ಕನ್ನಡಪ್ರಭ ವಾರ್ತೆ ಚಾಮರಾಜನಗರಸಮಾಜದಲ್ಲಿ ಬದಲಾವಣೆಯಾಗಬೇಕೆಂದರೆ ಅದು ಮುಹಾನ್ ಶಕ್ತಿಯಾಗಿರುವ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಹೇಳಿದರು.ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಬುಧವಾರ ನಡೆದ ಸಾಂಸ್ಕೃತಿಕ ಹಾಗೂ ಕ್ರೀಡಾವೇದಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅದನ್ನು ಪಡೆಯಬೇಕಾದರೆ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಕಬೇಕು ಎಂದರು.ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ರೈಲಿನಲ್ಲಿ ಪ್ರಯಾಣಮಾಡುವ ವೇಳೆ ಪ್ರಯಾಣಿಕರು ಓದಿ ಇಟ್ಟಿದ್ದ ಪತ್ರಿಕೆಗಳನ್ನು ಓದುವ ಮೂಲಕ ರಾಷ್ಟ್ರಪತಿಯಂತಹ ಉನ್ನತ ಹುದ್ದೇಗೇರಿದರು. ನಿದ್ದೆ ಮಾಡುವಾಗ ಕಾಣುವ ಕನಸು ಕನಸಲ್ಲ. ನಿದ್ರೆ ಬರದಂತೆ ಮಾಡುವುದೇ ಕನಸು ಅದಕ್ಕಾಗಿಯೇ ಸಾಧನೆ ಮಾಡುವಂತಹ ದೊಡ್ಡ ಕನಸನ್ನು ಕಾಣಬೇಕು ಎಂಬುದು ಕಲಾಂ ಅವರ ಆಲೋಚನೆಯಾಗಿತ್ತು ಎಂದರು.ಸಾಹಿತ್ಯ, ಸಂಗೀತ, ಶಿಕ್ಷಣ, ರಂಗಭೂಮಿ ಯಾವುದೇ ಕ್ಷೇತ್ರದಲ್ಲಾದರೂ, ಸಾಧನೆ ಮಾಡಬೇಕಾದರೆ ವಿದ್ಯಾರ್ಥಿಗಳಿಗೆ ಒಂದು ನಿಗಧಿತ ಗುರಿ ಇರಬೇಕು, ಯಾವುದಾದರೂ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯಾಗುವಂತಿದ್ದರೆ, ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.ಅಂತಾರಾಷ್ಟ್ರೀಯ ಹಾಕಿಪಟು ಎಂ,ಎನ್.ನೀಲನ್ ಮಾತನಾಡಿ, ಕ್ರೀಡೆ ಶಿಸ್ತಿನ ಜತೆಗೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ದಿನಕ್ಕೆ ಅರ್ಧಗಂಟೆಯಾದರೂ ವಾಕಿಂಗ್ ಜತೆಗೆ ಕ್ರೀಡೆಗಳಿಗೆ ಮೀಸಲಿಡಬೇಕು ಎಂದರು.ಈಗ ಖೇಲೋ ಇಂಡಿಯಾ ಆರಂಭವಾಗಿದ್ದು, ಕ್ರೀಡಾಕೋಟದಲ್ಲಿ ಸರ್ಕಾರಿ ಉದ್ಯೋಗವಕಾಶ ಲಭ್ಯವಿದೆ. ಓದಿನ ಜತೆಗೂ ಕ್ರೀಡೆಗಳಿಗೂ ಸಮಾನ ಅವಕಾಶ ನೀಡಬೇಕು ನಿಮ್ಮ ಏಳಿಗೆ ಬಯಸುವ ಗುರು ಹಿರಿಯರನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.ಸಮಾರಂಭ ಉದ್ಘಾಟಿಸಿದ ಜಿಲ್ಲಾ ಉದ್ಯೋಗಾಧಿಕಾರಿ ಮಹಮದ್ ಅಕ್ಬರ್ ಮಾತನಾಡಿ, ಮಾನವತೆಯ ಶಿಕ್ಷಣ ಇಂದು ಅಗತ್ಯವಾಗಿ ಬೇಕಾಗಿದ್ದು, ಕಾಲೇಜಿನಲ್ಲಿ ಉದ್ಘಾಟನೆಯಾಗಿರುವ ಸಾಂಸ್ಕೃತಿಕ ಹಾಗೂ ಕ್ರೀಡಾವೇದಿಕೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.ಸಮಾರಂಭದಲ್ಲಿ ಅರಳೀಕಟ್ಟೆ ಮಹದೇವಯ್ಯ, ಮಗಂ ರೇಣುಕಾಪ್ರಸನ್ನ, ಬಸವರಾಜು ಅವರ ದತ್ತಿಯಲ್ಲಿ ವಿವಿಧ ವಿಷಯಗಳಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿನಿಯರಿಗೆ ನಗದುಬಹುಮಾನ ವಿತರಿಸಲಾಯಿತು.ಕಾಲೇಜಿನ ಹಿರಿಯ ವಿದ್ಯಾರ್ಥಿನಿ, ಮೈಸೂರು ಮಹಾಜನ ಪ್ರಥಮದರ್ಜೆ ಕಾಲೇಜಿನ ಸಹಪ್ರಾಧ್ಯಾಪಕಿ ಡಾ.ಬಿ.ವಿನೋದಮ್ಮ ಮಾತನಾಡಿದರು.ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಂಸ್ಕೃತಿಕ ಹಾಗೂ ಕ್ರೀಡಾವೇದಿಕೆಗಳ ಸಮಾರಂಭ ಏರ್ಪಡಿಸಿ, ಸಾಧಕರನ್ನು ಕರೆಯಿಸುವುದು ನಿಮಗೆ ಸ್ಪೂರ್ತಿಯಾಗಲಿ ಎಂದು, 1967ರಲ್ಲಿ ಪ್ರಾರಂಭವಾದ ಈ ಕಾಲೇಜಿನಲ್ಲಿ ಓದಿ ಹಲವರು ಸಾಧನೆ ಮಾಡಿದ್ದು ಇದು ನಿಮಗೆ ಮಾರ್ಗದರ್ಶನವಾಗಬೇಕು ಎಂದರು.ಸಾಂಸ್ಕೃತಿಕ ಸಮಿತಿ ಸಂಚಾಲಕಿ ಜಮುನ, ಕ್ರೀಡಾಸಮಿತಿ ಸಂಚಾಲಕ ಉಮೇಶ್, ವಿದ್ಯಾರ್ಥಿಸಂಘದ ಅಧ್ಯಕ್ಷೆ ಅನುಶ್ರೀ, ಕ್ರೀಡಾಕಾರ್ಯದರ್ಶಿ ಸೌಂದರ್ಯ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿನಿಯರು ಹಾಜರಿದ್ದರು.-----11ಸಿಎಚ್‌ಎನ್54ಚಾಮರಾಜನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಬುಧವಾರ ನಡೆದ ಸಾಂಸ್ಕೃತಿಕ ಹಾಗೂ ಕ್ರೀಡಾವೇದಿಕೆಗಳ ಸಮಾರಂಭವನ್ನು ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಉದ್ಘಾಟಿಸಿದರು.-----11ಸಿಎಚ್‌ಎನ್55ಚಾಮರಾಜನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಬುಧವಾರ ನಡೆದ ಸಾಂಸ್ಕೃತಿಕ ಹಾಗೂ ಕ್ರೀಡಾವೇದಿಕೆಗಳ ಸಮಾರಂಭದಲ್ಲಿ ವಿವಿಧ ದತ್ತಿಗಳಲ್ಲಿ ವಿವಿಧ ವಿಷಯಗಳಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ವಿತರಿಸಲಾಯಿತು.-----------