ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಗಾಂಧಿಭವನದಲ್ಲಿ ಭಾರತ ಯಾತ್ರಾ ಟ್ರಸ್ಟ್ ಆಯೋಜಿಸಿದ್ದ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ 100 ನೇ ಜನ್ಮದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತಿ, ಧರ್ಮ, ಮೇಲು, ಕೀಳು ನೋಡದೆ ಮಾನವೀಯ ಗುಣಗಳನ್ನು ತುಂಬಿಕೊಂಡು, ತನ್ನ ಕಾರ್ಯಕರ್ತರನ್ನು ಸ್ನೇಹಿತರು, ಮನೆ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಈ ಇಬ್ಬರು ಮಹಾ ನಾಯಕರ ಗುಣಗಳನ್ನು ಇಂದಿನ ಯಾವ ರಾಜಕಾರಣಿಗಳಲ್ಲೂ ಕಾಣುತ್ತಿಲ್ಲ. ಮಾಜಿ ಪ್ರಧಾನಿ ಚಂದ್ರಶೇಖರ್ ಸ್ವಲ್ಪ ಮುಂಗೋಪಿಗಳಾದರೂ ಹೃದಯವಂತರಾಗಿದ್ದರು, ಸಮಾಜವಾದವನ್ನು ನಂಬಿ ಬದುಕಿದ ಈ ಧೀಮಂತ ನಾಯಕರಾಗಿದ್ದರು, ಇವರ ಗುಣಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದರು.
ಯೋಜನಾ ಆಯೋಗದ ಉಪಾಧ್ಯಕ್ಷ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ, 80ರ ದಶಕದಲ್ಲಿ ಕಾರ್ಯಕರ್ತರು ಹಾಗೂ ಮುಂಚೂಣಿ ನಾಯಕರ ಸಂಬಂಧ ತಂದೆ ಮಕ್ಕಳು, ಇನ್ನೂ ಸ್ವಲ್ಪ ಮುಂದುವರಿದು ಸ್ನೇಹಿತರಂತೆ ಕಾಣುತ್ತಿದ್ದರು. ಆದರೆ, ಇಂದು ಕಾರ್ಯಕರ್ತರು ಹಾಗೂ ಮುಂಚೂಣಿ ನಾಯಕರ ಸಂಬಂಧ ಮಾಲೀಕರು ಹಾಗೂ ಗುಲಾಮ ಸಂಬಂಧದಂತೆ ಎಲ್ಲ ಪಕ್ಷಗಳಲ್ಲೂ ಪರಿಸ್ಥಿತಿ ಇದೆ ಎಂದರು.1983ರಲ್ಲಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಭಾರತ್ ಯಾತ್ರಾ ಅಧ್ಯಕ್ಷರಾಗಿದ್ದ ಡಾ.ಸುಧೀಂದ್ರ ಬಡೋರಿಯಾ ಮಾತನಾಡಿ, ಚಂದ್ರಶೇಖರ್ ಅವರಿಗೆ ಕರ್ನಾಟಕ ಕಂಡರೆ ತುಂಬಾ ಪ್ರೀತಿ, ಗೌರವ ಇತ್ತು. ಇಲ್ಲಿನ ಜನರ ಗುಣ, ಸ್ವಭಾವವನ್ನು ತುಂಬಾ ಕೊಂಡಾಡಿದ್ದಾರೆ ಎಂದು ಹೇಳಿದರು.