ಮಹಿಳೆಯರಿಗೆ ಸಮಾನತೆ ಕಲ್ಪಿಸಿದ ಚಂದ್ರಶೇಖರಶ್ರೀ

KannadaprabhaNewsNetwork |  
Published : Jun 12, 2025, 02:22 AM IST
ಪೋಟೊ11ಕೆಎಸಟಿ1: ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮದಲ್ಲಿ ನಡೆದ ಶಶಿಧರ ಮಹಾಸ್ವಾಮಿಗಳ ನೂತನ ಶಿಲಾ ಮೂರ್ತಿಯ ಪ್ರತಿಷ್ಠಾಪನೆಯ ವೇದಿಕೆ ಕಾರ್ಯಕ್ರಮವನ್ನು ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ ಉದ್ಘಾಟಿಸಿದರು. | Kannada Prabha

ಸಾರಾಂಶ

ಚಂದ್ರಶೇಖರ ಶ್ರೀಗಳು ಭಕ್ತಿಯ ಜತೆಗೆ ಸಾಮಾಜಿಕ ಹಾಗೂ ಆರೋಗ್ಯ ಸೇವೆ ಮಾಡುತ್ತಿದ್ದರು. ಅಂದಿನ ಕಾಲದಲ್ಲಿಯೇ ಕೊರೋನಾ ರೋಗದ ಕುರಿತು ಪುಸ್ತಕದಲ್ಲಿ ಉಲ್ಲೇಖಿಸಿ ಭವಿಷ್ಯ ಉಳ್ಳವರಾಗಿದ್ದರು.

ಕುಷ್ಟಗಿ:

ಡಾ. ಚಂದ್ರಶೇಖರ ಸ್ವಾಮೀಜಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಮಾನತೆ ಕೊಡಲು ಮಹಿಳೆಯರಿಗೆ ಒಂದು ದಿನದ ರಥೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಭಾಗ್ಯ ಕರುಣಿಸಿದ್ದರು ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.

ತಾಲೂಕಿನ ಮುದೇನೂರು ಗ್ರಾಮದಲ್ಲಿ ಡಾ. ಚಂದ್ರಶೇಖರ ಶ್ರೀಗಳ 54ನೇ ಹಾಗೂ ಶಶಿಧರ ಶ್ರೀಗಳ 7ನೇ ಪುಣ್ಯಸ್ಮರಣೋತ್ಸವ ಹಾಗೂ ಶಶಿಧರ ಶ್ರೀಗಳ ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಚಂದ್ರಶೇಖರ ಶ್ರೀಗಳು ಭಕ್ತಿಯ ಜತೆಗೆ ಸಾಮಾಜಿಕ ಹಾಗೂ ಆರೋಗ್ಯ ಸೇವೆ ಮಾಡುತ್ತಿದ್ದರು. ಅಂದಿನ ಕಾಲದಲ್ಲಿಯೇ ಕೊರೋನಾ ರೋಗದ ಕುರಿತು ಪುಸ್ತಕದಲ್ಲಿ ಉಲ್ಲೇಖಿಸಿ ಭವಿಷ್ಯ ಉಳ್ಳವರಾಗಿದ್ದರು ಎಂದ ಅವರು, ಶ್ರೀಗಳ ಕುರಿತು ಪುಸ್ತಕ ರಚಿಸುವಂತೆ ಪ್ರಾಚಾರ್ಯ ಡಾ. ಎಸ್‌.ವಿ. ಡಾಣಿ ಹಾಗೂ ಜೀವನಸಾಬ ಬಿನ್ನಾಳ ಅವರಿಗೆ ತಿಳಿಸಿದರು.

ನಮ್ಮ ಆಲೋಚನೆಗಳು ಶುದ್ಧವಾಗಿದ್ದರೇ ದೇವರು ಎಲ್ಲವನ್ನು ಕೊಡುತ್ತಾನೆ. ನಾವು ಜೀವಿಸುವ ಜತೆಗೆ ಸಂಬಂಧಗಳನ್ನು ಜೀವಂತವಾಗಿಟ್ಟುಕೊಳ್ಳಬೇಕು ಎಂದರು.

ಪ್ರಾಚಾರ್ಯ ಡಾ. ಎಸ್‌.ವಿ. ಡಾಣಿ ಮಾತನಾಡಿ, ಶ್ರೀಗಳು ಆಯುರ್ವೇದ ವೈದ್ಯರಾಗಿದ್ದುಕೊಂಡೆ ಮಠವನ್ನು ಮುನ್ನಡೆಸಿಕೊಂಡು ಹೋಗಿದ್ದರು. ನಂತರ ಅವರ ಶಿಷ್ಯರಾಗಿ ಶಶಿಧರ ಶ್ರೀಗಳು ಪ್ರೋಪೆಸರ್‌ ಇದ್ದರು ಎಂದು ತಿಳಿಸಿದರು.

ಎಸ್‌ವಿಸಿ ಸಂಸ್ಥೆಯ ಅಧ್ಯಕ್ಷ ಸಿ.ವಿ. ಚಂದ್ರಶೇಖರ ಮಾತನಾಡಿ, ಶ್ರೀಗಳ ಸೇವೆ ಅನನ್ಯವಾಗಿದೆ ಎಂದರು. ಶಾಸಕ ದೊಡ್ಡನಗೌಡ ಪಾಟೀಲ, ಕಾಡಾ ನಿಗಮ ಅಧ್ಯಕ್ಷ ಹಸನಸಾಬ್‌ ದೋಟಿಹಾಳ ಸೇರಿದಂತೆ ಅನೇಕರು ಮಾತನಾಡಿದರು. ಹೆಬ್ಬಾಳ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಚನ್ನಮಲ್ಲ ಸ್ವಾಮೀಜಿ, ಚಂದ್ರಶೇಖರ ದೇವರು, ನೀಲಕಂಠಯ್ಯ ತಾತನವರು, ಮಹಾಂತಲಿಂಗ ಶಿವಾಚಾರ್ಯರು, ಮಹಾಂತ ಸ್ವಾಮೀಜಿ, ಗುರುಶಾಂತವೀರ ಸ್ವಾಮೀಜಿ, ಶಶಿಧರ ಶಾಸ್ತ್ರೀಗಳು, ಮಹೇಶ್ವರ ಹೊಸಮಠ, ಮಹೇಶ್ವರ ಸ್ವಾಮೀಜಿ, ಭುವನೇಶ್ವರ ತಾತನವರು ಸಾನ್ನಿಧ್ಯ ವಹಿಸಿದ್ದರು.

ಈ ವೇಳೆ ಶೇಖರಗೌಡ ಮಾಲಿಪಾಟೀಲ, ಡಾ. ಬಸವರಾಜ ಕ್ಯಾವಟರ್, ದೇವೇಂದ್ರಪ್ಪ ಬಳೂಟಗಿ, ಕೆ. ಮಹೇಶ, ಮಹಾಂತೇಶ ಬಾದಾಮಿ, ಲಾಡಸಾಬ್‌ ಕೊಳ್ಳಿ, ಚಂದ್ರಶೇಖರಪ್ಪ ಹೊಸಮನಿ, ವಿಶ್ವನಾಥ ಶಾಸ್ತ್ರೀಮಠ, ಮನೋಹರಸ್ವಾಮಿ ಹಿರೇಮಠ, ಚಂದ್ರಶೇಖರ ಕುಷ್ಟಗಿ, ಬಾಬು ಭೂಸರ, ಭೀಮನಗೌಡ ಬಿರಾದಾರ, ವೀರಣ್ಣ ಕಮತರ, ಶಿವಪುತ್ರಯ್ಯ ಗಂಗಾವತಿ ಸೇರಿದಂತೆ ಮುದೇನೂರು ಸೇರಿದಂತೆ ಶ್ರೀಗಳ ಭಕ್ತರು ಅನೇಕ ಗ್ರಾಮಸ್ಥರು ಇದ್ದರು.

ಪ್ರತಿಷ್ಠಾಪನೆ:

ನಂದವಾಡಗಿ ಮಹಾಂತಲಿಂಗ ಶ್ರೀಗಳ ನೇತೃತ್ವದಲ್ಲಿ ಶಶಿಧರ ಶ್ರೀಗಳ ಶಿಲಾಮೂರ್ತಿಗೆ ಸಂಸ್ಕಾರ ಹಾಗೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು. ಉಭಯಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಮಧ್ಯಾಹ್ನ ಅನ್ನಪ್ರಸಾದ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ