ಯಕ್ಷಗಾನದ ಬಣ್ಣದ ಲೋಕಕ್ಕೆ ಚಂದಣ್ಣನ ಹೊಸ ಕೊಡುಗೆ: ರಾಜೇಶ ನಾಯಕ ಸೂರ್ವೆ

KannadaprabhaNewsNetwork |  
Published : Oct 25, 2026, 02:45 AM IST
ವೆಂಕಟೇಶ್ವರ ಯಕ್ಷಗಾನ ವಸ್ತು ಬಂಡಾರ ಹಾಗೂ ಪ್ರಸಾದನ ಪರಿಕರಗಳ ಚಿನ್ನದ ಪೆಟ್ಟಿಗೆಯನ್ನು ರಾಜೇಶ ನಾಯಕ ಉದ್ಘಾಟಿಸಿದರು. | Kannada Prabha

ಸಾರಾಂಶ

. ತಮ್ಮ ಕಲಾ ನೈಪುಣ್ಯದಿಂದ ಯಕ್ಷಗಾನ ಕಲಾವಿದರ ಮೆಚ್ಚುಗೆಗೆ ಪಾತ್ರರಾಗಿರುವ ಇಂತಹ ಅಪರೂಪದ ಪ್ರಸಾದನ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸುವ ಮೂಲಕ ಅವರ ಕಲಾಸೇವೆಯನ್ನು ಇನ್ನಷ್ಟು ಬೆಳೆಸಬೇಕಾಗಿದೆ.

ಅಂಕೋಲಾ: ದಕ್ಷಿಣೋತ್ತರ ಜಿಲ್ಲೆಯ ಯಕ್ಷಗಾನ ಕ್ಷೇತ್ರದಲ್ಲಿ ಶ್ರೇಷ್ಠ ಪ್ರಸಾದನ ಕಲಾವಿದರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಬಣ್ಣದ ಚಂದಣ್ಣ ಅವರ ನೂತನ ಪ್ರಸಾದನ ಪರಿಕರಗಳ ‘ಚಿನ್ನದ ಪೆಟ್ಟಿಗೆ’ ಯಕ್ಷಲೋಕಕ್ಕೆ ತೆರೆದುಕೊಳ್ಳುತ್ತಿರುವುದು ಹರ್ಷದಾಯಕ ಸಂಗತಿಯಾಗಿದೆ ಎಂದು ಯಕ್ಷಗಾನ ಕಲಾವಿದ ಹಾಗೂ ಶಿಕ್ಷಕ ರಾಜೇಶ ನಾಯಕ ಸೂರ್ವೆ ಹೇಳಿದರು.ಪಳ್ಳಿಕೇರಿಯ ನಾಗಚೌಡೇಶ್ವರಿ ದೇವಸ್ಥಾನದ ಎದುರು ರಥಬೀದಿಯ ಚಂದ್ರಕಾಂತ ನಾಯ್ಕ(ಬಣ್ಣದ ಚಂದು) ಅವರ ನೂತನ ವೆಂಕಟೇಶ್ವರ ಯಕ್ಷಗಾನ ವಸ್ತು ಭಂಡಾರ ಹಾಗೂ ಪ್ರಸಾದನ ಪರಿಕರಗಳ ಚಿನ್ನದ ಪೆಟ್ಟಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ರೇಷ್ಠ ವೃತ್ತಿ ಮೇಳದ ಕಲಾವಿದರು ಅಂಕೋಲಾಕ್ಕೆ ಆಗಮಿಸಿದಾಗ ಬಹುತೇಕರು ಬಣ್ಣದ ಚಂದು ಅವರಿಂದಲೇ ಬಣ್ಣ ಹಚ್ಚಿಸಿಕೊಂಡು ಸಂಭ್ರಮಿಸುತ್ತಾರೆ. ತಮ್ಮ ಕಲಾ ನೈಪುಣ್ಯದಿಂದ ಯಕ್ಷಗಾನ ಕಲಾವಿದರ ಮೆಚ್ಚುಗೆಗೆ ಪಾತ್ರರಾಗಿರುವ ಇಂತಹ ಅಪರೂಪದ ಪ್ರಸಾದನ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸುವ ಮೂಲಕ ಅವರ ಕಲಾಸೇವೆಯನ್ನು ಇನ್ನಷ್ಟು ಬೆಳೆಸಬೇಕಾಗಿದೆ ಎಂದರು.ದೇವಸ್ಥಾನ ಸಮಿತಿಯ ಅಧ್ಯಕ್ಷ ಗಜಾನನ ಬಿ. ನಾಯ್ಕ, ದಸರಾ ಉತ್ಸವ ಸಮಿತಿಯ ಅಧ್ಯಕ್ಷ ನಾಗರಾಜ್ ಎಸ್. ನಾಯ್ಕ, ಅಮರ ನಾಯಕ ಹಿಚ್ಕಡ, ಯಕ್ಷಗಾನ ಕಲಾವಿದರಾದ ಶಿವಾ ನಾಯ್ಕ ಅವರ್ಸಾ, ವೀರೇಂದ್ರ ವಂದಿಗೆ, ರವಿ ಗುನಗಾ, ಸುಜನ ನಾಯಕ ಪುನೀತ್ ನಾಯ್ಕ ಹನುಮಟ್ಟಾ, ವೆಂಕಟರಮಣ ಭಟ್, ರಾಜು ನಾಯ್ಕ ಅಮದಳ್ಳಿ, ಕೌಟಿಲ್ಯ ನಾಯಕ ಉಪಸ್ಥಿತರಿದ್ದರು. ವಿಘ್ನೇಶ್ವರ ನಾಯ್ಕ ಸ್ವಾಗತಿಸಿ, ನಿರೂಪಿಸಿದರು.ರಾಜೇಶ ಭಂಡಾರಿ ಗುಣವಂತೆ ತಂಡದವರಿಂದ ನಡೆದ ಬಹ್ಮಾಸುರ ಮೋಹಿನಿ ಯಕ್ಷಗಾನ ಪ್ರದರ್ಶನ ನೋಡುಗರ ಮನಸೂರೆಗೊಳಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರಳತೆ, ಸಜ್ಜನಿಕೆ, ಅಪಾರ ಪಾಂಡಿತ್ಯದ ಅಪರೂಪದ ಸಂಗಮ ಪುಣಿಂಚತ್ತಾಯ: ಸಲೀಂ ಅಹ್ಮದ್
ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸುವುದಷ್ಟೇ ಅಂತಿಮ ಗುರಿಯಲ್ಲ: ಪ್ರೊ. ಜಗದೀಶ್ ಕುಮಾರ್