ಧಾರವಾಡ:
ಈ ಕುರಿತು ಬುಧವಾರ ಜಿಲ್ಲಾಧಿಕಾರಿ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿದ ಸಂಘಟನೆ ಮುಖಂಡರು, ಬೆಳೆ ವಿಮೆ ತುಂಬಲು ಹೋದ ರೈತರಿಗೆ ಹೊಸದಾದ ಪ್ರಕ್ರಿಯೆ ತುಂಬ ಗೊಂದಲ ಮೂಡಿಸಿದೆ. ಈ ಮೊದಲು ಬೆಳೆ ವಿಮೆ ತುಂಬಿಸಿಕೊಳ್ಳುತ್ತಿದ್ದ ಗ್ರಾಮ ಒನ್ ಕೇಂದ್ರಗಳ ಬದಲು ಬೆಳೆಸಾಲ ಪಡೆದ ಬ್ಯಾಂಕ್‌ಗಳಲ್ಲಿಯೇ ಬೆಳೆ ವಿಮೆ ತುಂಬಿಸಿಕೊಳ್ಳಲಾಗುತ್ತಿದೆ. ಇದು ರೈತರಿಗೆ ತೊಂದರೆಯಾಗಿದೆ. ಅಲ್ಲದೇ, ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಬೆಳೆಸಾಲ ಬರುವ ಹಿನ್ನೆಲೆಯಲ್ಲಿ ವಾಣಿಜ್ಯ ಬೆಳೆಯ ಮೇಲೆಯೇ ಬೆಳೆಸಾಲ ನೀಡಲಾಗಿರುತ್ತದೆ. ಇದೀಗ ಸಮಸ್ಯೆ ಬಂದಿರುವುದು, ಬೆಳೆಸಾಲ ಪಡೆಯುವಾಗ ನಮೂದಾಗಿರುವ ಬೆಳೆಗಳಿಗೆ ಮಾತ್ರ ಬೆಳೆವಿಮೆ ತುಂಬಬೇಕು ಎಂಬುದು ರೈತರಿಗೆ ತಲೆನೋವಾಗಿದೆ. ಆದ್ದರಿಂದ ಈ ಮೊದಲಿನಂತೆ ಹೊಲಗಳಲ್ಲಿ ಯಾವ ಬೆಳೆ ಇರುತ್ತದೆಯೋ ಅದರ ಜಿಪಿಎಸ್ ಮಾಡುವ ಮೂಲಕ ಅದೇ ಬೆಳೆಗೆ ವಿಮೆ ತುಂಬಿಸಿಕೊಳ್ಳಬೇಕೆಂದು ರೈತ ಸೇನಾ ಕರ್ನಾಟಕ ರಾಜ್ಯ ವಕ್ತಾರ ಗುರು ರಾಯನಗೌಡರ ಆಗ್ರಹಿಸಿದರು.
ಈಗಾಗಲೇ ನವಲಗುಂದ, ಧಾರವಾಡ ಗ್ರಾಮೀಣ ಸೇರಿದಂತೆ ಜಿಲ್ಲೆಯ ಹಲವೆಡೆ ಮುಂಗಾರು ಬೆಳೆಗಳು ಒಣಗಿ ಹೋಗಿದ್ದು ರೈತರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ವಿಮೆ ಸಹ ಬರದಂತಾಗಿ ಮತ್ತಷ್ಟು ತೊಂದರೆಗೆ ಈಡಾಗುವುದು ಬೇಡ. ಬೆಳೆ ವಿಮೆ ತುಂಬಲು ಜು. 15 ಕೊನೆ ದಿನವಿದ್ದು ಈ ದಿನಾಂಕವನ್ನು ವಿಸ್ತರಿಸಬೇಕೆಂದು ಸಂಘಟನೆಯ ಟಿ.ಎಸ್. ಚವನಗೌಡ್ರ, ಶಿವರೆಡ್ಡಪ್ಪ ಹೊಸಮನಿ, ಜಿ.ಪಿ. ಕೆಂಚನಗೌಡರ, ಪ್ರಕಾಶ ಸವದತ್ತಿ, ಶಿವಪ್ಪ ತಡಹಾಳ, ಶಿವಪ್ಪ ಜಂತ್ರಿ ಆಗ್ರಹಿಸಿದರು.