ಹಲಸೂರು ಕೆರೆ ಕಲ್ಯಾಣಿಯ ಸುತ್ತ ರಸ್ತೆಗಳ ಸಂಚಾರ ವ್ಯವಸ್ಥೆ ಬದಲು : ಪರ್ಯಾಯ ವ್ಯವಸ್ಥೆ

KannadaprabhaNewsNetwork |  
Published : Sep 06, 2024, 01:54 AM ISTUpdated : Sep 06, 2024, 04:56 AM IST
ಟ್ರಾಫಿಕ್‌ | Kannada Prabha

ಸಾರಾಂಶ

ಮೂರು ದಿನ 40 ಸಾವಿರಕ್ಕೂ ಅಧಿಕ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯುವ ಹಲಸೂರು ಕೆರೆಯ ಸುತ್ತ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

 ಬೆಂಗಳೂರು : ಗಣೇಶ ಹಬ್ಬದ ಪ್ರಯುಕ್ತ ನಗರದ ಹಲಸೂರು ಕೆರೆ ಕಲ್ಯಾಣಿಯಲ್ಲಿ ಸೆ.7ರಿಂದ 9ರ ವರೆಗೆ ವಿವಿಧ ಪ್ರದೇಶಗಳ ಸುಮಾರು 40 ಸಾವಿರಕ್ಕೂ ಅಧಿಕ ಗಣೇಶಮೂರ್ತಿಗಳ ವಿಸರ್ಜನೆ ಜರುಗುವ ಹಿನ್ನೆಲೆಯಲ್ಲಿ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ನಗರ ಸಂಚಾರ ಪೊಲೀಸರು ಈ ಮೂರು ದಿನ ಸಂಜೆ 4 ಗಂಟೆಯಿಂದ ಮುಂಜಾನೆ 4 ಗಂಟೆವರೆಗೆ ವಾಹನಗಳ ಸಂಚಾರದ ಮಾರ್ಗಗಳಲ್ಲಿ ಕೆಲ ಮಾರ್ಪಾಡು ಮಾಡಿದ್ದಾರೆ.

ಎಲ್ಲೆಲ್ಲಿ ಸಂಚಾರ ನಿರ್ಬಂಧ:

*ಕೆನ್ಸಿಂಗ್‌ಟನ್-ಮರ್ಫೀ ರಸ್ತೆ ಜಂಕ್ಷನ್ ಕಡೆಯಿಂದ ಎಂ.ಇ.ಜಿ. ಮೂಲಕ ಹಲಸೂರು ಲೇಕ್ ಕಡೆಗೆ ಕೆನ್ಸಿಂಗ್‌ಟನ್ ರಸ್ತೆಯಲ್ಲಿ ದ್ವಿಮುಖ ಸಂಚಾರ ತಾತ್ಕಾಲಿಕ ನಿರ್ಬಂಧ. ಎಂಇಜಿ ಕಡೆಯಿಂದ ಕೆನ್ಸಿಂಗ್‌ಟನ್-ಮರ್ಫೀ ರಸ್ತೆ ಜಂಕ್ಷನ್ ಕಡೆಗೆ ಏಕಮುಖ ಸಂಚಾರಕ್ಕೆ ಮಾತ್ರ ಅನುವು

*ತಿರುವಳ್ಳವ‌ರ್ ಪ್ರತಿಮೆ ಜಂಕ್ಷನ್-ಅಣ್ಣಾಸ್ವಾಮಿ ಮೊದಲಿಯಾರ್ ರಸ್ತೆ ಕಡೆಯಿಂದ ಆರ್.ಬಿ.ಐ. ಜಂಕ್ಷನ್ ಮುಖಾಂತರ ಹಲಸೂರು ಕೆರೆ ಕಡೆಗೆ ಅಣ್ಣಾಸ್ವಾಮಿ ಮೊದಲಿಯಾ ರಸ್ತೆಯಲ್ಲಿ ದ್ವಿಮುಖ ಸಂಚಾರ ತಾತ್ಕಾಲಿಕ ನಿರ್ಬಂಧ. ಹಲಸೂರು ಲೇಕ್ ಕಡೆಯಿಂದ ತಿರುವಳ್ಳವರ್ ಪ್ರತಿಮೆ ಜಂಕ್ಷನ್ ಕಡೆಗೆ ಏಕಮುಖ ಸಂಚಾರಕ್ಕೆ ಮಾತ್ರ ಅನುವು

ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ

*ಕೆನ್ಸಿಂಗ್‌ಟನ್‌ ರಸ್ತೆ ಕಡೆಯಿಂದ ಎಂ.ಇ.ಜಿ ಮೂಲಕ-ಹಲಸೂರು ಲೇಕ್ ಕಡೆಗೆ ಹೋಗುವ ವಾಹನಗಳು ಕೆನ್ಸಿಂಗ್ಟನ್‌ನಿಂದ ಗುರುದ್ವಾರ ಜಂಕ್ಷನ್ ಬಲ ತಿರುವು ಪಡೆದು ಗಂಗಾಧರ ಚೆಟ್ಟಿ ರಸ್ತೆ-ಡಿಕನ್ಸನ್ ರಸ್ತೆಗೆ ಬಲ ತಿರುವು ಪಡೆದು ಸೇಂಟ್‌ ಜಾನ್ಸ್ ರಸ್ತೆ ಮುಖಾಂತರ ಲಾವಣ್ಯ ಥಿಯೇಟರ್ ಜಂಕ್ಷನ್-ನಾಗಾ ಜಂಕ್ಷನ್ ಮುಖಾಂತರ ಪುಲಕೇಶಿನಗರ - ಪ್ರಾಮಿನೇಡ್ ರಸ್ತೆ-ವೀರ ರಸ್ತೆ ಅಥವಾ ಹಲಸೂರು ಕೆರೆ ಕಡೆಗೆ ಹೋಗಬಹುದು.

*ತಿರುವಳ್ಳವ‌ರ್ ಪ್ರತಿಮೆ ಜಂಕ್ಷನ್-ಅಣ್ಣಸ್ವಾಮಿ ಮೊದಲಿಯಾರ್ ರಸ್ತೆ ಕಡೆಯಿಂದ ಹಲಸೂರು ಕೆರೆ ಕಡೆಗೆ ಹೋಗುವ ವಾಹನಗಳು ಗಂಗಾಧರ್ ಚೆಟ್ಟಿ ರಸ್ತೆಯ ಮುಖಾಂತರ ಆರ್.ಬಿ.ಎನ್.ಎಂ.ಎಸ್. ಹತ್ತಿರ ಎಡತಿರುವು ಪಡೆದು ಡಿಕನ್ಸನ್‌ ರಸ್ತೆಯ ಮುಖಾಂತರ ಸೇಂಟ್ ಜಾನ್ಸ್ ರಸ್ತೆ ತಲುಪಿ ಸೇಂಟ್ ಜಾನ್ಸ್ ರಸ್ತೆ ಮುಖಾಂತರ ಲಾವಣ್ಯ ಥಿಯೇಟರ್ ಜಂಕ್ಷನ್- ನಾಗಾ ಜಂಕ್ಷನ್ ಮುಖಾಂತರ ಪುಲಕೇಶಿನಗರ ಮಿಬ್ರಸ್ ರಸ್ತೆ ಕಡೆಗೆ ಅಥವಾ ಹಲಸೂರು ಕೆರೆ ಕಡೆಗೆ ಸಾಗಬಹುದು.

ಎಲ್ಲೆಲ್ಲಿ ಪಾರ್ಕಿಂಗ್‌ ನಿರ್ಬಂಧ

ಹಲಸೂರು ಕೆರೆಯ ಮುಖ್ಯದ್ವಾರ ಮತ್ತು ಸುತ್ತಲೂ ಇರುವ ಕೆನ್ಸಿಂಗ್ಟನ್ ರಸ್ತೆ- ಅಣ್ಣಾಸ್ವಾಮಿ ಮೊದಲಿಯಾರ್ ರಸ್ತೆ-ಟ್ಯಾಂಕ್ ರಸ್ತೆಗಳಲ್ಲಿ ಈ ಮೂರು ದಿನ ಎಲ್ಲ ಮಾದರಿಯ ವಾಹನಗಳ ಪಾರ್ಕಿಂಗ್ ತಾತ್ಕಾಲಿಕ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಈ ತಾತ್ಕಾಲಿಕ ಸಂಚಾರ ಮಾರ್ಪಾಡುಗಳಿಗೆ ಸಹಕರಿಸಬೇಕು ಎಂದು ನಗರ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕುಲದೀಪ್‌ ಕುಮಾರ್ ಆರ್‌.ಜೈನ್‌ ಮನವಿ ಮಾಡಿದ್ದಾರೆ.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ