಮ್ಮತವಾಗಿ ಪವಿತ್ರಗೊಂಡು ಕೋಟ್ಯಂತರ ಹಿಂದೂಗಳಿಂದ ಆರಾಧಿತವಾಗಿದೆ. ಈ ದೇವಾಲಯ ಹಿಂದೂಗಳದ್ದೇ ಆಗಿತ್ತು, ಆಗಿದೆ ಮತ್ತು ಎಂದೆಂದಿಗೂ ಹಿಂದೂಗಳದ್ದೇ ಆಗಿರುತ್ತದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಯಾವಾಗಲೂ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದು ತನ್ನ ನಕಲಿ ಸೆಕ್ಯುಲರಿಸಂ ಪ್ರದರ್ಶನ ಮಾಡುತ್ತಿದೆ. ಕರ್ನಾಟಕದ ಜನರು ಎಲ್ಲಾ ಧರ್ಮಗಳನ್ನೂ ಗೌರವಿಸುತ್ತಾರೆ. ಆದರೆ, ಹಿಂದೂ ಹಬ್ಬಗಳು, ಸಂಪ್ರದಾಯಗಳು ಮತ್ತು ದೇವಾಲಯಗಳ ಮೇಲೆ ನಡೆಯುತ್ತಿರುವ ನಿರಂತರ ದಾಳಿಯನ್ನು ಯಾವತ್ತೂ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಕೋಟ್ಯಂತರ ಹಿಂದೂಗಳ

ಕ್ಷೇತ್ರ ಚಾಮುಂಡಿ ಬೆಟ್ಟ

ಚಾಮುಂಡಿ ಬೆಟ್ಟ ಶಕ್ತಿ ಪೀಠ. ಶಾಸ್ತ್ರಸಮ್ಮತವಾಗಿ ಪವಿತ್ರಗೊಂಡು ಕೋಟ್ಯಂತರ ಹಿಂದೂಗಳಿಂದ ಆರಾಧಿತವಾಗಿದೆ. ಈ ದೇವಾಲಯ ಹಿಂದೂಗಳದ್ದೇ ಆಗಿತ್ತು, ಆಗಿದೆ ಮತ್ತು ಎಂದೆಂದಿಗೂ ಹಿಂದೂಗಳದ್ದೇ ಆಗಿರುತ್ತದೆ.

- ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್, ಸಂಸದ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ