ವೃತ್ತಿಜೀವನದಲ್ಲಿ ಯಶಸ್ಸು ಗಳಿಸುವುದಷ್ಟೇ ಜೀವನದ ಅಂತಿಮ ಗುರಿಯಲ್ಲ. ಆರೋಗ್ಯ, ಶಾಂತಿ, ಭದ್ರತೆ ಮತ್ತು ಸಂತೋಷದಿಂದ ಕೂಡಿದ ಸಮಾಜದ ನಿರ್ಮಾಣಕ್ಕೂ ನಮ್ಮ ಕೊಡುಗೆ ಇರಬೇಕು. ನಾವು ಗಳಿಸುವ ಶಿಕ್ಷಣ, ಜ್ಞಾನವು ಮಾನವೀಯ ಮೌಲ್ಯಗಳೊಂದಿಗೆ ಬೆಸೆದು ಅದು ಸಮಾಜಕ್ಕೆ ಉಪಯುಕ್ತವಾಗುವಂತಾಗಬೇಕು. ಸದಾ ಕಲಿಯುವ ಮನೋಭಾವ, ಪರಿಶ್ರಮ, ಕುತೂಹಲ, ಪ್ರಶ್ನಿಸುವ ಧೈರ್ಯ ಮತ್ತು ಸಕಾರಾತ್ಮಕ ಚಿಂತನೆ ನಮ್ಮ ಯಶಸ್ಸಿನ ಮಾರ್ಗವಾಗಿದೆ ಎಂದು ನೆಹರೂ ವಿವಿಯ ವಿಶ್ರಾಂತ ಕುಲಪತಿ, ವಿವಿ ಧನಸಹಾಯ ಆಯೋಗದ (ಯುಜಿಸಿ) ಮಾಜಿ ಅಧ್ಯಕ್ಷರಾದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊ. ಜಗದೀಶ್ ಕುಮಾರ್ ಮಾಮಿಡಾಲ ಅವರು ಹೇಳಿದರು.
ಉಳ್ಳಾಲ : ವೃತ್ತಿಜೀವನದಲ್ಲಿ ಯಶಸ್ಸು ಗಳಿಸುವುದಷ್ಟೇ ಜೀವನದ ಅಂತಿಮ ಗುರಿಯಲ್ಲ. ಆರೋಗ್ಯ, ಶಾಂತಿ, ಭದ್ರತೆ ಮತ್ತು ಸಂತೋಷದಿಂದ ಕೂಡಿದ ಸಮಾಜದ ನಿರ್ಮಾಣಕ್ಕೂ ನಮ್ಮ ಕೊಡುಗೆ ಇರಬೇಕು. ನಾವು ಗಳಿಸುವ ಶಿಕ್ಷಣ, ಜ್ಞಾನವು ಮಾನವೀಯ ಮೌಲ್ಯಗಳೊಂದಿಗೆ ಬೆಸೆದು ಅದು ಸಮಾಜಕ್ಕೆ ಉಪಯುಕ್ತವಾಗುವಂತಾಗಬೇಕು. ಸದಾ ಕಲಿಯುವ ಮನೋಭಾವ, ಪರಿಶ್ರಮ, ಕುತೂಹಲ, ಪ್ರಶ್ನಿಸುವ ಧೈರ್ಯ ಮತ್ತು ಸಕಾರಾತ್ಮಕ ಚಿಂತನೆ ನಮ್ಮ ಯಶಸ್ಸಿನ ಮಾರ್ಗವಾಗಿದೆ ಎಂದು ನೆಹರೂ ವಿವಿಯ ವಿಶ್ರಾಂತ ಕುಲಪತಿ, ವಿವಿ ಧನಸಹಾಯ ಆಯೋಗದ (ಯುಜಿಸಿ) ಮಾಜಿ ಅಧ್ಯಕ್ಷರಾದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊ. ಜಗದೀಶ್ ಕುಮಾರ್ ಮಾಮಿಡಾಲ ಅವರು ಹೇಳಿದರು.ಅವರು ದೇರಳಕಟ್ಟೆಯ ಯೆನೆಪೋಯ ವಿಶ್ವವಿದ್ಯಾಲಯದ ಯೆಂಡೋರೆನ್ಸ್ ಸಭಾಂಗಣದಲ್ಲಿ ಶನಿವಾರ ನಡೆದ ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಿದರು.
ದೇಶದ ಭವಿಷ್ಯದ ಪೀಳಿಗೆಯನ್ನು ರೂಪಿಸುವಲ್ಲಿ ಶಿಕ್ಷಣ ಸಂಸ್ಥೆಗಳು ವಹಿಸುವ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು. ಯೆನೆಪೋಯ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಎಸ್ ಎಸ್ ಇನ್ನೋವೇಶನ್ಸ್ ಇಂಟರ್ ನ್ಯಾಷನಲ್ ಇದರ ಸ್ಥಾಪಕಾಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಡಾ. ಸುಧೀರ್ ಶ್ರೀವಾಸ್ತವ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ನಾವೀನ್ಯತೆ, ಗುಣಮಟ್ಟದ ಚಿಕಿತ್ಸೆ ಹಾಗೂ ಮಾನವೀಯ ಕಾಳಜಿಗೆ ಆದ್ಯತೆ ನೀಡುವ ಮೂಲಕ ಪ್ರತಿಯೊಬ್ಬ ರೋಗಿಗೂ ಅತ್ಯುತ್ತಮ ಆರೋಗ್ಯ ಸೇವೆ ತಲುಪಿಸುವುದು ನಮ್ಮ ಗುರಿಯಾಗಬೇಕು ಎಂದರು.
ಕುಲಪತಿಗಳಾದ ಪ್ರೊ.ಕೆ.ಎಸ್ ಗಂಗಾಧರ ಸೋಮಯಾಜಿ ಅವರು ವಿಶ್ವವಿದ್ಯಾಲಯದ ವರದಿ ಮಂಡಿಸಿದರು. ಕಾರ್ಯಕ್ರಮದಲ್ಲಿ ಪರೀಕ್ಷಾ ನಿಯಂತ್ರಣಾಧಿಕಾರಿಗಳಾದ ಡಾ.ಬಿ.ಟಿ.ನಂದೀಶ್, ಕುಲಸಚಿವರಾದ ಡಾ.ಅಶ್ವಿನ್ ದತ್ ಆರ್, ಪರೀಕ್ಷಾ ನಿಯಂತ್ರಕರಾದ ಡಾ. ಬಿ.ಟಿ. ನಂದೀಶ್, ಕುಲಸಚಿವರಾದ ಡಾ. ಆರ್. ಅಶ್ವಿನಿ ದತ್, ಝುಲೇಖ ಇನ್ಸ್ಟಿಟ್ಯೂಟ್ ಆಫ್ ಅಂಕೋಲಜಿ ನಿರ್ದೇಶಕ ಡಾ. ವಿಜಯ್ ಕುಮಾರ್, ಟ್ರಸ್ಟ್ ಕಾರ್ಯದರ್ಶಿ ಡಾ. ಅಖ್ತರ್ ಹುಸ್ಸೈನ್ , ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ವೇದಪ್ರಕಾಶ್ ಮಿಶ್ರಾ , ಡಾ. ಟಿ. ವಿ ಕಟ್ಟಿಮನಿ, ಡಾ. ರಾಮಮೂರ್ತಿ ನಾಯ್ಡು , ಜಾವೇದ್ ಅಬ್ದುಲ್ಲಾ , ಡಾ. ಹಬೀಬ್ ರೆಹಮಾನ್ ಉಪಸ್ಥಿತರಿದ್ದರು.ಚಿನ್ನದ ಪದಕ ವಿಜೇತರುವೈದ್ಯಕೀಯ ವಿಭಾಗದಲ್ಲಿ ಅಥ್ಮಿಕಾ ನಾಯರ್, ನರ್ಸಿಂಗ್ ವಿಭಾಗದಲ್ಲಿ ಹಸ್ನಾ ಟಿ., ನ್ಯೂರೋಸೈನ್ಸ್ ತಂತ್ರಜ್ಞಾನ ವಿಭಾಗದಲ್ಲಿ ನಿಖಿತಾ ಘೋಷ್, ಫಿಸಿಯೋಥೆರಪಿ ವಿಭಾಗದಲ್ಲಿ ಸುಹೈನಾ ಆಯಿಷಾ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮಷಿನ್ ಲರ್ನಿಂಗ್, ರೊಬೊಟಿಕ್ಸ್ ಮತ್ತು ಐಒಟಿ ಒಳಗೊಂಡ ಬಿಸಿಎ ವಿಭಾಗದಲ್ಲಿ ಆದಿತ್ಯ ರಾಮದಾಸ್, ಬಿಸಿನೆಸ್ ಅನಾಲಿಟಿಕ್ಸ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ವಿಭಾಗದ ಬಿಬಿಎ ಕೋರ್ಸ್ನಲ್ಲಿ ಉಮ್ಮುನೂಹಾ ಎಚ್.ಎ., ಮನೋವಿಜ್ಞಾನ ಮತ್ತು ಕೌನ್ಸೆಲಿಂಗ್ ವಿಭಾಗದಲ್ಲಿ ನಂದನಾ ಎಂ.ಪಿ., ಫಾರ್ಮಸಿ ವಿಭಾಗದಲ್ಲಿ ಮೊಹಮ್ಮದ್ ಜಮ್ಶೀರ್, ಆಯುರ್ವೇದ ವಿಭಾಗದಲ್ಲಿ ಮೇಖಾ ಬೆನ್ನಿ, ಹೋಮಿಯೋಪಥಿ ವಿಭಾಗದಲ್ಲಿ ವಿಸ್ಮಯಾ ಯು.ಎಸ್. ಹಾಗೂ ನ್ಯಾಚುರೋಪಥಿ ವಿಭಾಗದಲ್ಲಿ ಮೊಹ್ವೇಶಾ ಮೊಹಮ್ಮದ್ ಚಿನ್ನದ ಪದಕವನ್ನು ಪಡೆದುಕೊಂಡರು.