ಕನ್ನಡಪ್ರಭ ವಾರ್ತೆ ಮೈಸೂರು
ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಎನ್ಎಸ್ಎಸ್ ಘಟವರು ಬಸವನಹಳ್ಳಿ (ಗದ್ದಿಗೆ) ಗ್ರಾಮದಲ್ಲಿ ಆಯೋಜಿಸಿದ್ದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಜನರಲ್ಲಿ ಗೆಲುವು ಒಂದೇ ಮಾನದಂಡ ಎಂದು ಕೆಲವು ಪೋಷಕರು ಬಯಸುತ್ತಿದ್ದಾರೆ. ಗೆಲುವು ಕ್ಷಣಿಕವಾದ ಮನೋಲ್ಲಾಸ ಮತ್ತು ಸಂತೋಷವನ್ನು ನೀಡುತ್ತದೆ. ಆದರೆ ಗೆಲ್ಲುವ ಹಂತದಲ್ಲಿ ಸಾವಿರಾರು ಪ್ರಕ್ರಿಯೆಯನ್ನು ಆನಂದಿಸುವುದನ್ನು ಯುವ ಜನತೆ ಮತ್ತು ಪೋಷಕರು ಮರೆತಿದ್ದಾರೆ ಎಂದರು.
ಮಕ್ಕಳಿಗೆ ಕೂಡು ಕುಟುಂಬದ ಪರಿಕಲ್ಪನೆ ಮೂಡುವಂತೆ ಪೋಷಕರು ನಡೆದುಕೊಳ್ಳಬೇಕು. ಗುರು ಹಿರಿಯರಲ್ಲಿ ಭಯ, ಭಕ್ತಿ ಮತ್ತು ವಿಧೇಯತೆಯಿಂದ ಇರಬೇಕೆಂದು ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ರೂಡಿ ಮಾಡಬೇಕು. ಯುವ ಸಮುದಾಯ ಸಾಧ್ಯವಾದಷ್ಟು ಹೃದಯ ವೈಶಾಲ್ಯತೆ ಹೊಂದುವ ಕಡೆ ಗಮನಹರಿಸಬೇಕು. ತೀರಾ ವೈಯಕ್ತಿಕ ಮತ್ತು ಕೌಟುಂಬಿಕ ನೆಲೆಯನ್ನು ಮೀರಿ ಸಾಮಾಜಿಕ ನೆಲೆಯಲ್ಲಿ ಬದುಕುವುದನ್ನು ಕಲಿಯಬೇಕು ಎಂದು ಅವರು ಹೇಳಿದರು.ಎನ್ಎಸ್ಎಸ್ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಯುವ ಸಮುದಾಯದ ಪಾತ್ರ ಅತಿ ಮುಖ್ಯ. ನಾಡಿನ ಕಟ್ಟ ಕಡೆಯ ಗ್ರಾಮವನ್ನು ಕೂಡ ನಗರದಷ್ಟೇ ಮುಖ್ಯವಾಗಿ ಮೇಲ್ಪಂಕ್ತಿಗೆ ತರಲು ಶ್ರಮಿಸಬೇಕು. ಹೆಣ್ಣು ಮಕ್ಕಳು ಪುರುಷನಷ್ಟೇ ಸಮರ್ಥವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಗ್ರಾಮಿಣ ಪ್ರದೇಶದ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ಅವರು ಸಲಹೆ ನೀಡಿದರು.
ಚಲನಚಿತ್ರ ನಿರ್ದೇಶಕ ಎನ್. ತೇಜಸ್ವಿ, ಜನಪದ ಕಲಾವಿದ ಅಮ್ಮ ರಾಮಚಂದ್ರ, ಜೆಎಸ್ಎಸ್ ಕಾಲೇಜು ಪ್ರಾಂಶುಪಾಲೆ ಡಾ.ಎಸ್. ಪ್ರತಿಭಾ, ಚಲನಚಿತ್ರ ಕಲಾವಿದ ಎನ್. ಸ್ವಾಮಿ, ಬಸವನಹಳ್ಳಿ ಶಾಲೆಯ ಮುಖ್ಯ ಶಿಕ್ಷಕಿ ಸವಿತಾ, ಗ್ರಾಮಸ್ಥರಾದ ಎನ್. ಕುಂಟೇಗೌಡ, ಸ್ವಾಮಿಗೌಡ ಇದ್ದರು.